ಮುಂಬಯಿ, ಫೆ.18: ದಿ.ಮಹಾರಾಷ್ಟ್ರ ಸ್ಟೇಟ್ ಕೋ.ಅಪರೇಟಿವ್ ಬ್ಯಾಂಕ್’ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ (ಮಹಾರಾಷ್ಟ್ರ ರಾಜ್ಯ ಸಹಕಾರಿ ಲೇವಾದೇವಿ ಮಂಡಳಿ ನಿಯಮಿತ) ವಾರ್ಷಿ ಕವಾಗಿ ಕೊಡಮಾಡುವ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಮತ್ತು ಗುಣಮಟ್ಟದ ಬ್ಯಾಂಕ್ ಸೇವಾ ಸ್ಪರ್ಧೆಯ 2014-2015ರ ಹಣಕಾಸು ಸಾಲಿನ `ಸರ್ವೋತ್ಕೃಷ್ಟ ಬ್ಯಾಂಕ್ ಪುರಸ್ಕಾರ’ ತುಳು-ಕನ್ನಡಿಗರ ಪ್ರತಿಷ್ಠಿತ ಆರ್ಥಿಕ ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಪಥಸಂಸ್ಥೆಗೆ ಪ್ರದಾನಿಸಿ ಗೌರವಿಸಿತು.

Bharat Bank Bank's Association Award-16

Bharat Bank Bankers Award - A1

Bharat Bank Bankers Award - A2

Bharat Bank Bankers Award - B4

Bharat Bank Bankers Award - C1

Bharat Bank Bank's Association Award-7

Bharat Bank Bank's Association Award-9

Bharat Bank Bank's Association Award-11

Bharat Bank Bank's Association Award-12

ಹದಿನಾಲ್ಕು ಸಾವಿರದ ಐನೂರು ಕೋಟಿ (14,500) ಮೊತ್ತಕ್ಕಿಂತ ಅಧಿಕ ಠೇವಣಿ ಹೊಂದಿದ ನೂರಾರು ಸಹಕಾರಿ ಬ್ಯಾಂಕುಗಳ ಪೈಕಿ ನಿರ್ಣಯಕರ ಪ್ರಕ್ರಿಯೆ ಪ್ರಕಾರ ನಡೆದ ಆಯ್ಕೆಯಂತೆ ಭಾರತ್ ಬ್ಯಾಂಕ್ ಪ್ರಪ್ರಥಮ ಸ್ಥಾನದೊಂದಿಗೆ `ಸರ್ವೊತ್ಕೃಷ್ಟ ಬ್ಯಾಂಕ್ ಪುರಸ್ಕಾರ’ಕ್ಕೆ ಭಾಜವಾಗಿದ್ದು, ಅಸೋಸಿಯೇಶನ್ನ ಇಪ್ಪತ್ತನೇ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಭಾರತ್ ಬ್ಯಾಂಕ್ಗೆ ಪುರಸ್ಕಾರ ಪ್ರದಾನಿಸಿ ಗೌರವಿಸಿತು.

ಇಂದಿಲ್ಲಿ ಗುರುವಾರ ದಾದರ್ ಪಶ್ಚಿಮದ ಶಿವಾಜಿಪಾರ್ಕ್ ಇಲ್ಲಿನ ಸ್ವಾತಂತ್ರ್ಯ ವೀರ್ ಸಾವರ್ಕರ್ ರಾಷ್ಟ್ರೀಯ ಸ್ಮಾರಕ ಸಭಾಗೃಹದಲ್ಲಿ ಆಯೋಜಿಸಲಾದ ಅಸೋಸಿಯೇಶನ್ನ ಇಪ್ಪತ್ತನೇ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎಕ್ಸಿಕ್ಯೂಟೀವ್ ಡೈರೆಕ್ಟರ್ ಎನ್.ಎಸ್ ವಿಶ್ವನಾಥ್ ಹಾಗೂ ಗೌರವ ಅತಿಥಿಯಾಗಿದ್ದ ನಬಾರ್ಡ್ ದೆಹಲಿ ಸಂಸ್ಥೆಯ ಅಧ್ಯಕ್ಷ ಡಾ| ಮುಕುಂದ್ ಅಭ್ಯಾಂಕರ್ ಅವರು ಅಸೋಸಿಯೇಶನ್ನ ಕಾರ್ಯಾಧ್ಯಕ್ಷ ವಿಶ್ವಾಸ್ ಜೆ.ಠಾಕೂರ್ ತನ್ನ ಇತರೇ ಪದಾಧಿಕಾರಿಗಳನ್ನೊಳಗೊಂಡು ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಅವರಿಗೆ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು.

