ಹಿಂದೂ ಧಾರ್ಮಿಕ ಸಂಸ್ಕ್ರತಿಯ ದಮನಕ್ಕೆ ವ್ಯವಸ್ಥಿತ ಸಂಚು -ಶ್ರೀ ರಾಜಶೇಖರಾನಂಧ ಸ್ವಾಮೀಜಿ
ಬಜಪೆ: ಹಿಂದೂ ಧರ್ಮ-ಸಂಸ್ಕ್ರತಿಯ ದಮನಕ್ಕೆ ರಾಜಕೀಯ ಪ್ರೇರಿತವಾಗಿ ಆಡಳಿತಾಕಾರದ ದುರುಪಯೋಗ ಪಡಿಸಿಕೊಂಡು ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ. ಧರ್ಮ-ನಂಬಿಕೆ-ಆಚರಣೆಗಳ ಮೇಲೆ ಮೌಢ್ಯತೆಯೆಂಬ ನಿಲುವಿನ ಕಾನೂನಿ ಕಡಿವಾಣ ಹಾಕಲು ರಾಜ್ಯ ಸರಕಾರ ಶತಾಯಗತಾಯ ಹವಣಿಸುತ್ತಿರುವುದು ನಿಜಕ್ಕೂ ಅಧರ್ಮದ ಪರಮಾವ. ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

???????????????????????????????
???????????????????????????????ಹೊಸ ವರುಷದ ಮೊದಲ ದಿನ ಪೆರ್ಮುದೆ ಎಕ್ಕಾರು ಹಿಂದೂ ಧಾರ್ಮಿಕ ಸೇವಾ ಸಮಿತಿಯ ಆಶ್ರಯದಲ್ಲಿ ಶುಕ್ರವಾರ ಪೆರ್ಮುದೆಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಸಮಾಜದಲ್ಲಿ ಶಾಂತಿ ಸಹಬಾಳ್ವೆ ನೆಲೆಸಲು ಇಂತಹ ಸಾಮೂಹಿಕ ಪಾಲ್ಗೊಳ್ಳುವಿಕೆಯ ಚಟುವಟಿಕೆಗಳನ್ನು ನಡೆಸಿ ಜನತೆಗೆ ಜಾಗೃತಿ ಮೂಡಿಸಬೇಕು. ಎಂದು ಹೇಳಿದರು. ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಹಸಂಚಾಲಕ ಸತ್ಯಜಿತ್ ಸುರತ್ಕಲ್ ಮೂಢನಂಬಿಕೆಯ ನಿಲುವು ತಾಳಿ ಹಿಂದೂ ನಂಬಿಕೆ ಆಚರಣೆಗಳ ಬಗ್ಗೆ ಸರಕಾರದ ಧೋರಣೆಗಳನ್ನು ಖಂಡಿಸಿದರು.

ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ತಾ.ಪಂ ಸದಸ್ಯ ಯೋಗೀಶ್ ಕೋಟ್ಯಾನ್, ಪೆರ್ಮುದೆ ಗ್ರಾ.ಪಂ ಅಧ್ಯಕ್ಷೆ ಸರೋಜಾ, ಎಕ್ಕಾರು ಗ್ರಾ.ಪಂ ಅಧ್ಯಕ್ಷ ಸುರೇಶ್ ಶೆಟ್ಟಿ, ಗುರುಪುರ ಪ್ರಖಂಡ ಬಜರಂಗದಳ ಸಂಚಾಲಕ ನವೀನ್ ಮೂಡುಶೆಡ್ಡೆ, ಉದ್ಯಮಿ ಸುಕುಮಾರ ಅಮೀನ್, ಕಿಶೋರ್ ಕೋಟ್ಯಾನ್ ಸಮಿತಿಯ ಗೌರವಾಧ್ಯಕ್ಷ ಯಾದವ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ಧರು.
ರಾಘವೇಂದ್ರ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗಿತು. ಸಮಿತಿಯ ಅಧ್ಯಕ್ಷ ರತನ್ ಶೆಟ್ಟಿ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *