ಕೈಕಂಬ:ಯಾವುದೇ ರೀತಿಯ ಕಲಾ ಪ್ರಕಾರಗಳಲ್ಲೂ ಕರಾವಳಿ ಜಿಲ್ಲೆಯಲ್ಲಿ ಪ್ರಬುದ್ಧ ಕಲಾವಿದರುಗಳ ಸಾಗರವೇ ಇದೆ. ಇತ್ತೀಚಿನ ದಿನಗಳಲ್ಲಿ ನಟನೆ, ಹಾಡು, ನಾಟ್ಯ ಪ್ರಕಾರಗಳಿಗೆ ಸಾಮಾನ್ಯ ಕಲಾವಿದರಿಗೂ ಅವಕಾಶಗಳು ಸಿಗ್ತಿವೆ. ಆದರೂ ಕಲಾವಿದರುಗಳ ಹುಡುಕಾಟದಲ್ಲಿರುವವರಿಗೆ ‘ಬಲೆ ತೆಲಿಪಾಲೆ’ ಬಳಿಕ ಮತ್ತೊಂದು ಸೂಪರ್ ವೇದಿಕೆ ನಮ್ಮ ಸೂಪರ್ ಸಿಂಗರ್ ನಿಜವಾದ ಪ್ರತಿಭೆಗೆ ಅವಕಾಶಗಳು ಸಿಗಲೇ ಬೇಕು. ‘ಬಲೆ ತೆಲಿಪಾಲೆ’ ಎಂಬ ರಂಗ ಪ್ರಕಾರ ಎಷ್ಟು ಕ್ರಾಂತಿಗೆ ಕಾರಣವಾಗಿದೆಯೆಂದರೆ ಕರಾವಳಿಯ ಅನೇಕ ಉದಯೋನ್ಮುಖ ಕಲಾವಿದರು ಸಿನೆಮಾ ಧಾರಾವಾಹಿಗಳಲ್ಲಿ ಬ್ಯುಸಿಯಾಗುವಂತೆ ಮಾಡಿದೆ ಎಂದು ಪ್ರಸಿದ್ಧ ಸಂಗೀತ ನಿದೇಶಕ ಗುರುಕಿರಣ್ ಹೇಳಿದರು.
ಶಾಸ್ತ್ರಾವು ಶ್ರೀ ಭೂತನಾಥೇಶ್ವರ ದೇವಸ್ಥಾನ ಬಡಗ ಎಡಪದವು ಇದರ ಆವರಣದಲ್ಲಿ ನಮ್ಮ ಟಿವಿ ವಾಹಿನಿಯ ಸಹಯೋಗದಲ್ಲಿ ಶುಕ್ರವಾರ ಪ್ರಾರಂಭಗೊಂಡ ಹಾಡುಗಳ ಸ್ಪರ್ಧೆ ನಮ್ಮ ಸೂಪರ್ ಸಿಂಗರ್ನ ಅರ್ಹತಾ ಸುತ್ತಿನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ತುಳು-ಮರಾಠಿ ಹಾಗೂ ಭೋಜ್ಪುರಿ ಸಿನೆಮಾ ರಂಗದ ನಾಯಕಿ ನಟಿ ಪಾಕಿ ಹೆಗ್ಡೆ ಅವರು ಮಾತನಾಡಿ ಶಾಸ್ತ್ರಾವು ಭೂತನಾಥೇಶ್ವರ ದೇವರ ಸನ್ನಿಧಿಯ ವೇದಿಕೆ ಸಾವಿರಾರು ಕಲಾವಿದರನ್ನು ನಾಡಿನ ಸಾಂಸ್ಕೃತಿಕ ಲೋಕಕ್ಕೆ ಸಮರ್ಪಿಸಿದೆ ‘ಬಲೆ ತೆಲಿಪಾಲೆ’ಯ ಅದ್ಭುತ ಯಶಸ್ಸಿನ ಬಳಿಕ ಇದೀಗ ನಮ್ಮ ಸೂಪರ್ ಸಿಂಗರ್ ಎಂಬ ಹಾಡು-ಪ್ರತಿಭೆಗಳ ಬೇಟೆಯಲ್ಲಿ ಮೊದಲ ಹೆಜ್ಜೆಯಿಟ್ಟಿದೆ. ಉದಯೋನ್ಮುಖ ಅವಕಾಶ ನೀಡಿದ ವೇದಿಕೆ ನಿಜಕ್ಕೂ ಸೂಪರ್ ಎಂದರು.
