ಸೇವಾ ಸಂಸ್ಥೆಗಳು ಸ್ಪರ್ಧಾತ್ಮಕ ಆಗದಿರಲಿ : ಉಪೇಂದ್ರ ಪ್ರಭು
ಮುಂಬಯಿ: ರಾಜಪುರ ಸರಸ್ವತ್ ಬ್ರಾಹ್ಮಣ ಸಮಾಜ ಇದರ ವಿಘ್ನಾಹರ್ತ ಶ್ರೀ ಮಹಾಗಣಪತಿ ಸೇವಾ ಮಂಡಳಿಯ 9ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ದಹಿಸರ್ ಪೂರ್ವದಲ್ಲಿನ ವಿದ್ಯಾ ಪ್ರಸಾರಕ ಮಂಡಳದ ವಿದ್ಯಾಭವನದಲ್ಲಿ ಸೇವಾ ಮಂಡಳದ ಅಧ್ಯಕ್ಷ ವಸಂತ್ ಆರ್.ನಾಯಕ್ ನಕ್ರೆ ಅಧ್ಯಕ್ಷತೆಯಲ್ಲಿ ನೇರವೇರಿಸಿತು. ಬಳಿಕ ಸಾರಸ್ವತ ಉತ್ಸವ ಮತ್ತು ಸಭಾ ಕಾರ್ಯಕ್ರಮ ನಡೆಸಲಾಗಿದ್ದು ಮುಖ್ಯ ಅತಿಥಿಯಾಗಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಇದರ ಪ್ರಧಾನ ಪ್ರಬಂಧಕ ಉಪೇಂದ್ರ ಪ್ರಭು ಹಾಗೂ ಗೌರವ ಅತಿಥಿಯಾಗಿ ಸಿಡ್ಕೋ ಸಂಸ್ಥೆಯ ಮೇಲ್ವಿಚರಣಾ ಅಭಿಯಂತ ರಾಜರಾಮ ಎಸ್.ನಾಯಕ್ ಉಪಸ್ಥಿತರಿದ್ದು, ಸಮಾಜದ ಹಿರಿಯ ಮುತ್ಸದ್ಧಿ ಶಾರದಾ ಬೋರ್ಕರ್ ಅವರನ್ನು ಸನ್ಮಾನಿಸಿ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು.
Vighnahartha Saraswat Utsav-1