ಸಮಾರಂಭದಲ್ಲಿ ಅಸೋಸಿಯೇಶನ್ನ ಉಪ ಕಾರ್ಯಧ್ಯಕ್ಷ ವಿಕಾಸ್ ಬಾಲಚಂದ್ರ ಸಾವಂತ್, ಸಿಇಒ ಸ್ವಾತಿ ಪಾಂಡೆ, ಸಂಚಾಲಕರುಗಳಾದ ಡಾ| ಶಶಿ ಬಿ.ಅಹಿರೆ, ಡಾ| ವಿನಾಯಕ್ ಯಶವಂತ್ ತರಾಳೆ, ಮಧುಕರ್ರಾವ್ ವಿ. ಜವಂಜಾಳ್ ಮತ್ತಿತರ ಸಂಚಾಲಕರು, ಭಾರತ್ ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ನಿರ್ದೇಶಕರುಗಳಾದ ಕೆ.ಎನ್ ಸುವರ್ಣ, ಜೆ.ಎ ಕೋಟ್ಯಾನ್, ಯು.ಎಸ್ ಪೂಜಾರಿ, ಜ್ಯೋತಿ ಕೆ.ಸುವರ್ಣ, ಚಂದ್ರಶೇಖರ ಎಸ್. ಪೂಜಾರಿ, ನ್ಯಾ| ಎಸ್.ಬಿ ಅವಿೂನ್, ದಾಮೋದರ ಸಿ.ಕುಂದರ್, ಆರ್.ಡಿ ಪೂಜಾರಿ, ಅಶೋಕ್ ಎಂ. ಕೋಟ್ಯಾನ್, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಮುಖ್ಯ ಪ್ರಧಾನ ಪ್ರಬಂಧಕ ಅನಿಲ್ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕರುಗಳಾದ ಶೋಭಾ ದಯಾನಂದ್, ನಿತ್ಯಾನಂದ ಡಿ.ಕೋಟ್ಯಾನ್, ಬ್ಯಾಂಕ್ನ ಅಭಿವೃದ್ಧಿ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ (ಡಿಜಿಎಂ), ನ್ಯಾ| ಶಶಿಧರ್ ಕಾಪು, ಜಗನ್ನಾಥ್ ಅಮೀನ್ ಮತ್ತಿತರರು ಉಪಸ್ಥಿತರಿದ್ದು ಸಿಹಿತಿಂಡಿ ಹಂಚಿ ಹರ್ಷ ವ್ಯಕ್ತಪಡಿಸಿದರು.

ಜಾಗತೀಕರಣಕ್ಕೆ ಸಜ್ಜಾದ ಬ್ಯಾಂಕಿಂಗ್ ಕ್ಷೇತ್ರದ ದೊಡ್ಡ ಹಾಗೂ ಸಣ್ಣ ಉದ್ಯಮ, ಉದ್ಯಮಿಗಳ ಹಣಕಾಸು ಅವಶ್ಯಕತೆಯ ಹೊಸ ಹೊಸ ಸವಾಲುಗಳನ್ನು ಎದುರಿಸಿ ಆರ್ಬಿಐ ನಿರ್ದೇಶನ ಪರಿಪಾಲಿಸಿ ಬ್ಯಾಂಕನ್ನು ಮುನ್ನಡೆಸುತ್ತಿರುವ ಫಲವೇ ಬ್ಯಾಂಕ್ನ ಉನ್ನತಿಗೆ ಕಾರಣವಾಗಿದೆ. ಆರ್ಥಿಕ ಬೆಳವಣಿಗೆಯಲ್ಲಿ ಸಮಗ್ರ ಬದಲಾವಣೆಯ ಅಗತ್ಯಗಳ ಮನವರಿಕೆಗೆ ಒತ್ತು ನೀಡುತ್ತಿರುವ ಬ್ಯಾಂಕ್ ಆಧುನಿಕ ವೈಜ್ಞಾನಿಕ ತಾಂತ್ರಿಕತೆಯ ಉಪಯೋಗ, ಕರ್ಮಚಾರಿಗಳಲ್ಲಿ ಶಿಸ್ತುಬದ್ಧತೆ, ಸಭ್ಯತಾ ವ್ಯವಹಾರ ಕೌಶಲ್ಯತೆ, ಗ್ರಾಹಕರ ಮನವರಿಕೆ, ತ್ವರಿತ ಸೇವೆ ಹಾಗೂ ಅವಶ್ಯ ಸಮಯದಲ್ಲಿ ಹಣಕಾಸು ಸಹಯೋಗ ನೀಡುತ್ತಾ ಪ್ರಗತಿಯ ಪಥದಲ್ಲಿ ಬ್ಯಾಂಕನ್ನು ಮುನ್ನಡೆಸಿದ ಫಲಿತಾಂಶ ಈ ಪುರಸ್ಕಾರವಾಗಿದೆ. ನಾವು ಇತರ ಬ್ಯಾಂಕ್ಗಳಿಕ್ಕಿಂತ ನಮ್ಮೊಳಗಿನ ಆರೋಗ್ಯದಾಯಕ ಸ್ಪರ್ಧಾ ವ್ಯವಹಾರಕ್ಕೆ ಮಹತ್ವ ನೀಡುತ್ತಿದ್ದು, ಇಂತಹ ಅನೇಕ ಸಾಧನೆಗಳೇ ಬ್ಯಾಂಕ್’ಸ್ ಅಸೋಸಿಯೇಶನ್ನ ಗುರುತಿಸುವಿಕೆ ಕಾರಣವಾಗುತ್ತಾ ಸಹಕಾರಿ ರಂಗದ ಪ್ರಥಮ ಸ್ಥಾನಕ್ಕೆ ನಾಂದಿಯಾಗಿದೆ ಎಂದು ಭಾರತ್ ಬ್ಯಾಂಕ್ನ ಕಾಯರ್ಾಧ್ಯಕ್ಷ ಜಯ ಸಿ.ಸುವರ್ಣ ಪುರಸ್ಕಾರ ಸ್ವೀಕರಿಸಿ ಸಂತೃಪ್ತಿಯ ಸೇವಾ ಸಂತಸವನ್ನು ಹಂಚಿಕೊಂಡರು.

