ಯುವ ಪೀಳಿಗೆಯಿಂದಲೇ ಸಮಾಜದ ಪ್ರಗತಿ ಸಾಧ್ಯ-ಪ್ರಭಾಕರ್ ಬೋರ್ಕರ್
ಮುಂಬಯಿ: ರಾಜಾಪುರ ಸಾರಸ್ವತ ಸಂಘ ಮುಂಬಯಿ ಇತೀಚೆಗೆ ಸಾಯನ್ ಅಲ್ಲಿನಜಿಎಸ್‍ಬಿ ಸಭಾಭವನದಲ್ಲಿ ರಾಜಾಪುರ ಸಾರಸ್ವತ ಉತ್ಸವಆಯೋಜಿಸಿತು. ಸಂಘದ ಅಧ್ಯಕ್ಷ ಪ್ರಭಾಕರ್ ಡಿ ಬೋರ್ಕರ್ ಸಂಘದ ಸಂಕ್ಷಿಪ್ತ ಸಾಧನೆಯ ಚಿತ್ರಣ ಭಿತ್ತರಿಸಿ ಸಂಘದ ಯುವ ವೃಂದವು ರಜತ ಮಹೋತ್ಸವ ಆಚರಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಹಾಗೂ ಈವರೇಗಗಿನ ಪ್ರಗತಿಯನ್ನು ಶ್ಲಾಘಿಸಿ ಸಮಾಜದ ಪ್ರಗತಿಯಲ್ಲಿ ಯುವ ಪೀಳಿಗೆಯ ಮಹತ್ವ ಮನವರಿಸಿದರು.
ಸಮಾರಂಭದಲ್ಲಿ ಆರ್‍ಎಸ್‍ಬಿ ಸಮಾಜದ ಗಣ್ಯ ವ್ಯಕ್ತಿಗಳಾದ ದೇವಣ್ಣ ಕೆ.ಪಾಟ್ಕರ್ ಡೊಂಬಿವಲಿ, ರಾಜೇಶ್ ಪ್ರಭು ಶಿರ್ವಾ, ಅನಂತರಾಮ ನಾಯಕ್ ಪಳ್ಳಿ ಹಾಗೂ ಕು| ಅಪೂರ್ವ ವಸಂತ್ ನಾಯಕ್ ಅಂಧೇರಿ (ಮುಂಬಯಿ) ಅವರನ್ನು ವಿಶೇಷ ಸಾಧನೆಗಾಗಿ ಶಾಲು ಹೊದಿಸಿ ಶ್ರೀಫಲ, ಪುಷ್ಪಗುಚ್ಛ, ಸ್ಮೃತಿಚಿನ್ನೆ ಪ್ರದಾನಿಸಿ ಸನ್ಮಾನಿಸಲಾಯಿತು. ಹಾಗೂ ಸುಮಾರು 185 ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಲಾಯಿತು. ಸಂಘದ ಮಹಿಳಾ ಮಂಡಳಿಯ ವತಿಯಿಂದ ಭಜನಾ ಹಾಗೂ ಹರಸಿನಕುಂಕುಮ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವು ಸಂಘದ ಯುವ ವೃಂದದಸದಸ್ಯರ ವೈವಿದ್ಯತಾ ವಿನೋದಾವಳಿ ಕಾರ್ಯಕ್ರಮ ದೊಂದಿಗೆ ಮುಕ್ತಾಯವಾಯಿತು.ಸಂಘದ ಕಾರ್ಯದರ್ಶಿ ಪೂಜಾ ಕಾಮತ್ ಕಾರ್ಯಕ್ರಮದ ಸಂಯೋಜನೆ ನಡೆಸಿ ವಂದಿಸಿದರು.
