ಬಂಟ್ವಾಳ: ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಎನ್.ಸಿ.ರೋಡ್ ಎಂಬಲ್ಲಿ ರಿಕ್ಷಾವೊಂದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಜಾರಿ ಬಿದ್ದು ಗಂಭೀರ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಇಲ್ಲಿಗೆ ಸಮೀಪದ ಕೆಳಗಿನ ವಗ್ಗ ನಿವಾಸಿ ಕೆ.ಎಚ್.ಅಬೂಬಕ್ಕರ್ ಎಂಬವರ ಪತ್ನಿ ಕುಲ್ಸಮ ಎಂಬವರು ಕುಟುಂಬಿಕರೊಂದಿಗೆ ನೆಲ್ಲಿಗುಡ್ಡೆ ಕಾರ್ಯಕ್ರಮವೊಂದಕ್ಕೆ ಸ್ಥಳೀಯ ಶಿವಕುಮಾರ್ ಎಂಬವರ ರಿಕ್ಷಾದಲ್ಲಿ ಸೋಮವಾರ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ರಿಕ್ಷಾದಿಂದ ಅವರು ಜಾರಿ ಬಿದ್ದು ಕೈ ಮೂಳೆ ಮುರಿತಕ್ಕೊಳಗಾಗಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪುಂಜಾಲಕಟ್ಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.
