ಬಂಟ್ವಾಳ:ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಸಭಾಂಗಣ ಸೇರಿದಂತೆ ಬಿ.ಸಿ.ರೋಡ್ ಸ್ತ್ರೀಶಕ್ತಿ ಭವನ ಮತ್ತು ಬಂಟ್ವಾಳ ಪುರಸಭೆಯಲ್ಲಿ ಇದೇ 27ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 60 ಮತಗಟ್ಟೆಗಳಿಗೆ 184 ಮಂದಿ ಸಿಬ್ಬಂದಿಗಳನ್ನು ಶನಿವಾರ ನಿಯೋಜಿಸಲಾಗಿದೆ.
ಒಟ್ಟು 60 ಮತಗಟ್ಟೆಗಳ ಪೈಕಿ ಸೂಕ್ಷ್ಮ-25, ಅತೀ ಸೂಕ್ಷ್ಮ-10, ಸಾಮಾನ್ಯ-25 ಎಂದು ಗುರುತಿಸಲಾಗಿದ್ದು, ಇದಕ್ಕಾಗಿ ಒಟ್ಟು 68 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತೀ ಮತಗಟ್ಟೆಗೆ ಒಬ್ಬರಂತೆ ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿದೆ ಎಂದು ಚುನಾವಣಾಧಿಕಾರಿ ಪರಮೇಶ್ವರ ನಾಯ್ಕ್ ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ 8ರಿಂದ 4 ಗಂಟೆತನಕ ನಡೆಯಲಿರುವ ಚುನಾವಣೆಗೆ ಶನಿವಾರವೇ ಎಲ್ಲಾ ಸಿಬ್ಬಂದಿ ಸಹಿತ ಮತಪೆಟ್ಟಿಗೆ ಮತ್ತು ಮತಪತ್ರ ರವಾನಿಸಲಾಗಿದ್ದು, ಒಟ್ಟು 930 ಮತದಾರರ ಪೈಕಿ ಪುರುಷರು-450 ಮತ್ತು ಮಹಿಳೆಯರು-480 ಮಂದಿ ಇದ್ದಾರೆ. ಐವರು ಪಕ್ಷೇತರರು ಸಹಿತ ಒಟ್ಟು ಎಂಟು ಮಂದಿ ಅಭ್ಯಥರ್ಿಗಳು ಕಣದಲ್ಲಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಆಯಾಯ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಬಿ.ಸಿ.ರೋಡ್ ಸ್ತ್ರೀಶಕ್ತಿ ಭವನ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಮಂಗಳೂರು ಜಿಲ್ಲಾ ಪಂಚಾಯಿತಿ ಕಟ್ಟಡ ಸಭಾಂಗಣದಲ್ಲಿ ಚುನಾವಣೆಗೆ ಅವಕಾಶ ಒದಗಿಸಲಾಗಿದೆ. ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ. ಈ ಬಾರಿ ಮತ ಚಲಾಯಿಸಲು ಇಷ್ಟವಿಲ್ಲದಿದ್ದಲ್ಲಿ ‘ನೋಟಾ’ ಮತದಾನಕ್ಕೂ ಅವಕಾಶ ನೀಡಿರುವುದು ಅಭ್ಯಥರ್ಿಗಳಿಗೆ ನಡುಕ ಉಂಟು ಮಾಡಿದ್ದರೆ, ಮತದಾರರಲ್ಲಿ ಮಾತ್ರ ಕುತೂಹಲ ಮೂಡಿಸಿರುವುದು ಕಂಡು ಬಂದಿದೆ.
