`ಬಂಟಕಂಟ ಸ್ಪರ್ಧೆ’ `ಬಲೇ ತೆಲಿಪಲೆ’ ಕಾರ್ಯಕ್ರಮ ಪ್ರದರ್ಶನ
ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯು ತನ್ನ ದಶಮಾನೋತ್ಸವವನ್ನು ಇಂದಿಲ್ಲಿ ಸನಿವಾರ ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿಅದ್ದೂರಿಯಿಂದ ಸಂಭ್ರಮಿಸಿತು. ಬಂಟರ ಸಂಘ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ತುಂಗಾ ಸಮೂಹದ ಕಾರ್ಯಾಧ್ಯಕ್ಷ ಸುಧಾಕರ್ ಎಸ್.ಹೆಗ್ಡೆ, ಗೌರವ ಅತಿಥಿಗಳಾಗಿ ಸಂಘದ ಮಾಜಿ ಅಧ್ಯಕ್ಷರುಗಳಾದ ಬಿ.ವಿವೇಕ್ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಬಾಲಿವುಡ್‍ನ ಚಿತ್ರ ನಿರ್ದೇಶಕ ಮಧುರ್ ಭಂಡರ್ಕರ್ ಉಪಸ್ಥಿತರಿದ್ದುದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆಯನ್ನಿತ್ತರು. ಸಂಘದ ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಐ.ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‍ಕುಮಾರ್ ಶೆಟ್ಟಿ ಕುತ್ಯಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಲತಾ ಜಯರಾಮ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿವೇಕ್ ವಿ.ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಬಿ.ಆರ್ ಪೂಂಜಾ, ಜೊತೆ ಕಾರ್ಯದರ್ಶಿ ಡಾ| ಭಾಸ್ಕರ್ ಜಿ.ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಡಿ.ಶೆಟ್ಟಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಬಂಟ ಸಾಧಕರಾದ ನ್ಯಾ| ಆರ್.ಸಿ.ಶೆಟ್ಟಿ, ಸುಂದರ್ ಎಸ್.ಹೆಗ್ಡೆ, ಡಾ| ವಿಜಯ ಡಿ.ಶೆಟ್ಟಿ, ಪ್ರಕಾಶ್ ಭಂಡಾರಿ, ಲಯನ್ ಜಯರಾಮ್ ಎಲ್.ಶೆಟ್ಟಿಅವರನ್ನು ಸನ್ಮಾನಿಸಿಲಾಯಿತು. ಡಾ| ಪೂರ್ಣಿಮಾ ಎಸ್.ಶೆಟ್ಟಿ, ರೋಹಿತ್ ಡಿ.ಶೆಟ್ಟಿ, ಕು| ನಿರಿಷ್ಕಾ ಎ.ಶೆಟ್ಟಿ, ಪ್ರಜ್ವಲ್ ಟಿ.ಶೆಟ್ಟಿಅವರನ್ನು ಗೌರವಿಸಲಾಯಿತು. ಎಸ್‍ಎಸ್‍ಸಿ, ಎಚ್‍ಎಸ್‍ಸಿ ಪರೀಕ್ಶೆಗಳಲ್ಲಿ ಅತೃಧಿಕ ಅಂಕಗಳನ್ನು ಪಡೆದ ವಿದ್ಯಾಥಿರ್sಗಳನ್ನು ಮತ್ತು ಚಿಣ್ಣರ ಚಿಲಿಪಿಲಿ ಪ್ರತಿಭಾ ಸ್ಪರ್ಧೆಯ ವಿಜೇತರನ್ನು ಅಭಿನಂದಿಸಲಾಯಿತು.
Bunts Bandra Andheri Regional-2

