ಬಂಟ್ವಾಳ: ಕಳೆದ ಜ.13 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದ ಪ್ರತಿ ನೀಡುವಂತೆ ಆಗ್ರಹಿಸಿ ಬಂಟ್ವಾಳ ಪುರಸಭೆಯ ಬಿಜೆಪಿ ಸದಸ್ಯರ ಮುಖ್ಯಾಧಿಕಾರಿ ಛೇಂಬರ್ ನಲ್ಲೇ ಧರಣಿ ಕುಳಿತ ಘಟನೆ ಸೋಮವಾರ ನಡೆದಿದೆ. ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ತಿದ್ದಿ ಪುಸ್ತಕಗಳಲ್ಲಿ ದಾಖಲಾಗುತ್ತದೆ ಎಂದು ಆರೋಪಿಸಿರುವ ಬಿಜೆಪಿ ಸದಸ್ಯರು, ನಿರ್ಣಯ ಪುಸ್ತಕದಲ್ಲಿ ದಾಖಲಿಸಿರುವುದರ ಪ್ರತಿಯನ್ನೇ ಕೇಳಿದ್ದರು.
DSC_0106ಇನ್ನೂ ಸಿದ್ದಗೊಂಡಿಲ್ಲ ಎಂಬ ಮುಖ್ಯಾಧಿಕಾರಿಯವರ ಉತ್ತರದನ್ವಯ ನಿರ್ಣಯ ಪ್ರತಿಗೆ ಪಟ್ಟು ಹಿಡಿದು ಧರಣಿಕುಳಿತಿದ್ದಾರೆ. ಧರಣಿಗೆ ಪ್ರತಿಕ್ರಿಯಿಸಿರುವ ಮುಖ್ಯಾಧಿಕಾರಿ ಸುಧಾಕರ್ ರವರು, ನಿರ್ಣಯದ ಪ್ರತಿ ನೀಡಲು ಮೂರು ಕರ್ತವ್ಯದ ದಿನಗಳಿವೆ. ಆದರೆ ಸಭೆ ನಡೆದ ಎರಡು ಕರ್ತವ್ಯದ ದಿನಗಳಷ್ಟೇ ಆಗಿದ್ದು, ಮಂಗಳವಾರಕ್ಕೆ ಪ್ರತಿ ನೀಡುವುದಾಗಿ ಮನವಿ ಮಾಡಿದರೂ, ಪಟ್ಟು ಬಿಡದ ಬಿಜೆಪಿ ಸದಸ್ಯರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಭಾಸ್ಕರ್ ಟೈಲರ್ ಪ್ರತಿಭಟನೆ ಮುಂದುವರಿಸಿದ್ದಾರೆ. ನಿರ್ಣಯ ಪ್ರತಿ ಸಿಗುವವರೆಗೂ ಧರಣಿ ಮುಂದುವರಿಸುವುದಾಗಿ ತಿಳಿಸಿದ್ದಾರೆ. ನಿರ್ಣಯದ ಪ್ರತಿ ತಯಾರಾದ ಕೂಡಲೇ ಸದಸ್ಯರಿಗೆ ನೀಡುವಂತೆ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದು ಅಧ್ಯಕ್ಷೆ ವಸಂತಿ ಚಂದಪ್ಪ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *