ಪುಸ್ತಕ ಓದುವ ಹವ್ಯಾಸವನ್ನು ಎಲ್ಲರಲ್ಲೂ ಜಾಗೃತಗೊಳಿಸಬೇಕು
-ಸಾಹಿತಿ ಉಮೇಶ್ ರಾವ್ ಎಕ್ಕಾರು
ಬಜಪೆ: ಪ್ರಸ್ತುತ ಸನ್ನಿವೇಶದಲ್ಲಿ ತಾಂತ್ರಿಕ ಅಭಿವೃದ್ದಿಯ ಪರಿಣಾಮವಾಗಿ ಮಕ್ಕಳು ಹಾಗೂ ಹಿರಿಯರಲ್ಲಿ ಓದುವ ಪರಿಪಾಠ ಕಡಿಮೆಯಾಗಿದೆ. ಪುಸ್ತಕ ಓದುವ ಹವ್ಯಾಸವನ್ನು ಎಲ್ಲರಲ್ಲೂ ಜಾಗೃತಗೊಳಿಸುವ ಪ್ರೇರಣೆ ಸತತ ಆಗಬೇಕು. ಬಹುಮಾನ ಹಾಗೂ ಸ್ಮರಣಿಕೆಗಳಾಗಿ ಉತ್ತಮ ಪುಸ್ತಕಗಳನ್ನು ನೀಡುವುದು ಉತ್ತಮ ಬೆಳವಣಿಗೆ. ಮಕ್ಕಳಲ್ಲಿ ಪಠ್ಯಪುಸ್ತಕಗಳಲ್ಲದೆ ಬಹುಮುಖ್ಯ ಜ್ಞಾನವೃದ್ಧಿಯ ಪುಸ್ತಕಗಳನ್ನು ಓದುವಂತೆಯೂ ಪ್ರೇರೇಪಿಸಬೇಕು. ಎಂದು ಸಾಹಿತಿ ಉಮೇಶ್ ರಾವ್ ಎಕ್ಕಾರು ಅವರು ಹೇಳಿದರು.
ಅವರು ಎಕ್ಕಾರು ಕುಂಭ ಕಂಠಿಣಿ ಸಂಭಾಂಗಣದಲ್ಲಿ ಮಂಗಳವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಹಾಗೂ ಎಕ್ಕಾರು ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಸಹಯೋಗದಲ್ಲಿ ಜರಗಿದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಕ್ಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು.
ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು ಅವರು ಈ ಸಂಧರ್ಭ ಮಾತನಾಡಿ-* ಎಲ್ಲಾ ಗ್ರಾ.ಪಂಗಳ ವ್ಯಾಪ್ತಿಯಲ್ಲಿ ಕಾಲಕಾಲಕ್ಕೆ ಪುಸ್ತಕ, ಗ್ರಂಥಗಳ ಮಹತ್ವ ಸಾರುವ ಉಪಯುಕ್ತ ಹಾಗೂ ಮಹತ್ವ ಪೂರ್ಣ ಕಾರ್ಯಕ್ರಮಗಳು ನಡೆದರೆ ಪ್ರಾಧೇಶಿಕವಾಗಿ ಮಕ್ಕಳು ಹಾಗೂ ಹಿರಿಯರಲ್ಲಿ ಪುಸ್ತಕ ಓದುವ ಕಾಳಜಿ ಜಾಗೃತಗೊಳಿಸಲು ಸಾಧ್ಯ. ವಿದ್ಯಾಭ್ಯಾಸ ನಡೆಸುವ ಮಕ್ಕಳನ್ನು ಕೇವಲ ಪಠ್ಯ ವಿಶಯಗಳಿಗೆ ಮಾತ್ರ ಸೀಮಿತಗೊಳಿಸದೆ ದೇಶಭೀಮಾನ ಮೂಡಿಸುವ ನಿಟ್ಟಿನಲ್ಲಿ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಬೇಕು.* ಎಂದು ಹೇಳಿದರು.

ಎಕ್ಕಾರು ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರೀ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಡಿಸೋಜಾ, ದುರ್ಗೇಶ್ ಶೆಟ್ಟಿ ಉದ್ಯಮಿ ಸಂದೀಪ್ ಶೆಟ್ಟಿ ಮುರವೂರು, ಗ್ರಾ.ಪಂ ಸದಸ್ಯರುಗಳಾದ ವಿಕ್ರಂ ಮಾಡ, ಶಿಲಾ ಹಾಗೂ ಸುದೀಪ್ ಅಮೀನ್ ಮುಂತಾದವರು ವೇದಿಕೆಯಲ್ಲಿದ್ಧರು.

ಪುಸ್ತಕ ಪ್ರದಾನ.:
ವೇದಿಕೆಯ ಅತಿಥಿಗಳಿಗೆ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಸಾಂಸ್ಕøತಿಕ ಕಾರ್ಯಕ್ರಮ ನೀಡಿದ ಮಕ್ಕಳಿಗೆ ಹಾಗೂ ಕಲಾವಿದರಿಗೆ ಹಾಗೂ ಸಾಂಸ್ಕ್ರತಿಕ ವೈವಿದ್ಯ ಸ್ಪರ್ಧಾ ವಿಜೇತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಸ್ಮರಣಿಕೆ ಹಾಗೂ ಬಹುಮಾನಗಳಾಗಿ ಪುಸ್ತಕಗಳನ್ನೇ ನೀಡಲಾಗಿದೆ.
ಎಕ್ಕಾರು ಗ್ರಾ.ಪಂ ಗ್ರಂಥಾಲಯ ಮೇಲ್ವಿಚಾರಕಿ ಹೇಮಲತಾ ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ ಕಿಣಿ ಸ್ವಾಗತಿಸಿದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.
ಉತ್ತಮ ಓದುಗ ಪುರಸ್ಕಾರ
ಎಕ್ಕಾರು ಪಂಚಾಯಿತಿ ಗ್ರಾಂಥಾಲಯಕ್ಕೆ ಸಂಬಂಧಪಟ್ಟ ಉತ್ತಮ ಓದುಗರಾಗಿ ನಿತ್ಯ ಓದುಗರಾದ ಜಯಲಕ್ಷ್ಮೀ ಅವರು ಪ್ರಥಮ ಬಹುಮಾನ ಪಡೆದರು
ಎಕ್ಕಾರು ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲಾ ಮಕ್ಕಳು ಪ್ರಸ್ತುತ ಪಡಿಸಿದ ಸಾಂಸ್ಕ್ರತಿಕ ವೈವಿಧ್ಯ ಕಾರ್ಯಕ್ರಮದಲ್ಲಿ ಪುಸ್ತಕ-ಗ್ರಂಥಗಳ ಮಹತ್ವಸಾರುವ ಕಿರು ಪ್ರಸನ ಕಡ್ಡಾಯವಾಗಿದ್ದು ಅತ್ಯುತ್ತಮವಾಗಿ ಮೂಡಿಬಂತು.
ಬಳಿಕ ನೃತ್ಯ ವೈವಿದ್ಯ, ಭರತನಾಟ್ಯ, ಗೀತರೂಪಕ, ಪಟ್ಲ ಸತೀಶ್ ಶೆಟ್ಟಿ ರವಿಚಂದ್ರ ಕನ್ನಡಿಕಟ್ಟೆ ಬಳಗದಿಂದ ಯಕ್ಷಗಾಯನ ಸಂಭ್ರಮ.

By suddi9

Leave a Reply

Your email address will not be published. Required fields are marked *