ಬಜಪೆ: ಮಕ್ಕಳ ದೈಹಿಕ-ಮಾನಸಿಕ ಬೆಳವಣಿಗೆ ಹಾಗೂ ಪ್ರತಿಭೆ ಕಸನಕ್ಕೆ ಸಂಬಂಸಿ ತಾಯಾಂದಿರ ಕ್ರಿಯಾಶೀಲತೆ ಪ್ರಮುಖವಾದುದು. ಅಂಗನವಾಡಿಗಳ ಪುಟಾಣಿಗಳನ್ನೂ ಒಂದೆಡೆ ಸೇರಿಸಿ ಮಕ್ಕಳ ಹಬ್ಬ ಆಚರಿಸುವುದು ಮುದ ನೀಡುವ ಕಾರ್ಯಕ್ರಮ ಜತೆಗೆ ತಾಯಂದಿರಿಗೆ ಇವೆಲ್ಲವುಗಳ ಬಗ್ಗೆ ಸಮರ್ಪಕ ಜಾಗೃತಿ ಕೂಡಾ ಮೂಡಿಸಬೆಕಾಗಿದೆ” ಎಂದು ಜಿಲ್ಲಾ ಪಂಚಾಯತಿ ಸದಸ್ಯ ಜನಾರ್ದನ ಗೌಡ ಹೇಳಿದರು.

ಎಡಪದವು ಸ್ತ್ರೀ ಶಕ್ತಿ ಭವನದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ಮಂಗಳೂರು ಗ್ರಾಮಂತರ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಮಂಗಳೂರು ಗ್ರಾಮಾಂತರ ತೆಂಕೆಎಡಪದವು ಹಾಗೂ ಬಡಗ ಎಡಪದವು ಗ್ರಾಮ ಪಂಚಾಯತಿಗಳು ಅಂಗನವಾಡಿ ಕಾರ್ಯಕರ್ತೆಯರು ಕೊಂಪದವು ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಜರಗಿದ ಅಂಗನವಾಡಿ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಡಪದವು ಸ್ವಾಮಿವಿವೇಕನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಾಸು ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
“ಮಕ್ಕಳ ಬಗೆಗೆ ತಾಯಂದಿರನ್ನು ಜಾಗೃತಗೊಳಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ ಅತ್ಯಂತ ಪ್ರಾಮುಖ್ಯವಾದುದು” ಎಂದು ಹೇಳಿದರು.
ಎಡಪದವು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಡಗ ಎಡಪದವು ಗ್ರಾ.ಪಂ.ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷ ಹರೀಶ್, ತೆಂಕ ಎಡಪದವು ಗ್ರಾ.ಪಂ.ಉಪಾಧ್ಯಕ್ಷ ಗಂಗಾಧರ, ಮಕ್ಕಳ ರಕ್ಷಣಾಕಾರಿ ವಜೀರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಭೋಗಮಲ್ಲಣ್ಣ, ಸವಿತಾ, ಹರಿಯ ಆರೋಗ್ಯ ಸಹಾಯಕಿ ಗೀತಾ ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿಯ ಉಪಾಧ್ಯಕ್ಷ ಸಾವಿತ್ರಿ ಎರಡೂ ಗ್ರಾ.ಪಂಗಳ ಸದಸ್ಯರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಮಂದಿ ಪುಟಾಣಿ ಮಕ್ಕಳು ಹಾಗೂ ಅವರ ತಾಯಂದಿರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಪುಟಾಣಿಗಳಿಂದ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಗಮನ ಸೆಳೆುತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮಾಲಿನಿ ಸ್ವಾಗತಿಸಿ ನಿರೂಪಿಸಿದರು. ಚಂದ್ರಾವತಿ ವಂದಿಸಿದರು ಅಂಗವಾಡಿ ಕಾರ್ಯಕರ್ತೆಯರು ನಾಡಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.
