ಬಂಟ್ವಾಳ: ಅಪ್ರಾಪ್ತ ಯುವತಿಯ ಅಪಹರಿಸಿ ಮಾರಾಟ ಮಾಡಿದ ಪ್ರಕರಣದ ಆರೋದಲಿಓರ್ವಳು ಮಹಿಳೆ ಸೇರಿದಂತೆ ಇನ್ನೋರ್ವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸುಮಾರು 2 ತಿಂಗಳ ಹಿಂದೆ ಕಾಣೆಯಾಗಿದ್ದ ಸರಪಾಡಿಯ ಆಶಾಲತಾ ಮಾರಾಟ ಪ್ರಕರಣದ ಪ್ರಮುಖ ಅರೋಪಿಗಳಲ್ಲಿ ಆಕೆಯ ಚಿಕ್ಕಮ್ಮ ಸವಿತಾ ಅವರನ್ನು ಸರಪಾಡಿಯ ಮನೆಯಿಂದ ಮತ್ತು ಅರೋಪಿ ಅಶೋಕ್ನ ಚಿಕ್ಕಪ್ಪ ಧರ್ಮರಾಜ್ ಎಂಬವನನ್ನು ನಿನ್ನೆ ಮಂಗಳೂರಿನಲ್ಲಿ ಬಂಧಿಸಲಾಗಿದೆ.

ಅರೋಪಿಗಳ ಬಂಧನಕ್ಕಾಗಿ ಬಂಟ್ವಾಳ ಗ್ರಾಮಾಂತರ ಉಪನಿರೀಕ್ಷಕ ನಾಗಾರಾಜ್ ನೇತ್ರತ್ವದ ತಂಡ ವಾರಗಳ ಹಿಂದೆ ಬಿಜಾಪುರಕ್ಕೆ ತೆರಳಿತ್ತು, ಅಲ್ಲಿಂದ ಮಾಹಿತಿ ಪ್ರಕಾರ ಅಲ್ಲೇ ಹತ್ತಿರದ ಮಹಾರಾಷ್ಟ್ರದಲ್ಲಿ ಇದ್ದಾರೆ ಎಂದು ಅಲ್ಲಿಗೂ ಹೋಗಿದ್ದರು. ಆದರೆ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದ ತಂಡ ಬರಿಗೈಯಲ್ಲಿ ವಾಪಾಸಾಗಿತ್ತು. ನಿನ್ನೆ ಮಂಗಳೂರಿನಲ್ಲಿ ಹುಡಿಗಿಯನ್ನು ಅಪಹರಿಸಿದ ಪ್ರಮುಖ ಅರೋಪಿ ಆಶೋಕ್ನ ಚಿಕ್ಕಪ್ಪ ಧರ್ಮರಾಜ್ ಎನ್ನುವನನ್ನು ಬಂಧಿಸಿದ್ದಾರೆ ಮತ್ತು ಈ ಪ್ರಕರಣಕ್ಕೆ ಸಹಾಯ ಮಾಡಿದಂತಹ ಅಶಾಲತಾಳ ಚಿಕ್ಕಮ್ಮ ಸವಿತಾರನ್ನು ಕೂಡಾ ಬಂಧಿಸಿ ನ್ಯಾಯಾಂಗ ಬಂಧನ ನೀಡಲಾಗಿದೆ.
