ಪರಿಸರ, ಕೃಷಿ ಸಂಸ್ಕøತಿ ಜತೆ ಧಾರ್ಮಿಕ ಹಾಗೂ ಹಬ್ಬ ಹರಿದಿನಗಳ ಆಚರಣೆಗಳ ಬೆಸುಗೆ ಒಂದು ನಿದರ್ಶನವೇ ಬಲೀಂದ್ರ ಪೂಜೆ
ಮೂಜಿ ದಿನತ್ತ ಬಲಿ
ಬಲೀಂದ್ರನನ್ನು ಕರೆವ ಹಾಡಿನ ಸೊಲ್ಲಿನಲ್ಲೇ ಹೇಳುವಂತೆ ಆಟಿದ ಅಮಾಸೆಗ್..ಸೋಣದ ಸಂಕ್ರಾಂದಿಗ್..ಬೊಂತೆಲ್ದ ಕೊಡಿ ಪರ್ಬೊಗು… ಹೀಗೆ ವರ್ಷದ ಮೂರು ದಿನಗಳಲ್ಲಿ ಬಲೀಂದ್ರನಿಗೆ ಭೂಮಿಲೋಕದ ಅಂದ-ಚೆಂದದ ಕಾಣುವ ದರ್ಶನ ಭಾಗ್ಯ ಎಂಬುದು ಜನಪದರೂ ಕೂಡಾ ನಂಬಿರುವ ಪುರಾಣ ಸನ್ನಿವೇಶ
ಹೀಗಿರುವ ನಮ್ಮ ಹಳ್ಳಿಯ ಬಲೀಂದ್ರ
ಭೂಮಿಯ ಮೇಲೊಂದು ಮರದ ಕಂಬ ನೆಟ್ಟು ಮಾವಿನ ತಳಿರಿನಿಂದ ಸುತ್ತಿ ನೆತ್ತಿಯ ಮೇಲೆ ತೆಂಗಿನ ಸಿಪ್ಪೆಯಿಂದ ತಯಾರಿಸಿದ ಆಕೃತಿಯನ್ನು ಅಥವಾ ಮರದ ಆಕೃತಿಯನ್ನು ಆರಿಸಿ ಮೇಲೆ ದೀಪವಿಟ್ಟು ನಾಲ್ಕೈದು ಬಗೆಯ ಹೂವುಗಳಿಂದ ಅಲಂಕರಿಸಿ ಸುತ್ತಲೂ ಹಣತೆಗಳನ್ನು ಹಚ್ಚಿಟ್ಟು ರಂಗೋಲಿ ಚಿತ್ತಾರವಿಟ್ಟು ಪೂಜೆ ಮಾಡುವುದು ಸಾಂಪ್ರದಾಯಿಕ ಕ್ರಮ ಪ್ರಾರ್ಥನೆಯ ಬಳಿಕ ಅವಲಕ್ಕಿ ಸಂಪ್ರೇಕ್ಷಣೆ ನಂತರದಲ್ಲಿ ಬಲೀಂದ್ರನನ್ನು ಕರೆವ ಹಾಡನ್ನು ಹೇಳುತ್ತಾರೆ. ಹಾಗೆ – ಆಟಿದ ಅಮಾಸೆಗ್ -ಸೋಣದ ಸಂಕ್ರಾದಿಗ್, ಬೊಂತೆಲ್ದ ಕೊಡಿ ಪರ್ಬೊಗು ಮೂಜಿ ದಿನತ್ತ ಬಲಿದೆಂತೊಂದು ಪೋಲ ಬಲಿಯಂದ್ರಾ… ಎಂದಾಗ ಎಲ್ಲರೂ ಜೋರಾಗಿ ಕೂ… ಅನ್ನುತ್ತಾರೆ ಹಾಗೆ ಮೂರು ಬಾರಿ ಹೇಳಿದ ಬಳಿಕ ಪಟಾಕಿ ಸುಡುಮದ್ದು ಪ್ರದರ್ಶನ, ಪಂಜಕಜ್ಜಾಯ ಕಡುಬು ವಿತರಣೆ ಬಳಿಕ ಸಾಂಪ್ರದಾಯಿಕವಾಗಿ ಗೋಪೂಜೆ ನಡೆಯುತ್ತದೆ.

ಕಿನ್ನಿಗೋಳಿಗೆ ಸಮೀಪದ ಕೊಲ್ಲೂರು ಗ್ರಾಮದ ಕೃಷಿಕ ಎಂ.ಚಂದ್ರಶೇಖರ ಭಟ್ ಗುತ್ತು ಅವರ ಕುಟುಂಬ ಪರಿವಾರ ಜತೆ ಬಲೀಂದ್ರ ಪೂಜೆಯ ಸಂಭ್ರಮ
