ಬಂಟ್ವಾಳ: ಮಕ್ಕಳನ್ನು ಮನುಷ್ಯರಾಗಿ ಬೆಳೆಸಿದಾಗ ಸಮಾಜದಲ್ಲಿ ದುಷ್ಕ್ರತ್ಯಗಳು ನಡೆಯುದಿಲ್ಲ ಎಂದು ನರಿಕೊಂಬು ಗೃಆ.ಪಂ. ಅಧ್ಯಕ್ಷ ಯಶೋಧರ ಹೇಳಿದರು. ಅವರು ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಬಂಟ್ವಾಳ, ಸಮನ್ವಯ ಸಮಿತಿ ವೀರಮಾರುತಿ ಅಂ. ಕೇಂದ್ರ, ಸ್ತ್ರೀ ಶಕ್ತಿ ಗುಂಪು ಮತ್ತು ಪೋಷಕರು ವೀರಮಾರುತಿ ಅಂಗನವಾಡಿ ಇವರ ಸಂಯುಕ್ತ ಆಶ್ರಯದಲ್ಲಿ ವೀರಮಾರುತಿ ಅಂ. ಕೇಂದ್ರದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ತಾಯಂದಿರು ಮಕ್ಕಳ ತುಲನೆ ಮಾಡುವುದನ್ನು ಬಿಟ್ಟು, ಸಂಸ್ಕಾರವನ್ನು ನೀಡಿ ಎಂದರು.
DSC_0042ಕಾರ್ಯಕ್ರಮವನ್ನು ಗ್ರಾ.ಪಂ. ಸದಸ್ಯೆ ಬೇಬಿ ಉದ್ಘಾಟಿಸಿದರು. ಈ ಸಂದರ್ಭ ಮೇಲ್ವಿಚಾರಕಿ ಪುಷ್ಪಲತಾ, ಗ್ರಾ.ಪಂ. ಸದಸ್ಯರಾದ ಜುಬೈದ, ಸಮನ್ವಯ ಸಮಿತಿ ಸದಸ್ಯರಾದ ಮೋಹನ್ ಆಚಾರ್ಯ, ಚಂದ್ರಹಾಸ, ಪ್ರಮುಖರಾದ ರಮೇಶ್ ಮತ್ತು ಸ್ತ್ರೀ ಶಕ್ತಿ ಸದಸ್ಯರು, ಪೋಷಕರು ಮತ್ತಿತರರು ಉಪಸ್ಥಿತರಿದ್ದರು. ಅಂ. ಕಾರ್ಯಕರ್ತೆ ಸ್ವಾಗತಿಸಿ, ವಂದಿಸಿದರು.

By Suddi9

Leave a Reply

Your email address will not be published. Required fields are marked *