Vighnahartha Saraswat Utsav-2

Vighnahartha Saraswat Utsav-3

Vighnahartha Saraswat Utsav-4

Vighnahartha Saraswat Utsav-5

Vighnahartha Saraswat Utsav-8

Vighnahartha Saraswat Utsav-9

Vighnahartha Saraswat Utsav-A1

Vighnahartha Saraswat Utsav-A2

Vighnahartha Saraswat Utsav-A3

Vighnahartha Saraswat Utsav-A4

Vighnahartha Saraswat Utsav-B2

Vighnahartha Saraswat Utsav-B4ಉಪೇಂದ್ರ ಪ್ರಭು ಮಾತನಾಡಿ ಯಾವುದೇ ಸಂಸ್ಥೆಗಳು ಹೆಚ್ಚಿದಷ್ಟು ಸಮಾಜದ ಒಳಿತು ಆಗುತ್ತದೆ. ಅವುಗಳ ಸೇವೆಯು ಆಯಾ ಸಮಾಜಗಳಿಗೆ ಪೂರಕವೂ ಹೌದು. ಆದರೆ ಸೇವಾ ಸಂಸ್ಥೆಗಳು ಸ್ಪರ್ಧಾತ್ಮಕವಾಗಿರಬಾರದು. ಇದರಿಂದ ಎಲ್ಲವೂ ಅವನತಿಯತ್ತ ಸಾಗುವುದು ಎಂದರು. ನಾವೆಲ್ಲರೂ ತಮ್ಮ ಆದಾಯ ಗಳಿಕೆಯ ಕನಿಷ್ಠ 2%ವನ್ನು ಸಮಾಜ ಸೇವೆಗಾಗಿ ವಿನಿಯೋಗಿಸಬೇಕು. ಅಗತ್ಯವುಳ್ಳವರ ಸ್ಪಂದನೆಗಾಗಿ ನಮ್ಮ ಗಳಿಕೆಯ ಲಾಭಾಂಶವನ್ನು ನೀಡಿದಾಗ ನಮ್ಮೆಲ್ಲರಿಗೂ ಪುಣ್ಯಫಲ ಫಲಿಸುವುದು. ಸರ್ವರೂ ಏಕ ಮತ್ತು ಮುಕ್ತ ಮನಸ್ಸಿನಲ್ಲಿ ಒಗ್ಗೂಡಿದಾಗ ಸಮಾಜವು ತನ್ನಿಂತಾನೇ ಉನ್ನತಿ ಸಾಧಿಸಬಲ್ಲದು. ನಿಮ್ಮೆಲ್ಲರ ಏಕತೆಯಿಂದ ಶೀಘ್ರವೇ ಮಂಡಳಿಯ ಸ್ವಂತಿಕೆಯ ಸಭಾಭವನ ಮೂಡಿಬರಲಿ ಎಂದು ರಾಜರಾಮ ನಾಯಕ್ ಆಶಯ ವ್ಯಕ್ತಪಡಿಸಿದರು. ಅಧ್ಯಕ್ಷ ವಸಂತ್ ನಾಯಕ್ ಅಧ್ಯಕ್ಷೀಯ ನುಡಿಗಳನ್ನಾಡಿ ನಮ್ಮದು ಚಿಕ್ಕದಾದ ಸಮಾಜ. ಆದರೆ ಏಕಮನಸ್ಸಿನಲ್ಲಿ ಒಗ್ಗೂಡಿ ಮುನ್ನಡೆದರೆ ಎಲ್ಲವನ್ನೂ ಸುಲಭವಾಗಿ ಸಾಧಿಸ ಬಹುದು. ಅತಿಥಿ ಗಣ್ಯರ ಉವಾಚದಂತೆ ನಾವೆಲ್ಲರೂ ಸಮಾಜದ ಹಿತದೃಷ್ಠಿಯಿಂದ ಶ್ರಮಿಸಿ ಭವಿಷ್ಯತ್ತಿನ ಪೀಳಿಗೆಗೆ ಸ್ವಂತಿಕೆಯ ಸಭಾಭವನ ನಿರ್ಮಿಸೋಣ ಎಂದು ಕರೆಯಿತ್ತರು. ಗೌರವಾಧ್ಯಕ್ಷ ಗೋಪಾಲ ಆರ್.ನವಲ್ಕರ್, ಉಪಾಧ್ಯಕ್ಷ ರಮೇಶ್ ಎಸ್.ನಾಯಕ್, ಜೊತೆ ಕಾರ್ಯದರ್ಶಿಗಳಾದ ಗೋಪಾಲ್ ಎ.ನಾಯಕ್ ಮತ್ತು ಶಶಿಕಾಂತ್ ಡಿ.ನಾಯಕ್, ಜೊತೆ ಕೋಶಾಧಿಕಾರಿ ಆನಂದ್ ಕೆ.ಪ್ರಭು, ಸದಸ್ಯರುಗಳಾದ ನಾರಾಯಣ ಎ.ನಾಯಕ್, ಶ್ರೀಮತಿ ಸಿದ್ಧಿ ಆರ್.ಪ್ರಭು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸ್ಮೀತಾ ಪಾಟ್ಕರ್, ಮ್ಯಾರೇಜ್ ಬ್ಯೂರೋ ಸಂಚಾಲಕ ವಿದ್ವಾನ್ ರಮೇಶ್ ಭಟ್, ವೇದಿಕೆಯಲ್ಲಿ ಆಸೀನರಾಗಿದ್ದರು. ವಿಘ್ನಾಹರ್ತ ಭಜನಾ ಮಂಡಳಿ ಸದಸ್ಯರು ಪ್ರಾರ್ಥನೆ ಮತ್ತು ಭಜನೆಗೈದರು. ಕಾರ್ಯದರ್ಶಿ ಎನ್.ಶ್ರೀನಿವಾಸ ನಾಯಕ್ ಸ್ವಾಗತಿಸಿದರು. ನಾರಾಯಣ ನಾಯಕ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಭರತ್ ವಿ.ಕಾಮತ್ ವಂದಿಸಿದರು.

By Suddi9

Leave a Reply

Your email address will not be published. Required fields are marked *