ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಮಂಗಳವಾರ ನೆರವೇರಿಸಿದರು.
ರು.1.65 ಕೋಟಿ ವೆಚ್ಚದ ಮೊಡಂಕಾಪು ಹಾಗೂ ಕೈಕಂಬ ಪೇಟೆ ರಸ್ತೆ ಅಗಲೀಕರಣ, 2 ಕೋಟಿ ವೆಚ್ಚದ ಮೆಲ್ಕಾರ್ ಜಂಕ್ಷನ್ ಅಭಿವೃದ್ದಿ ಮತ್ತು ಮೆಲ್ಕಾರ್ ಮಾರ್ನಬೈಲು ರಸ್ತೆ ಅಗಲೀಕರಣ, 4 ಕೋಟಿ ವೆಚ್ಚದ ಸಿದ್ದಕಟ್ಟೆ, ಕರ್ಪೆ, ಅಣ್ಣಲಿಕೆ ರಸ್ತೆ, 1 ಕೋಟಿ ವೆಚ್ಚದ ಸಿದ್ದಕಟ್ಟೆ ಪೇಟೆಯಲ್ಲಿ ದ್ವಿಪಥ ರಸ್ತೆ ನಿರ್ಮಾಣ ಹಾಗೂ ಕಾಂಕ್ರೀಟ್ ಚರಂಡಿ ನಿರ್ಮಾಣ, 60 ಲಕ್ಷ ವೆಚ್ಚದ ವಾಮದಪದವು, ಮಣಿಹಳ್ಳ ರಸ್ತೆಯಲ್ಲಿ ಸೇತುವೆ ಪನರ್ ನಿರ್ಮಾಣ, 3.60 ಕೋಟಿ ವೆಚ್ಚದಲ್ಲಿ ಪಾಂಗಲ್ಪಾಡಿ, ಕೊರಗಟ್ಟೆ ಪೂಂಜ ರಸ್ತೆ , 4.15 ಕೋಟಿ ವೆಚ್ಚದಲ್ಲಿ ವಗ್ಗ, ಉಳಿ ರಸ್ತೆಯ ಅಗಲೀಕರಣ ಹಾಗೂ ಅಭಿವೃದ್ದಿ, 3 ಕೋಟಿ ವೆಚ್ಚದಲ್ಲಿ ಕಟ್ಟದಪಡ್ಪು, ನರ್ಸಿಕುಮೇರು, ಪುಂಜಾಲಕಟ್ಟೆ ರಸ್ತೆ ನಿರ್ಮಾಣಕ್ಕೆ ಸಚಿವರು ಶಿಲಾನ್ಯಾಸ ನೆರವೇರಿಸಿದರು.

BTW_JAN5_2
ರು. 60 ಲಕ್ಷ ವೆಚ್ಚದ ಸೊರ್ನಾಡು ಸೇತುವೆ ನಿರ್ಮಾಣ, 15 ಲಕ್ಷ ವೆಚ್ಚದ ಕರಂದಬೆಟ್ಟು ರಸ್ತೆ, 30 ಲಕ್ಷ ವೆಚ್ಚದ ಅಂತರಗುತ್ತು ರಸ್ತೆ, 14 ಲಕ್ಷ ವೆಚ್ಚದ ಪರವರ ಕೋಡಿ ರಸ್ತೆ, 15 ಲಕ್ಷ ವೆಚ್ಚದ ಅಲೆಕ್ಕಿ ಗಂಗಾ ಕಲ್ಯಾಣ ಯೋಜನೆ, 35 ಲಕ್ಷ ವೆಚ್ಚದ ಕಾವಳಪಡೂರು ಸರ್ಕಾರಿ ಪ್ರೌಢಶಾಲೆಯ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು.
ಈ ಸಂದರ್ಭ ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಉಪಾಧ್ಯಕ್ಷೆ ಯಾಸ್ಮಿನ್ ಹಾಮದ್, ಬುಡಾ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್, ಬಂಟ್ವಾಳ ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಪುರಸಭಾ ಸದಸ್ಯರಾದ ಸದಾಶಿವ ಬಂಗೇರ, ರಾಮಕೃಷ್ಣ ಆಳ್ವ, ಜೆಸಿಂತಾ ಡಿ’ಸೋಜ, ಚಂಚಲಾಕ್ಷಿ, ಪ್ರವೀಣ್ ಬಿ. ಮುಹಮ್ಮದ್ ಶರೀಫ್, ಜಗದೀಶ್ ಕುಂದರ್, ಮುಹಮ್ಮದ್ ನಂದರಬೆಟ್ಟು, ಗಂಗಾಧರ್, ಪ್ರಭಾ ಆರ್. ಸಾಲಿಯಾನ್, ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ, ಪ್ರಮುಖರಾದ ಪದ್ಮನಾಭ ರೈ, ಬಿ.ಕೆ. ಇದ್ದಿನಬ್ಬ ಕಲ್ಲಡ್ಕ, ಲೋಕೋಪಯೋಗಿ ಇಲಾಖಾ ಇಂಜಿನಿಯರ್‍ಗಳಾದ ಉಮೇಶ್ ಭಟ್, ಅರುಣ್ ಪ್ರಕಾಶ್ ಡಿ’ಸೋಜ, ಮೊದಲಾದವರು ಉಪಸ್ಥಿತರಿದ್ದರು.
ಸನ್ಮಾನ: ಮೊಡಂಕಾಪುವಿನಲ್ಲಿ ರಸ್ತೆ ಅಗಲೀಕರಣ ಶಿಲನ್ಯಾಸದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ವಯಂ ಟ್ರಾಫಿಕ್ ನಿರ್ವಾಹಕ ಅಬ್ದುಲ್ ರೆಹಮಾನ್ ಅವರನ್ನು ಸಾರ್ವಜನಿಕರ ಪರವಾಗಿ ಸಚಿವರು ಅಭಿನಂದಿಸಿದರು.

By Suddi9

Leave a Reply

Your email address will not be published. Required fields are marked *