ಸಾಮಾಜಿಕ ಕಳಕಳಿಯ ಸೇವಾ ಕಾರ್ಯಗಳು ಹೆಚ್ಚಾಗಬೇಕು
ಬಜಪೆ: ರೋಟರಿ ಸಂಸ್ಥೆ ಸಾಮಾಜಿಕ ಕಳಕಳಿಯ ಸೇವಾ ಕಾರ್ಯಗಳಿಗೆ ಪ್ರೇರಣೆಯಾಗಬೇಕು. ಅಶಕ್ತರಿಗೆ ನೆರವು, ಸ್ವಾವಲಂಬನೆಗೆ ಹಾಗೂ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡಿ ವಿಶಿಷ್ಟ ಸಾಧಕರನ್ನು ಗುರುತಿಸಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಡಾ| ಭರತೇಶ್ ಹೇಳಿದರು.
ಬಜಪೆ ರೋಟರಿ ಕ್ಲಬ್‍ಗೆ ಮಂಗಳವಾರ ಅಕೃತ ನೀಡಿದ ಸಂದರ್ಭ ರೋಟರಿ ಭವನದಲ್ಲಿ ಜರಗಿದ ಸಮಾರಂಭದಲ್ಲಿ ಅವರು ಮಾತನಾಡಿದರು.

31 vm Rotary.jpg

31 vm Rotary.jpg (1)ಬಜಪೆ ರೋಟರಿಯ ಸದಸ್ಯರಾದ ರೋಬರ್ಟ್ ಫ್ರಾಂಕ್ಲಿನ್ ರೇಗೊ ಮಾಧವ ಅಮೀನ್, ಅರುಣ್ ಪಿಂಟೋ ಹಾಗೂ ರವಿ ಪೂಜಾರಿ ಅವರ ನೇತೃತ್ವದ ಗ್ರೀನ್ ಬಜ್ಪೆ ಸರ್ವಿಸಸ್ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಅವರು ಸ್ವಚ್ಚ ಭಾರತ ಪರಿಕಲ್ಪನೆ ಸಾಕಾರಗೊಳ್ಳಲು ಇಂತಹ ಕ್ರಿಯಶೀಲ ಚಟುವಟಿಕೆಗಳು ಗಮನಾರ್ಹ ಎಂದು ತಂಡದ ಪ್ರಯತ್ನನವನ್ನು ಶ್ಲಾಘಿಸಿದರು.ಬಜಪೆ ರೋಟರಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅಧ್ಯಕ್ಷತೆ ವಹಿಸಿ ಗವರ್ನರ್ ಡಾ| ಭರತೇಶ್ ದಂಪತಿಯನ್ನು ಗೌರವಿಸಿದರು. ಇದೇ ಸಂದರ್ಭ ಸ್ಥಳೀಯ ಶಾಖೆಗಳ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಪ್ರತಿಬಿಂಬ ಮುಖವಾಗಿ ಅನಾವರಣಗೊಳಿಸಲಾಯಿತು. ಅಸಿಸ್ಟೆಂಟ್ ಗವರ್ನರ್ ಸತ್ಯೇಂದ್ರ ಪೈ, ವಲಯ ಸೇನಾನಿ ರಾಬರ್ಟ್ ಫ್ರಾಂಕ್ಲಿನ್ ರೆಗೊ, ವೇದಿಕೆಯಲ್ಲಿದ್ಧರು. ಕಿಶನ್ ಶೆಟ್ಟಿ, ಜೋಕಿಮ್, ಮೇಘನಾಥ ಶೆಟ್ಟಿ, ಶ್ರೀ ಕಾಂತ್ ಶೆಟ್ಟಿ ಅವರನ್ನು ಬಜಪೆ ರೋಟರಿಗೆ ನೂತನ ಸದಸ್ಯನಾಗಿ ಸೇರ್ಪಡೆ ಗೊಳಿಸಲಾಯಿತು. ಗೋಪಿನಾಥ್ ಹೆಗ್ಡೆ ಸ್ವಾಗತಿಸಿ, ರವಿ ಪೂಜಾರಿ ವರದಿ ಮಂಡಿಸಿದರು. ಚಂದ್ರಶೇಖರ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *