ಉತ್ತರಪ್ರದೇಶ: ಉತ್ತರಪ್ರದೇಶದ ಮಹಾರಾಜಗಂಜ್ನ ಕೋಠಿಪುರದಲ್ಲಿ ರೈಲ್ವೇ ಕ್ರಾಸಿಂಗ್ನಲ್ಲಿ ಜೀಪಿಗೆ ರೈಲು ಬಡಿದು ಹದಿಮೂರು ಮಂದಿ ಸಾವನ್ನಪ್ಪಿ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ 1 ಗಂಟೆಯ ವೇಳೆಗೆ ಈ ದುರ್ಘಟನೆ ನಡೆದಿದ್ದು, ಹದಿನಾರು ಮಂದಿ ಇದ್ದರು. ಇವರೆಲ್ಲರೂ ಮದುವೆ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದರು . ಅಪಘಾತದ ತೀವ್ರತೆಯಲ್ಲಿ ಹದಿಮೂರು ಮಂದಿ ಸ್ಥಳದಲ್ಲೇ ಮೃತಪಟ್ಟರು. ಇನ್ನುಳಿದ ಮೂವರು ಆಸ್ಪತ್ರೆಗೆ ಒಯ್ಯಲ್ಪಡುತ್ತಲೇ ಕೊನೆಯುಸಿರೆಳೆದರು. 
