ಬಂಟ್ವಾಳ : ಗಿರಿಜನ ಉಪಯೋಜನೆ ವಿಶೇಷ ಘಟಕ ಯೋಜನೆಯಡಿ ಲೋಕೋಪಯೋಗಿ ಇಲಾಖೆಯ ಮೂಲಕ 10ಲಕ್ಷ ವೆಚ್ಚದಲ್ಲಿ ಕೊಂಬ್ರಬೈಲಿನಿಂದ ಆಚಾರಿಪಲ್ಕೆಯ ರಸ್ತೆ ಡಾಮರೀಕರಣದ ಶಿಲಾನ್ಯಾಸವನ್ನು ಅರಣ್ಯ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ , ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್ ಪ್ರಮುಖರಾದ ಸದಾನಂದ ಶೆಟ್ಟಿ, ದಿನೇಶ್ ಶೆಟ್ಟಿ, ದೇವಪ್ಪ ಕುಲಾಲ್, ಸುರೇಶ್ ಜೋರಾ, ಸಂತೋಷ್ ಕೊಂಬ್ರಬೈಲು , ಲಿಯೋ ಮೆನೆಜಸ್, ರವಿ ಪೂಜಾರಿ, ವಿಶ್ವನಾಥ ಶೆಟ್ಟಿ ಬುಡೋಳಿ , ವಿಶ್ವನಾಥ ಟೈಲರ್, ಕೃಷ್ಣರಾಜ್ ಜೈನ್ ಉಪಸ್ಥಿತರಿದ್ದರು.
