ಬಂಟ್ವಾಳ: ಸಂಘ ಸಂಸ್ಥೆಗಳು ಸಮಾಜದ ಏಳಿಗೆಗೆಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ನಿರಂತರವಾಗಿ ಶ್ರಮಿಸುತ್ತಿದೆ, ಪೂರಕವಾದ ವಾತಾವರಣವನ್ನು ಕಲ್ಪಿಸುವುದರ ಜೊತೆಗೆ ಸಮಾಜ ಮುಖೇನ ಕೆಲಸಗಳಲ್ಲಿ ತೊಡಗಿಸಿಕೊಂಡಿವೆ. ಇಂತಹ ಹಲವು ಕೆಲಸಗಳು ನಿರಂತರವಾಗಿ ಬೆಳೆದು ಬರಲಿ ಆಗ ಪ್ರತಿಯೊಬ್ಬ ಸದಸ್ಯರ ಒಳಿತಿಗೆ ಕಾರಣವಾಗುತ್ತದೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ (ರಿ) ಬಂಟ್ವಾಳ ತಾಲೂಕಿನ ಕಲ್ಲಡ್ಕ ವಲಯದ ಸ್ವ ಸಹಾಯ ಸಂಘದ ವಿವಿದ ಫಲಾನುಭವಿಗಳಿಗೆ ಅನುದಾನವನ್ನು ವಿತರಿಸಿ ಅಧ್ಯಕ್ಷತೆ ವಹಿಸಿ ಬಂಟ್ವಾಳ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಯಾದ ಕುಮಾರಿ ಸುನೀತಾ ನಾಯಕ್ರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಂಟ್ವಾಳ ತಾಲೂಕಿಗೆ ಸಂಬಂಧಿಸಿದ ಸ್ವ ಸಹಾಯ ಸಂಘದ ಸದಸ್ಯರಿಗೆ ಸಂಬಂಧಿಸಿದಂತೆ ಸೋಲಾರ್ ಅಳವಡಿಕೆಗೆ, ಶಿಷ್ಯ ವೇತನ, ಕೃಷಿ ಅಭಿವೃದ್ಧಿ ಮುಂತಾದವುಗಳ ಫಲಾನುಭವಿಗಳಿಗೆ ಅನುದಾನವನ್ನು ಕಲ್ಲಡ್ಕ ವಲಯದ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಲ್ಲಡ್ಕ ವಲಯಾಧ್ಯಕ್ಷರಾದ ವೆಂಕಟ್ರಾಯ ಭಟ್, ವಲಯ ಮೇಲ್ವಿಚಾರಕರಾದ ಶಿವಪ್ಪ ಎಂ.ಕೆ ಸೇವಾ ಪ್ರತಿನಿಧಿಯವರಾದ ಎವ್ಲಿನ್ ಡಿಸೋಜ, ಸುಜಾತ, ಅಕ್ಷತಾ,ಪ್ರೇಮ ಪದ್ಮಶ್ರೀ, ಗಿರಿಜಾ, ವನಿತಾ, ತಾಂತ್ರಿಕ ತರಬೇತಿ ಸಹಾಯಕರಾದ ಸುಲೋಚನಾ ಗಣೇಶ್ ನಾಯ್ಕ್ ರವರು ಭಾಗವಹಿಸದ್ದರು. ಗೋಳ್ತಮಜಲು ಒಕ್ಕೂಟದ ಸೇವಾಪ್ರತಿನಿಧಿ ಶ್ರೀಮತಿ ಲಕ್ಷ್ಮೀಯವರು ಧನ್ಯವಾದವಿತ್ತರು.
