ಮುಂಬಯಿ: ಪರ್‍ಫೆಕ್ಟ್ ವುಮೆನ್ ಮ್ಯಾಗಝಿನ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕೊಂಕಣಿ-ಕನ್ನಡತಿ ಅಪೂರ್ವ ವಸಂತ್ ನಾಯಕ್ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡು `ಪರ್‍ಫೆಕ್ಟ್ ಮಿಸ್ ಇಂಡಿಯಾ-2015′ ಕಿರೀಟ ಮುಡಿಸಿ ಕೊಂಡರು.
ಕಳೆದ ಶುಕ್ರವಾರ ಮುಂಬಯಿ ಉಪನಗರದ ಬಾಂದ್ರಾ ಪಶ್ಚಿಮದಲ್ಲಿನ ಸೈಂಟ್ ಆಂಡ್ರ್ಯೂಸ್ ಆಡಿಟೋರಿಯಂನಲ್ಲಿ ಪರ್‍ಫೆಕ್ಟ್ ಮ್ಯಾಗಝಿನ್ ಬಳಗವು ಆಯೋಜಿಸಿದ್ದು, ದೇಶದಾದ್ಯಂತದ ನೂರಾರು ಸುಂದರ ಕನ್ಯೆಯರು ಪಾಲ್ಗೊಂಡಿದ್ದರು. ಸುಮಾರು ಹನ್ನೆರಡು ತೀರ್ಪುಗಾರರನ್ನೊಳಗೊಂಡಿದ್ದ ಸ್ಪರ್ಧೆಯಲ್ಲಿ ರ್ಯಾಂಪ್ ವಾಕ್, ಪ್ರತಿಭಾ ಸುತ್ತು (ಟ್ಯಾಲೆಂಟ್ ರೌಂಡ್), ವೇರ್ ರೌಂಡ್ ಸೇರಿದಂತೆ ಅನೇಕ ಸುತ್ತುಗಳನ್ನೊಳಗೊಂಡ ಸ್ಪರ್ಧೆಯಲ್ಲಿ ಜ್ಯೂರಿಯರ ನಿರ್ಣಾಯಕ್ಕೆ ಪಾತ್ರವಾಗಿ ಅಪೂರ್ವ ನಾಯಕ್ ಸ್ಪರ್ಧಾ ವಿಜೇತರೆಣಿಸಿದರು.
Apoorva Vasant Nayak-1

Apoorva Vasant Nayak-2

Apoorva Vasant Nayak-3

Apoorva Vasant Nayak-4 (1)

Apoorva Vasant Nayak-5

Apoorva Vasant Nayak-6

Apoorva Vasant Nayak-7

Apoorva Vasant Nayak-8

Apoorva Vasant Nayak-9ಕಳೆದ ಅಕ್ಟೋಬರ್ ದ್ವಿತೀಯ ವಾರದಲ್ಲಿ ಮಹಾನಗರದಲ್ಲಿ ನಡೆಸಲ್ಪಟ್ಟ ವರ್ಧಮಾನ್ ಫ್ಯಾಂಟಸಿ ಫೇಸ್ ಆಫ್ ದ ಇಯರ್ ಕಾರ್ಯಕ್ರಮದಲ್ಲಿ ಅಪೂರ್ವ ವಸಂತ್ ನಾಯಕ್ `ಫೇಸ್ ಆಫ್ ದ ಇಯರ್ 2015 ಕಿರೀಟ’ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದರು. ಅಂಧೇರಿ ಪೂರ್ವದ ಜೆ.ಬಿ ನಗರ್ ನಿವಾಸಿ ಆಗಿರುವ ಅಪೂರ್ವ ಅಂಧೇರಿ ಪೂರ್ವದ ಡಿವೈನ್‍ಚೈಲ್ಡ್ ಹೈಸ್ಕೂಲು ಮತ್ತು ಸಾಟೆ ಕಾಲೇಜುವಿದ್ಯಾರ್ಥಿ ಆಗಿದ್ದು, ಅಪೂರ್ವ ವಿದ್ಯಾರ್ಥಿ ಜೀವನದಲ್ಲೇ ಪ್ರತಿಭಾನ್ವಿತಳಾಗಿ ನೂರಾರು ಪುರಸ್ಕಾರ ಗೌರವಕ್ಕೆ ಪಾತ್ರರ್ದರು. ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ನಕ್ರೆ ಅಲ್ಲಿನ ಹೆಸರಾಂತ ಸಮಾಜ ಸೇವಕ, ಯುವ ಉದ್ಯಮಿ ವಸಂತ್ ಆರ್.ನಾಯಕ್ ಮತ್ತು ಗೀತಾ ವಸಂತ್
ನಾಯಕ್ ದಂಪತಿ ಏಕೈಕ ಸುಪುತ್ರಿ ಅಪೂರ್ವ ಆಗಿದ್ದಾರೆ. ಬೃಹನ್ಮುಂಬಯಿಯಲ್ಲಿನ ಶ್ರೀ ವಿಘ್ನಹರ್ತ ಡೆವೆಲಪರ್ಸ್ ಸಂಸ್ಥೆಯ ಪ್ರಧಾನ ಪ್ರವರ್ಧನಕ, ಉಡುಪಿ ಅಲ್ಲಿನ `ಆರ್‍ಎಸ್‍ಬಿ ವಿಂಡ್ಸರ್’ ಸಮುಚ್ಚಯದ ರೂವಾರಿ ವಸಂತ್ನಾಯಕ್ ಅವರು ರಾಜಾಪುರ ಸಾರಸ್ವತ ಸಂಘ ಮುಂಬಯಿ ಇದರ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿರುವರು.

By Suddi9

Leave a Reply

Your email address will not be published. Required fields are marked *