ನವದೆಹಲಿ: ಭರ್ಜರಿ ಜಯಸಾಧಿಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮೇ 21 ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವುದಾಗಿ ತಿಳಿದುಬಂದಿದೆ. ಶುಕ್ರವಾರ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಸುಮಾರು 12.30 ರ ವೇಳೆಗಾಗಲೇ ಬಿಜೆಪಿ ಮ್ಯಾಜಿಕ್ ನಂಬರ್ 272 ಸ್ಥಾನ ಗೆಲ್ಲುವ ಮೂಲಕ, ಯಾವುದೇ ಪಕ್ಷಗಳ ಬೆಂಬಲವಿಲ್ಲದೆ ಸ್ವತಂತ್ರವಾಗಿ ಸರ್ಕಾರ ರಚಿಸುವ ಅರ್ಹ

ತೆ ಪಡೆದಿದೆ. modi

ಈಗಾಗಲೇ ಪ್ರಧಾನಿ ಗದ್ದುಗೆ ಏರಲು ಸಿದ್ದತೆ ನಡೆಸುತ್ತಿರುವ ಮೋದಿ ಪಕ್ಷದ ಇತರ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಬಿಜೆಪಿ  ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಮೋದಿಯವರಿಗೆ ಝಡ್ ಪ್ಲಸ್ ಭದ್ರತೆಯನ್ನೊದಗಿಸಲಾಗಿದೆ. ಅಲ್ಲದೆ ಅವರ ಪತ್ನಿ ಜಶೋದಾ ಬೆನ್ ಗೂ ವಿಶೇಷ ಭದ್ರತೆ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ

ಶೇರು ಸೂಚ್ಯಂಕ 30000 ಗಡಿದಾಟುವ ನಿರೀಕ್ಷೆ

ಮೋದಿ ಪ್ರದಾನಿ ಆಗಲಿದ್ದಾರೆ ಎನ್ನುತ್ತಿದ್ದಂತೆ ಸೆನ್ಸೆಕ್ಸ್ ಶೇಉ ಸೂಚ್ಯಂಕದಲ್ಲಿ ಇಂದು ಒಮ್ಮೆಲೆ ಏರಿಕೆ ಕಂಡಿದ್ದು 24 ಸಾವಿರ ಗಡಿಯನ್ನು ದಾಟಟಿತ್ತು. ಅಲ್ಲದೆ ಡಾಲರ್ ಎದುರು ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡ ರೂಪಾಯಿ ದಿನದಂತ್ಯಕ್ಕೆ 58 ಕ್ಕೆ ಏರಿಕೆ ಕಂಡಿತ್ತು.

By suddi9

Leave a Reply

Your email address will not be published. Required fields are marked *