ಕೈಕಂಬ: ಇದೇ ಫೆಬ್ರವರಿ 23-24ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಿಸಿಎಲ್ ಕ್ರಿಕೆಟ್ನಲ್ಲಿ ನಮ್ಮ ಭೋಜ್ಪುರಿ ದಬಂಗ್ ತಂಡ ಪಾಲ್ಗೊಳ್ಳಲಿದ್ದು ನಾನು ಕೂಡಾ ತಂಡದಲ್ಲಿದ್ದೇನೆ.  ಎಂದು ತುಳುನಾಡ ಕನ್ಯೆ ಭೋಜ್ಪುರಿ ಚಿತ್ರಗಳ ಭರವಸೆಯ ನಾಯಕಿ ಪಾಕಿ ಹೆಗ್ದೆ  ತಿಳಿಸಿದ್ದಾರೆ. ಶಾಸ್ತ್ರಾವು ಶ್ರೀ ಭೂತನಾಥೇಶ್ವರ ಕ್ಷೇತ್ರದಲ್ಲಿ ಹಾಡುಗಳ ಸ್ಪರ್ಧೆ  ನಮ್ಮ ಸೂಪರ್ ಸಿಂಗರ್  ಸ್ಪರ್ಧಾ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭ  ‘ಸುದ್ದಿ9 ಮೀಡಿಯ ಜೊತೆ ಮಾತನಾಡಿದರು.  ಭೋಜ್ಪುರಿ ದಬಂಗ್ ತಂಡ ಆರಂಭಿಕ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಎದುರಿಸಲಿದೆ.5

 

ಇತ್ತೀಚೆಗೆ ಮೂರು ಮರಾಠಿ ಸಿನೆಮಾಗಳಲ್ಲಿ ನಡೆಸಿದ್ದೇನೆ. ಎರಡು ರಿಲೀಸ್ಗೆ ಕಾಯುತ್ತಿವೆ. ಒಂದು ಸಾವಿತ್ರಿ ಬಾ ಆಧಾರಿತ ಕತೆ ಅಲ್ಲದೆ ಬ್ಲಾಕ್ ಟ್ರಕ್ ಎಂಬ ಹಿಂದಿ ಸಿನೆಮಾದ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದೆ. ಶೂಟಿಂಗ್ ಮುಗಿಸಿದ ಎರಡು ಭೋಜ್ಪುರಿ ಸಿನೆಮಾಗಳು ರಿಲೀಸ್ಗೆ ಕಾಯುತ್ತಿವೆ. ಅನ್ನುತ್ತಾ ಪಾಕಿ ತನ್ನ ಬ್ಯುಸಿ ಶೆಡ್ಯೂಲ್ ಬಗ್ಗೆ ತಿಳಿಸಿದರು.
ಬಾಲಿವುಡ್ ನಿರ್ದೇಶಕ ರಾಮ್ ಶೆಟ್ಟಿ ಅವರ ಮುಂದಿನ ತುಳು ಎಂಟರ್ಟೈನ್ ಮೆಂಟ್ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಸ್ಕ್ರೀಪ್ಟ್ ಕಾರ್ಯ ಮುಗಿದು ಶೂಟಿಂಗ್ ಪ್ರಕ್ರಿಯೆ ಆರಂಭವಾಗಬೇಕಷ್ಟೆ ಎಂದು ಪಾಕಿ ಹೆಗ್ಡೆ ತಿಳಿಸಿದರು.

By suddi9

One thought on “ಭೋಜ್ಪುರಿ ದಬಂಗ್ ತಂಡ ಸಿಸಿಎಲ್ ಕ್ರಿಕೆಟ್ನಲ್ಲಿ ಕರ್ನಾಟಕ ತಂಡದ ಎದುರಾಳಿ:- ಪಾಕಿ ಹೆಗ್ದೆ”

Leave a Reply

Your email address will not be published. Required fields are marked *