ಬಂಟ್ವಾಳ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದು, ಹಿಂದುಳಿದವರ, ಶೋಷಿತರ, ಅಲ್ಪಸಂಖ್ಯಾತರ ಏಳಿಗೆಗಾಗಿ ರಾಜ್ಯ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥರೈ ಹೇಳಿದರು. ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾ ಭವನದಲ್ಲಿ ಮಂಗಳವಾರ ನಡೆದ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

KAR_3121
DSC_0644

 

 

KAR_3120

KAR_3124
ಬಿಪಿಎಲ್ ಕಾರ್ಡ್ಡದಾರರಿಗೆಒಂದು ರೂ.ಗೆ ಒಂದು ಕೆ.ಜಿ.ಅಕ್ಕಿಯಂತೆ ಒಂದು ಕುಟುಂಬಕ್ಕೆ 30 ಕೆ.ಜಿ.ಅಕ್ಕಿ, ಬಳಿಕ ಉಚಿತ ಅಕ್ಕಿ ವಿತರಣೆ ಸಿದ್ದರಾಮಯ್ಯ ಸರಕಾರದ ಮಹತ್ತರ ಯೋಜನೆಯಾಗಿದೆ.ಅದಲ್ಲದೆ, ಕೃಷಿ ಸಾಲ, ಶೈಕ್ಷಣಿಕ ಸಾಲ ಸೇರಿದಂತೆ ವಿವಿಧ ರೀತಿಯ ಸಾಲಗಳನ್ನು ಮನ್ನಾ ಮಾಡುವ ಮೂಲಕ ರಾಜ್ಯ ಸರಕಾರ ದೇಶದಲ್ಲಿಯೇ ಮಾದರಿ ಸರಕಾರವಾಗಿ ಗುರುತಿಸಿದೆ ಎಂದು ಅವರು ಹೇಳಿದರು.
ರಾಜ್ಯ ಕಾಂಗ್ರೆಸ್ ಸರಕಾರದ ಈ ಎಲ್ಲ ಅಭಿವೃದ್ಧಿ ಹಾಗೂ ಪ್ರಗತಿಪರ ಯೋಜನೆಗಳು ಮುಂದಿನ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿದೇಶದಿಂದ ಕಪ್ಪು ಹಣ ತಂದು ದೇಶದ ಪ್ರತೀಯೊಬ್ಬರಿಗೆ ಹಂಚುತ್ತೇವೆ ಸೇರಿದಂತೆ ಹಲವಾರು ಭರವಸೆಗಳನ್ನು ಲೋಕಸಭಾ ಚುನಾವಣಾ ಪೂರ್ವದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನರಿಗೆ ನೀಡಿದ್ದರು. ಆದರೆ ಆ ಭರವಸೆಗಳಲ್ಲಿ ಒಂದನ್ನು ಕೂಡಾ ಕೇಂದ್ರ ಸರಕಾರ ಈವರೆಗೆ ಈಡೆರಿಸಿಲ್ಲ. ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ಸರಕಾರದ ಮೇಲೆ ಜನರು ಭ್ರಮನಿರಸಗೊಂಡಿದ್ದಾರೆ. ದೇಶಾದ್ಯಂತ ಮೋದಿ ಅಲೆ ಮಾಯವಾಗಿದೆ. ಇತ್ತೀಗೆ ನಡೆದ ಬಿಹಾರ ವಿಧಾನ ಸಭಾ ಚುನಾವಣೆ ಹಾಗೂ ಮೊನ್ನೆಯಷ್ಟೇ ನಡೆದ ಗುಜರಾತ್ ಗ್ರಾಮ ಪಂಚಾಯತ್ಗಳ ಫಲಿತಾಂಶ ಇದಕ್ಕೆಉತ್ತಮ ಉದಾಹರಣೆಯಾಗಿದೆ ಎಂದರು.
ಬಂಟ್ವಾಳ ವಿಧಾನ ಸಭಾಕ್ಷೇತ್ರದಲ್ಲಿ ರಸ್ತೆಗಳ ಕಾಮಗಾರಿ, ಕುಡಿಯುವ ನೀರಿನ ಕಾಮಗಾರಿ, ತ್ಯಾಜ ವಿಲೆವಾರಿಕಾರ್ಯ, ನಿರ್ಮಾಣ ಕಾರ್ಯಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳು ಭರದಿಂದ ಸಾಗಿದೆ ಎಂದು ತಿಳಿಸಿದ ಅವರು, ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ತಲಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಕೆಲಸಗಳು ನಡೆಯುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಪ್ರಗತಿಪರ ಯೋಚನೆಯ, ಎಲ್ಲಜಾತಿ ಧರ್ಮಗಳ ಪಕ್ಷವಾಗಿದೆ.ಕಾಂಗ್ರೆಸ್ ತಂದಿರುವ ಯೋಜನೆಗಳ ಬಗ್ಗೆ ವಿರೋಧ ಪಕ್ಷಗಳು ಅನಗತ್ಯ ಟೀಕೆ ಮಾಡುತ್ತಿದೆ. ಹಿಂದುಳಿದವರ, ಅಲ್ಯಸಂಖ್ಯಾತರ ಹಾಗೂ ದಲಿತರ ಉನ್ನತಿಗಾಗಿ ಕಾಂಗ್ರೆಸ್ ಸರಕಾರ ಕೆಲಸ ಮಾಡುತ್ತಿದ್ದು, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಳನ್ನು ಹೆಚ್ಚಿನ ಸಂಖ್ಯೆಯನ್ನು ಆರಿಸಿ ಕಳುಹಿಸಲು ಎಲ್ಲ ಕಾರ್ಯಕರ್ತರು ಬಿನ್ನಾಭಿಪ್ರಾಯವನ್ನು ತೊರೆದು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಉಪಸ್ಥಿತರಿದ್ದರು.ಬಾಲಕೃಷ್ಣ ಕೋಡಾಜೆ ಸ್ವಾಗತಿಸಿ, ರಾಜ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.