ತೀರ್ಪುಗಾರಿಕೆಯಲ್ಲಿ ರಾಜಿಯಿಲ್ಲ
ಯಾವುದೇ ಸ್ಫರ್ಧೆಯಲ್ಲಿ ಯಾವುದೇ ಸ್ಪರ್ಧೆಗಳ ಬಗ್ಗೆ ಪೂರ್ವಗ್ರಹದ ತೀರ್ಪು ನೀಡುವುದಕ್ಕೆ ಅವಕಾಶವೇ ಇಲ್ಲ. ಹಾಗೂ ಯಾವುದೇ ಜಾತಿಯ ಮಾನದಂಡವೂ ಇಲ್ಲ. ಇಲ್ಲಿ ಕೇವಲ ಪ್ರತಿಭೆಗಳನ್ನು ಮಾತ್ರ ಮೌಲ್ಯಮಾಪನ ಮಾಡಲಾಗುವುದು. ಕಾರ್ಯಕ್ರಮದ ಅದ್ಭುತ ಆರಂಭ ಖುಷಿ ನೀಡಿದೆ. ‘ಬಲೆ ತೆಲಿಪಾಲೆ’ ಯನ್ನೂ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರ ಸಂಖ್ಯೆ ಒಂದೂವರೆ ಕೋಟಿ ದಾಟಿದೆ ಎಂಬುದು ಸಾರ್ಥಕದ ಭಾವ ತರುತ್ತದೆ ಎಂದು ಶಾಸ್ತ್ರಾವು ಶ್ರೀ ಭೂತನಾಥೇಶ್ವರ ದೇವಳದ ಆಡಳಿತ ಮೊಕ್ತೇಸರ ಹಾಗೂ ಕಾರ್ಯಕ್ರಮದ ಪ್ರಧಾನ ಸಂಘಟಕ ವಿಜಯನಾಥ ಶೆಟ್ಟಿ ಹೇಳಿದರು.
ದೇವಳದ ಆಡಳಿತ ಸಮಿತಿಯ ಪ್ರೇಮಲತಾ ಪಿ. ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತೀರ್ಪುಗಾರರುಗಳಾದ ರಾಜ್ಗೋಪಾಲ್ ರೈ, ಅಲಕ್ ಸುಬ್ರಹ್ಮಣ್ಯ, ಕಜಪಾನಿ ಡಯಾಸ್, ಪ್ರಕಾಶ್ ಮಹಾದೇವನ್, ಸಂದೇಶ್ ಬಾಬಣ್ಣ, ಸೌಮ್ಯ ಭಟ್ ಕಟೀಲು, ಸಂದೀಪ್ ಆರ್. ಬಲ್ಲಾಳ್ ಅವರುಗಳನ್ನು ಈ ಸಂದರ್ಭ ಗೌರವಿಸಲಾಯಿತು.
ನಮ್ಮ ಟಿ.ವಿ ವಾಹಿನಿಯ ಮುಖ್ಯಸ್ಥ ಡಾ| ಶಿವಶರಣ್ ಶೆಟ್ಟಿ, ಅರ್ಜುನ್ ರೈ, ಸುಭಾಶ್ ರಾವ್, ಕುಸುಮಾಕರ್, ದೀಪ್ತಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು.







