ಬಜ್ಪೆ: ಮನೆಗೆ ನುಗ್ಗಿದ ಕಳ್ಳರು ನಗ-ನಗದು ದೋಚಿದ ಘಟನೆ ಪಡುಪೆರಾರ ಗ್ರಾಮದ ಎಸ್‍ಎನ್‍ಎಸ್ ಪಾಲಿಟೆಕ್ನಿಕ್ ಕಾಲೇಜಿನ ವಿನ್ಸೆಂಟ್ ಎಂಬವರ ಮನೆಯಿಂದ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಧ್ಯರಾತ್ರಿ ಮನೆಯ ಹಿಂಬದಿಯ ಬಾಗಿಲನ್ನು ತೆರೆದು ನುಗ್ಗಿದ ಕಳ್ಳರು ಕೋಣೆಯಲ್ಲಿದ್ದ ಎರಡು ಕಪಾಟಿನ ಬಾಗಿಲು ಮುರಿದು 7000 ರೂ. ನಗದು ಹಾಗೂ 160 ಗ್ರಾಂ ತೂಕದ 3 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *