ಬಜಪೆ: ‘ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸುವಂತಾಗಲು ಸರಕಾರದ ಅನೇಕ ಯೋಜನೆಗಳ ಸದಪ್ರಯೋಗ ಪಡೆದುಕೊಳ್ಳುವ ಬಗ್ಗೆ ತಿಳುವಳಿಕೆ ಅಸತ್ಯ, ತನ್ಮೂಲಕ ಸಮಗ್ರ ಬೆಳವಣೆಗೆಯ ದಾರಿ ಕಂಡುಕೊಳ್ಳಬಹುದಾಗಿದೆ.’ ಎಂದು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸುಂದರ ಪೂಜಾರಿ ಹೇಳಿದರು.
01

02

03ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಸ್ತ್ರೀ ಶಕ್ತಿ ಬಾಕ್ ಸೊಸೈಟಿ ಮಂಗಳೂರು ವತಿುಂದ ಜರಗಿದ ಸ್ತ್ರೀ ಶಕ್ತಿ ಗೊಂಚಲಿನ ಸದಸ್ಯರಿಗೆ ಕೌಶಲ್ಯ ತರಬೇತಿ ಹಾಗೂ ಅವರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಎಡಪದವು ಸ್ತ್ರೀ ಶಕ್ತಿ ಭವನದಲ್ಲಿ ಜರಗಿತು.
ಮಾದಕ ವ್ಯಸನ, ಬಾಲ್ಯವಿವಾಹ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ, ಮಕ್ಕಳ- ಮಹಿಳೆಯರ ಮಾರಾಟ-ಸಾಗಾಟ ತಡೆ, ವರದಕ್ಷಿಣೆ ನಿಷೇಧಗಳ ಬಗ್ಗೆ ಜಾಗೃತರಾಗುವಂತೆ ಮಹಿಳೆಯರಿಗೆ ಅವರು ಕಿವಿಮಾತು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಕರಿ ನಟರಾಜ್ ಅವರು ಮಾತನಾಡಿ-ಸ್ತ್ರೀ ಶಕ್ತಿ ಸದಸ್ಯರಿಗೆ ಕೌಶಲ್ಯ ತರಬೇತಿ ಮತ್ತು ಮಾರಾಟ ಮೇಳ ಹಮ್ಮಿಕೊಂಡಿರುವುದು ಅತ್ಯಂತ ಸೂಕ್ತವಾಗಿದೆ. ಎಂದರು.
ಸಂಪನ್ಮೂಲ ವ್ಯಕ್ತಿ ಲಲಿತಾ ಫಿನಾುಲ್ ತಯಾರಿ ಬಗ್ಗೆ ತರಬೇತಿ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಕರಿ ಶ್ಯಾಮಲಾ ಸಿ.ಕೆ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಸಾವಿತ್ರಿ, ಸ್ತ್ರೀ ಶಕ್ತಿ ಗೊಂಚಲು ಅಧ್ಯಕ್ಷೆ ಜಯಂತಿ ಗುರುಪುರ, ಸಂಧ್ಯಾ ಗಂಜಿಮಠ, ಫ್ಲೋರಿನ್ ಶೋಭಾ, ಎಡಪದವು ಗ್ರಾ.ಪಂ ಅಧ್ಯಕ್ಷೆ ಮಾಲತಿ, ಸದಸ್ಯರಾದ ರಾಜೀವ ಸುಜಾತ ಉಪಸ್ಥಿತರಿದ್ಧರು. ಇಲಾಖೆಯ ಮೇಲ್ವಿಚಾರಕಿ ಮಾಲಿನಿ ನಿರೂಪಿಸಿದರು. ಉಷಾ ಡಿ. ವಂದಿಸಿದರು.

By suddi9

Leave a Reply

Your email address will not be published. Required fields are marked *