ಬಂಟ್ವಾಳ : ಕಳ್ಳಿಗೆ ಗ್ರಾಮ ಪಂ.ವ್ಯಾಪ್ತಿಯ ಪಚ್ಚಿನಡ್ಕ-ಪನ್ನಡ್ಕ ರಸ್ತೆಗೆ ರೂ.3.00ಲಕ್ಷ ಅನುದಾನದ ಕಾಂಕ್ರೀಟಿಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ಮಮತಾ ಗಟ್ಟಿ, ಗ್ರಾ.ಪಂ.ಅಧ್ಯಕ್ಷೆ ರತ್ನಾ, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಸದಸ್ಯರಾದ ರಾಮಕೃಷ್ಣ ಆಳ್ವ , ಸದಾಶಿವ ಬಂಗೇರಾ, ಪ್ರವೀಣ್ ಬಿ., ಜಗ ದೀಶ್ ಕುಂದರ್, ಮಹಮ್ಮದ್ ಶರೀಫ್, ಪಂ.ಸದಸ್ಯರಾದ ಮಧುಸೂದನ್ ಶೆಣೈ, ವಿಜಯ ಡಿಸೋಜ, ಭೂನ್ಯಾಯ ಮಂಡಳಿ ಸದಸ್ಯ ದಿವಾಕರ ಪಂಬದಬೆಟ್ಟು, ಪ್ರಮುಖರಾದ ಸೇಸಪ್ಪ ಕೋಟ್ಯಾನ್, ಭುವನೇಶ್ ಪಚ್ಚಿನಡ್ಕ, ಜಫರಿನ್ ರೋಡ್ರಿಗಸ್, ವೆಂಕಪ್ಪ ಪೂಜಾರಿ ಉಪಸ್ಥಿತರಿದ್ದರು.