Bunts Bandra Andheri Regional-3

Bunts Bandra Andheri Regional-6

Bunts Bandra Andheri Regional-13

Bunts Bandra Andheri Regional-15

Bunts Bandra Andheri Regional-17

Bunts Bandra Andheri Regional-19

Bunts Bandra Andheri Regional-23

Bunts Bandra Andheri Regional-24

Bunts Bandra Andheri Regional-26

Bunts Bandra Andheri Regional-32

Bunts Bandra Andheri Regional-36

Bunts Bandra Andheri Regional-40

Bunts Bandra Andheri Regional-42

Bunts Bandra Andheri Regional-46

Bunts Bandra Andheri Regional-49

Bunts Bandra Andheri Regional-50

Bunts Bandra Andheri Regional-52ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಜೊತೆ ಕೋಶಾಧಿಕಾರಿ ರಮೇಶ್ ಡಿ.ರೈ, ಸಂಯೋಜಕರಾದ ಎನ್.ಸಿ ಶೆಟ್ಟಿ, ಭಾಸ್ಕರ್ ಶೆಟ್ಟಿ ಕಾರ್ನಾಡ್, ಡಿ.ಕೆ ಶೆಟ್ಟಿ, ಪ್ರಮೀಳಾ ಎಸ್.ಶೆಟ್ಟಿ, ಪ್ರಶಾಂತಿ ಡಿ.ಶೆಟ್ಟಿ, ಪ್ರಾದೇಶಿಕ ಸಂಯೋಜಕ ಅಪ್ಪಣ್ಣ ಎಂ.ಶೆಟ್ಟಿ, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆಶೋಭಾ ಎಸ್.ಶೆಟ್ಟಿ, ಕಾರ್ಯದರ್ಶಿ ವನೀತಾ ವೈ.ನೋಂದಾ, ಕೋಶಾಧಿಕಾರಿ ಗೀತಾ ಆರ್.ಶೆಟ್ಟಿ, ಜೊತೆ ಕಾರ್ಯದರ್ಶಿ ಸ್ಮೀತಾ ಆರ್.ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರೇಮ ಬಿ.ಶೆಟ್ಟಿ, ಯುವ ವಿಭಾಗದ ಕಾರ್ಯದರ್ಶಿ ಸಿದ್ಧಾರ್ಥ್ ಶೆಟ್ಟಿ, ಕೋಶಾಧಿಕಾರಿ ಅದೇಶ್ ಕೆ.ಪೂಂಜಾ ಸೇರಿದಂತೆ ವಿವಿಧ ಉಪಸಮಿತಿಗಳ ಮುಖ್ಯಸ್ಥರು, ಸದಸ್ಯರು ಉಪಸ್ಥಿತರಿದ್ದರು. ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುಣಪಾಲ್ ಆರ್.ಶೆಟ್ಟಿ ಐಕಳಸ್ವಾಗತಿಸಿದರು. ಪ್ರಶಾಂತಿ ಡಿ.ಶೆಟ್ಟಿ, ಸುಚಿತ್ರಾ ಶೆಟ್ಟಿ ಮತ್ತು ಆನಿತಾ ಶೆಟ್ಟಿ ಪ್ರಾರ್ಥನೆಗೈದರು. ಪಶ್ಚಿಮ ವಲಯ ಸಹವರ್ತಕ ಮುಂಡಪ್ಪ ಎಸ್.ಪಯ್ಯಡೆ ಪ್ರಾಸ್ತವಿಕ ನುಡಿಗಳನ್ನಾಡಿದರು. ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗಧ್ಯಕ್ಷೆ ಸುಜತಾ ಗುಣಪಾಲ್ ಶೆಟ್ಟಿ ಐಕಳವಾರ್ಷಿಕ ವರದಿ ವಿವರಿಸಿದರು. ಕಾರ್ಯದರ್ಶಿ ಗಣೇಶ್ ಎಸ್.ಶೆಟ್ಟಿವಾರ್ಷಿಕ ವರದಿ ಮಂಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾ| ಪೂರ್ಣಿಮಾ ಶೆಟ್ಟಿ, ವಿದ್ಯಾ ಬಲ್ಲಾಳ್, ನಿಧಿ ಶೆಟ್ಟಿ ನಿರೂಪಿಸಿದರು. ಭೂಮಿ ಶೆಟ್ಟಿ ಅಧಿತಿ ಶೆಟ್ಟಿ ಸಾಕ್ಷಾ ಶೆಟ್ಟಿ ಗಣೇಶ ವಂದಿಸಿದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಣೆಗೈದರು. ಕೋಶಾಧಿಕಾರಿ ಸಿಎ| ಸುನೀಲ್ ಕೆ. ಶೆಟ್ಟಿಧನ್ಯವದಿಸಿದರು. ಕಾರ್ಯಕ್ರಮದ ಅಂಗವಾಗಿ `ಬಂಟಕಂಟ ಸ್ಪರ್ಧೆ’ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಾದೇಶಿಕ ಸಮಿತಿಯ ಮಕ್ಕಳು, ಯುವ ಹಾಗೂ ಮಹಿಳಾ ವಿಭಾಗವು ಅತ್ಯಾಕರ್ಷಕ ವೈವಿಧ್ಯಮಯ ನೃತ್ಯಾವಳಿ, `ಬಲೇ ತೆಲಿಪಲೆ.. ‘ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

By suddi9

Leave a Reply

Your email address will not be published. Required fields are marked *