ಸಿಎಂ ಜೊತೆಚರ್ಚೆ: ರೈ ಭರವಸೆ
ರಾಜ್ಯದ್ಯಂತ ಬಿಪಿಎಲ್ ಪಡಿತರ ಚೀಟಿಗಳ ರದ್ದುಕಾರ್ಯ ನಡೆಯುತ್ತಿದೆ. ತಿಂಗಳಿಗೆ 450 ರೂ.ನಂತೆ ಸರಾಸರಿ 10 ತಿಂಗಳು 4,500 ರೂ.ಗೆ ಹೆಚ್ಚು ವಿದ್ಯುತ್ ಬಿಲ್ ಬಂದ ಕುಟುಬಸ್ಥರ ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗುತ್ತಿದೆ. ಇದರಿಂದ ಕೆಲವರಿಗೆ ಕಷ್ಟವಾಗುತ್ತಿದೆ. ಈ ಬಗ್ಗೆ ರಾಜ್ಯದ ಎಲ್ಲ ಸಚಿವರು ಮುಖ್ಯಂಮತ್ರಿಯೊಂದಿಗೆ ಚರ್ಚಿಸಿ ಬಿಪಿಎಲ್ ಕಾರ್ಡ್ ರದ್ದು ಕಾರ್ಯವನ್ನು ನಿಲ್ಲಿಸಲಾಗುವುದು. ಆ ಮೂಲಕ ಅರ್ಹ ಬಡವರಿಗೆ ಉಚಿತ ಅಕ್ಕಿ ದೊರೆಯುವ ಹಾಗೆ ಮಾಡಲಾಗುವುದು ಎಂದು ಕಾರ್ಯಕರ್ತರ ಸಭೆಯಲ್ಲಿ ಸಚಿವ ಬಿ.ರಮಾನಾಥರೈ ಭರವಸೆ ನೀಡಿದರು.

By Suddi9

Leave a Reply

Your email address will not be published. Required fields are marked *