ನಿಸ್ವಾರ್ಥ ಸೇವೆಗೆ ಧಕ್ಕಿದ ಗುರುತರ ಗೌರವ ಇದಾಗಿದೆ. ನಮ್ಮ ಒಟ್ಟಾರೆ ಉದ್ಯಮದಲ್ಲಿ ಎಲ್ಲ ವಿಧದಲ್ಲೂ ಸರಿಯಾದ ಸೇವೆಗಾಗಿ ಈ ಪ್ರಶಸ್ತಿ ಒಲಿದಿದೆ ಎಂದು ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಸಾಲ್ಯಾನ್ ಅಭಿಮಾನ ವ್ಯಕ್ತ ಪಡಿಸಿದ್ದಾರೆ.

ಭಾರತ್ ಬ್ಯಾಂಕ್ 66 ಮಹಾರಾಷ್ಟ್ರ, 18 ಕನರ್ಾಟಕ ಹಾಗೂ 3 ಶಾಖೆಗಳು ಗುಜರಾತ್ ರಾಜ್ಯದಲ್ಲಿ ಸೇರಿದಂತೆ ಒಟ್ಟು 87 ಶಾಖೆಗಳನ್ನು ಹೊಂದಿದ್ದು 14,500 ಕೋಟಿಗೂ ಮಿಕ್ಕಿದ ವ್ಯವಹಾರ ನಡಿಸಿದೆ. ಇದೀಗಲೇ ಆರ್ಬಿಐನಿಂದ ನೂತನ 14 ಶಾಖೆಗಳ ಪರವಾನಿಗೆ ಹೊಂದಿದ್ದು 2016ರ ಸೆಪ್ಟೆಂಬರ್ ಒಳಗಾಗಿ 14 ಶಾಖೆಗಳನ್ನು ತೆರೆಯಲಿದೆ. ಬ್ಯಾಂಕ್ ಸರ್ವೋತ್ಕೃಷ್ಟ ಗ್ರಾಹಕ ಸೇವೆ, ಗತ ಸಾಲಿನ ವಾರ್ಷಿಕ ಹಣಕಾಸು ವರದಿ, ಸಮಗ್ರ ಪ್ರಗತಿ, ಇತ್ಯಾದಿ ಗುರುತರ ಸೇವೆಯನ್ನಾಧಾರಿಸಿ ಬ್ಯಾಂಕ್’ಸ್ ಅಸೋಸಿಯೇಶನ್ ನಮ್ಮ ಸಂಸ್ಥೆಗೆ ಪ್ರಾಪ್ತಿಸಿದ ಈ ಪುರಸ್ಕಾರ ನಮ್ಮೆಲ್ಲರಿಗೂ ಅಪಾರ ಅಭಿಮಾನ ಮೂಡಿಸಿದೆ. ಇದು ಬ್ಯಾಂಕ್ನ ಸೇವೆಗೆ ತೊಡಗಿಸಿಕೊಂಡ ಪ್ರತೀಯೋರ್ವ ನಿರ್ದೇಶಕ, ಷೇರುದಾರ, ಅಸಂಖ್ಯಾತ ಗ್ರಾಹಕರು, ಹಿತೈಷಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು, ನೌಕರವೃಂದದ ಶ್ರಮಕ್ಕೆ ಸಂದ ಗೌರವವಾಗಿದೆ ಎಂದು ಸಿಇಒ ಮತ್ತು ಆಡಳಿತ ನಿರ್ದೆಶಕ ಸಿ.ಆರ್ ಮೂಲ್ಕಿ ಸಂತಸ ವ್ಯಕ್ತ ಪಡಿಸಿದರು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *