ಕೈಕಂಬ: ಸಜಿಪ ಮುನ್ನೂರು ಕ್ಷೇತ್ರದ ಜಿಲ್ಲಾ ಪಂಚಾಯತ್ ಅಭ್ಯರ್ಥಿ ಚಂದ್ರ ಪ್ರಕಾಶ್ ಶೆಟ್ಟಿ ಅವರು ಕರಿಯಂಗಳ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಬಿರುಸಿನ ಮತಪ್ರಚಾರ ನಡೆಸಿದರು. ಕಾಂಗ್ರೆಸ್ ಪಕ್ಷದ ಪರವಾಗಿ ಸ್ಪರ್ಧಿಸುತ್ತಿರುವ ಇವರು ಬಿಜೆಪಿಯ ಪ್ರಬಲ ಅಭ್ಯರ್ಥಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದಾರೆ. ತೀವ್ರ ಪೈಪೋಟಿಗೆ ಕಾರಣವಾಗಿರುವ ಈ ಕ್ಷೇತ್ರದಲ್ಲಿ ಯಾರು ವಿಜಯದುಂದುಭಿ ಮೊಳಗಿಸುತ್ತಾರೆ ಎಂಬುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು ವಿಪರೀತ ಚುನಾವಣೆಯ ಕಾವು ಸೃಷ್ಟಿಸಿದೆ.

Untitled-1 copy
ಸಚಿವ ರಮಾನಾಥ ರೈ ಅವರ ಆಪ್ತರಾಗಿರುವ ಚಂದ್ರ ಪ್ರಕಾಶ್ ಶೆಟ್ಟಿ ಹಲಾವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದು ಹಲವು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವುದು ಇವರಿಗೆ ಪ್ಲಸ್ ಆಗಬಹುದು ಎನ್ನುವ ನಿರೀಕ್ಷೆ ಹುಟ್ಟಿಕೊಂಡಿದೆ. ಅಲ್ಲದೆ ಈ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಿರುವುದರಿಂದ ಅಪಾರ ಜನಬೆಂಬಲವೂ ಇವರಿಗಿದೆ.
ಚಂದ್ರಪ್ರಕಾಶ್ ಶೆಟ್ಟಿಯವರನ್ನು ಜಿಲ್ಲಾ ಪಂಚಾಯತ್ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿದಾಗ ಇವರ ವಿರುದ್ಧ ಅತ್ಯಂತ ಪ್ರಬಲ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕಿಳಿಸಿವುದೆಂದು ಸಂಘಪರಿವಾರ ಹಾಗೂ ಬಿಜೆಪಿ ನಾಯಕರಿಗೆ ತಲೆಕೊರೆಯುವ ಪ್ರಶ್ನೆಯಾಗಿತ್ತು. ಕೊನೆಗೆ ಈ ಹಿಂದೆ ಶಾಸಕರಾಗಿದ್ದು, ಸಂಘಪರಿವಾರದ ಗರಡಿಮನೆಯಲ್ಲಿ ಪಳಗಿರುವ ಪದ್ಮನಾಭ ಕೊಟ್ಟಾರಿಯವರನ್ನೇ ಕಣಕ್ಕಿಳಿಸುವುದೆಂದು ಮುಖಂಡರು ತೀರ್ಮಾನಿಸಿರುವುರಿಂದ ಚಂದ್ರ ಪ್ರಕಾಶ್ ಶೆಟ್ಟಿ ಹಾಗೂ ಕೊಟ್ಟಾರಿ ನಡುವೆ ತೀವ್ರ ಪೈಪೋಟಿ ಉಂಟಾಗಿದೆ.
ಶಾಸಕರಾಗಿ ಹೆಸರು ಗಳಿಸಿರುವ ಕೊಟ್ಟಾರಿಯವರಿಗೆ ಸವಾಲಿನ ಚುನಾವಣೆಯಾಗಿದೆ. ಅಲ್ಲದೆ ಬಂಟ್ವಾಳದ ಶಾಸಕ, ಸಚಿವ ರೈ ಅವರ ಆಪ್ತ ಚಂದ್ರ ಪ್ರಕಾಶ್ ಶೆಟ್ಟಿ ಆಗಿರುವುದರಿಂದ ಇವರಿಗೂ ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸ್ವತಃ ರೈ ಅವರು ಇದು ತನ್ನದೇ ಸ್ಪರ್ಧೆ ಎಂದು ತೀರ್ಮಾನಿಸಿರುವದರಿಂದ ಸ್ಪರ್ಧೆಗೆ ಇನ್ನಷ್ಟು ಬಲಬಂದಿದ್ದು, ಪ್ರತಿಷ್ಠೆಯ ಪ್ರಶ್ನೆಯಾಗಿ ಮೂಡಿದೆ. ಈ ನಡುವೆ ಎಸ್‍ಡಿಪಿಐ ಕೂಡಾ ಅಖಾಡಕ್ಕೆ ಇಳಿದಿರುವುದರಿಂದ ಕುತೂಹಲ ಸೃಷ್ಟಿಸಿದೆ. ಇತ್ತಂಡಗಳ ನಡುವೆಯೂ ಜಿದ್ದಾಜಿದ್ದಿನ ಮತಪ್ರಚಾರ ನಡೆಯುತ್ತಿದ್ದು, ಇದಕ್ಕೆ ಪೂಕರವೆಂಬಂತೆ ಕಳೆದ ಹಲವಾರು ದಿನಗಳಿಂದ ಗೆಲ್ಲಲೇಬೇಕೆಂಬ ನಿರೀಕ್ಷೆಯಲ್ಲಿ ಚಂದ್ರ ಪ್ರಕಾಶ್ ಶೆಟ್ಟಿಯವರು ತನ್ನ ಕಾರ್ಯಕರ್ತರೊಂದಿಗೆ ಸೇರಿಕೊಂಡು ಮತಪ್ರಚಾರ ನಡೆಸುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *