ಮೂಲ್ಕಿ: ಇಲ್ಲಿನ ಪ್ರಸಿದ್ಧ ಧಾಮರ್ಿಕ ಕ್ಷೇತ್ರವಾದ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಮೇ.16 ಮತ್ತು 17ರಂದು ಭಾರೀ ಶ್ರದ್ಧಾ ಭಕ್ತಿಯಿಂದ ನಡೆಯಲಿರುವ ರಾಶಿ ಪೂಜಾ ಮಹೋತ್ಸವಕ್ಕೆ ಅಂತರಾಷ್ಟ್ರೀಯ ವೈಜ್ಞಾನಿಕ ವಾಸ್ತುತಜ್ಞರು, ಆಧ್ಯಾತ್ಮಿಕ ಗುರು, ಖ್ಯಾತ ಜ್ಯೋತಿಷಿಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ನೇತೃತ್ವದಲ್ಲಿ ಬೃಹತ್ ಹೊರೆ ಕಾಣಿಕೆಯನ್ನು ಮೇ.15ರಂದು ಬೆಳಿಗ್ಗೆ ಸಮಪರ್ಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮೂಲ್ಕಿಯ ಗೇರುಕಟ್ಟೆಯಲ್ಲಿರುವ ಶ್ರೀ ಚಂದ್ರಶೇಖರ ಸ್ವಾಮೀಜಿಯ ಆಶ್ರಮದಿಂದ ಹೊರಡಲಿರುವ ಈ ಬೃಹತ್ ಹೊರೆ ಕಾಣಿಕೆ ಮೆರವಣಿಗೆಯು ವಿವಿಧ ವಾದ್ಯಗೋಷ್ಠಿಗಳ ಜೊತೆಯಲ್ಲಿ ವಿವಿಧ ವಾಹನಗಳ ಮೆರವಣಿಗೆ ಹಾಗೂ ವೇಷಭೂಷಣಗಳ ಶೋಭಾಯಾತ್ರೆಯಲ್ಲಿ ಸಮಪರ್ಿಸಲಿದ್ದು, ಪೂಜ್ಯ ಸ್ವಾಮೀಜಿಯ ಭಕ್ತರು ಹಾಗೂ ಆಶ್ರಮದ ಅಭಿಮಾನಿಗಳು ಭಾಗವಹಿಸಲಿದ್ದಾರೆ.
ಪುನರೂರು ವಿಶ್ವನಾಥ ದೇವಳ ಹಾಗೂ ಜ್ಯೋತಿಷ್ಯರತ್ನ ಗೋವಿಂದ ಭಟ್ರವರ ಕುಟುಂಬಕ್ಕೂ ಅವಿನಾನುಭವ ಸಂಬಂಧವಿದ್ದು ಇದೇ ಅಭಿಮಾನದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ತಮ್ಮ ಆಶ್ರಮದ ಮೂಲಕ ಈ ಹೊರೆ ಕಾಣಿಕೆಯನ್ನು ಅಪರ್ಿಸಲಿದ್ದಾರೆ. ಮೇ.15ರ ಬೆಳಿಗ್ಗೆ ಆಶ್ರಮದಿಂದ ಹೊರಡುವ ಈ ಬೃಹತ್ ಮೆರವಣಿಗೆಯನ್ನು ಆಶ್ರಮದ ಪ್ರವರ್ತಕರಾದ ಪೂಜ್ಯ ಶ್ರೀ ಚಂದ್ರಶೇಖರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ಹಿರಿಯ ಜ್ಯೋತಿಷ್ಯರತ್ನ ಗೋವಿಂದ ಭಟ್ ಹಾಗೂ ಶಾರದಮ್ಮ ದಂಪತಿಗಳು, “ಉದಯವಾಣಿ”ಯ ಉಪಾಧ್ಯಕ್ಷ ಆನಂದ್, ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಠೇಲ್ ವೆಂಕಟೇಶ್ ರಾವ್, ಆಶ್ರಮದ ನಿದರ್ೇಶಕಿ ರಜನಿ ಚಂದ್ರಶೇಖರ್, ರೋಶ್ನಿ ಸಿ.ಭಟ್, ರಾಹುಲ್ ಸಿ. ಭಟ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ನೇತೃತ್ವವಹಿಸಿರುವ ಆಶ್ರಮದ ಸಂಚಾಲಕರಾದ ಮಧು ಆಚಾರ್ಯ ಕಾನರ್ಾಡು ಹಾಗೂ ಗಿರೀಶ್ ಕಾಮತ್ ಮೂಲ್ಕಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
