ಬಂಟ್ವಾಳ: ನವೆಂಬರ್ ತಿಂಗಳಿನಲ್ಲಿ ಕಾಣೆಯಾದ ವ್ಯಕ್ತಿಯೋರ್ವರ ಬಗ್ಗೆ ಜನವರಿ 3ರಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಪರ್ಲಿಯ ನಿವಾಸಿ ನಹೀಮ ಅವರ ಗಂಡ ಅಬ್ದುಲ್ ಕರೀಂ(40) ಕಾಣೆಯಾದ ವ್ಯಕ್ತಿ. ಕರೀಂ ನ.4ರಂದು ಸುಮಾರು 4ಗಂಟೆಗೆ ಎಂದಿನಂತೆ ಬೀಡಿ ಬ್ರಾಂಚ್‍ಗೆ ಕೆಲಸಕ್ಕೆ ಹೋದವರು ಮನೆಗೆ ವಾಪಸು ಬಾರದೆ ಕಾಣೆಯಾಗಿರುತ್ತಾರೆ. ತಿಂಗಳು ಕಳೆದರೂ ಪತ್ತೆಯಾಗದ ಹಿನ್ನಲೆಯಲ್ಲಿ ಮನೆಯವರು ಕೊನೆ ಗಳಿಗೆಯಲ್ಲಿ ದೂರು ನೀಡಿದ್ದಾರೆ.