ಘಟನೆಯ ವಿವರ:
ಅಪ್ರಾಪ್ತ ವಯಸ್ಕ ತರುಣಿಯ ಅಪಹರಣ ಪ್ರಕರಣವೊಂದರ ಬಗ್ಗೆ ಮಾ. 17ರಂದು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು. ಇದೀಗ ಆಕೆಯು ಮುಂಬೈಯಲ್ಲಿ ಇರುವುದಾಗಿ ಮಾಹಿತಿ ಲಭ್ಯವಾಗಿದ್ದು ವ್ಯವಸ್ಥಿತ ದಂಧೆಯ ಜಾಲಕ್ಕೆ ತರುಣಿಯು ಬಿದ್ದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
ಪ್ರಕರಣವನ್ನು ಅಪಹರಣ ಎಂದು ಹೇಳಲು ಮುಖ್ಯ ಕಾರಣ ತರುಣಿಯ ಚಿಕ್ಕಮ್ಮ ಸ್ವತ: ಅವಳನ್ನು ಬಂಟ್ವಾಳದ ತನಕ ಕರೆತಂದು ಕಾರಿನಲ್ಲಿ ಕುಳ್ಳಿರಿಸಿ ಬಿಟ್ಟಿರುವುದು ಇಲ್ಲಿನ ಸಿಸಿ ಕೆಮರಾದಲ್ಲಿ ದಾಖಲಾಗಿತ್ತು. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಪಹರಣ ನಡೆಸಿದ ವ್ಯಕ್ತಿ ದೂರದ ಬಿಜಾಪುರದ ಚಿಕ್ಕೋಟ ನಿವಾಸಿ ಅಶೋಕ ಎಂಬ ಹೆಸರಿನವ ಎಂದು ಮಾಹಿತಿಯನ್ನು ಪೊಲೀಸರು ಮತ್ತು ಕುಟುಂಬ ಮೂಲಗಳು ಸಂಗ್ರಹಿಸಿವೆ. ಅವನು ದ್ರಾಕ್ಷಿ ವ್ಯಾಪಾರಕ್ಕಾಗಿ ಮಂಗಳೂರಿಗೆ ಬರುತ್ತಿದ್ದ ಎನ್ನಲಾಗಿದ್ದು ತರುಣಿಯ ಜೊತೆಗೆ ಹೇಗೆ ಸಂಪರ್ಕ ಆಯಿತು ಎಂಬುದು ಸ್ಪಷ್ಟವಾಗಿಲ್ಲ ಎಂದು ಮನೆ ಮಂದಿ ಹೇಳುತ್ತಾರೆ.
ನಾವೂರು ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಸರಪಾಡಿ ಗ್ರಾಮ ನಡಾಯಿ ನಿವಾಸಿ ದಿ| ಜಯಂತ ಪೂಜಾರಿ ಅವರ ಹದಿನೈದರ ಹರೆಯದ ಪುತ್ರಿ ಅಪಹೃತ ತರುಣಿ. ಅಪಹರಣದ ಹಿಂದೆ ವ್ಯವಸ್ಥಿತ ಜಾಲವಿದೆ ಎಂದು ಮನೆಮಂದಿ ಶಂಕಿಸಿದ್ದಾರೆ.
ಸಿಸಿ ಕೆಮರಾ ಮಾಹಿತಿಯಂತೆ ಐಶಾರಾಮಿ ಕಾರಿನಲ್ಲಿ ಬಂದವರು ತರುಣಿಯ ಚಿಕ್ಕಮ್ಮನ ಜೊತೆಗೆ ಮಾತನಾಡಿ ಅವಳನ್ನು ಬಂಟ್ವಾಳದ ದೇವಸ್ಥಾನವೊಂದರ ಬಳಿಯಿಂದ ಕರೆದುಕೊಂಡು ಹೋಗಿದ್ದಾರೆ.
ಮಾ. 17ರಂದು ರಾತ್ರಿ ದೂರು ನೀಡಿದ್ದರೂ ಪೊಲೀಸರು ಸಮರ್ಪಕ ಕಾನೂನು ಕ್ರಮ ಕೈಗೊಂಡಿಲ್ಲ ಎಂಬುದು ಮನೆಮಂದಿಯ ದೂರು. ತನಿಖೆ ನಡೆಸಲು ಇಷ್ಟೊಂದು ಸುದೀರ್ಘ ಸಮಯ ಬೇಕಿತ್ತೆ ಎಂಬ ಆರೋಪವನ್ನು ಕೂಡಾ ಮಾಡಿದ್ದರು.

