ಬಂಟ್ವಾಳ : ಜೀವ ವಿಮಾ ನಿಗಮದ ಬಂಟ್ವಾಳ ಶಾಖೆಯಲ್ಲಿ ಸುದೀರ್ಘ ಮೂವತ್ತು ವರ್ಷ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಶ್ರೀ ಶಿವಶಂಕರ್ ರವರನ್ನು ಬಂಟ್ವಾಳ ಶಾಖೆಯ ಹಿರಿಯ ಪ್ರಬಂಧಕರಾದ ಡಿ.ಬಾಲಕೃಷ್ಣ ರವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಆಡಳಿತ ಪ್ರಬಂಧಕ ಬಿ.ಎಸ್.ನಾಯಕ್, ಅಭಿವೃದ್ಧಿ ಅಧಿಕಾರಿ ಆರ್ ಸತೀಶ್, ಕಾರ್ಯದರ್ಶಿ ಬಿ.ಇಂದಿರೇಶ್ ಹಾಗೂ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು.
