ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಮಾಂಜದಲ್ಲಿರುವ ಗೋಶಾಲೆಯಲ್ಲಿ ಸೋಮವಾರ ಕಿನ್ನಿಗೋಳಿಯ ಸಜ್ಜನ ಬಂಧುಗಳ ಸಂಯೋಜನೆಯಲ್ಲಿ ಗೋಪೂಜೆ ನಡೆಯಿತು. ಗೋವುಗಳಿಗೆ ಅರ್ಚಕ ಅನಂತ ಆಸ್ರಣ್ಣ ಆರತಿ ಬೆಳಗಿ, ಕಟೀಲು ಕ್ಷೇತ್ರದಲ್ಲಿ ಕಾಮಧೇನುವಿನ ಮಗಳು ನಂದಿನಿ ನದಿಯಾಗಿ ಹರಿಯುತ್ತಿರುವುದರಿಂದ ಇಲ್ಲಿ ಗೋವುಗಳಿಗೆ ವಿಶೇಷ ಮಹತ್ವ ಕಲ್ಪಿಸಲಾಗುತ್ತಿದೆ ಎಂದರು.
ಇದೇ ಸಂದರ್ಭ ಗೋವುಗಳನ್ನು ಉಪಚರಿಸುವ ಸಿಬಂದಿಗಳನ್ನು ಸತ್ಕರಿಸಲಾಯಿತು.
ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಉಮೇಶ ರಾವ್ ಎಕ್ಕಾರು, ಜಿ.ಪಂ.ಸದಸ್ಯ ಈಶ್ವರ್, ಕಟೀಲು ಪಂಚಾಯತ್ ಅಧ್ಯಕ್ಷೆ ಗೀತಾ, ಲೋಕಯ್ಯ ಸಾಲ್ಯಾನ್, ಅರುಣ್, ದಯಾನಂದ್, ತಿಮ್ಮಪ್ಪ ಕೋಟ್ಯಾನ್, ರಮಾನಂದ ಪೂಜಾರಿ, ಕಳತ್ತೂರು ರಾಘವೇಂದ್ರ ಭಟ್, ದೇವಿಪ್ರಸಾದ್ ಶೆಟ್ಟಿ, ಸ್ಟ್ಯಾನಿ ಪಿಂಟೋ, ಸಜ್ಜನ ಬಂಧುಗಳ ಸಂಘಟನೆಯ ರಘುನಾಥ ಕಾಮತ್, ಜನಾರ್ದನ ಕಿಲೆಂಜೂರು, ನಿಶಾಂತ್, ಪ್ರಕಾಶ್ ಆಚಾರ್ ಮತ್ತಿತರರಿದ್ದರು.
