ಬಜ್ಪೆ: ಬಂಟ್ವಾಳದ ಮಾಣಿಹಳ್ಳದಲ್ಲಿ ಹರೀಶ್ ಎಂಬಾತನ ಕೊಲೆಯನ್ನು ಖಂಡಿಸಿ ಹಾಗೂ ಸರಕಾರ ಹಿಂದೂ ದಮನ ನೀತಿಯನ್ನು ಖಂಡಿಸಿ ಬಜರಂಗದಳ ಹಾಗೂ ವಿಹಿಂಪ ಕರೆ ನೀಡಿದ್ದ ಬಂದ್‍ಗೆ ಬಜ್ಪೆ ಸುತ್ತ ಮುತ್ತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಡಿಕೇರಿ ಟಿಪ್ಪುಸುಲ್ತಾನ್ ವಿವಾದವನ್ನು ಮುಂದಿಟ್ಟುಕೊಂಡು ಕೈಕಂಬ ಜಂಕ್ಷನ್ ಹಾಗೂ ಬಜ್ಪೆ ಜಂಕ್ಷನ್‍ನಲ್ಲಿ ರಸ್ತೆರೋಖೋ ನಡೆಸಲೆಂದು ಹಿಂದೂ ಸಂಘಟನೆಗಳು ಸಿದ್ಧವಾಗಿದ್ದವು. ಆದರೆ ಮೊನ್ನೆ ಸಂಜೆ ನಡೆದ ಕೊಲೆಯನ ನು ಖಂಡಿಸಿ ಹಿಂದೂ ಸಂಘಟನೆಗಳು ದಿಢೀರ್ ಬಂದ್‍ಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಡಿಸಿಯವರು ಸೆಕ್ಷನ್ 144 ಹೇರಿದ್ದರು.
DSC09962

DSC09966

DSC09971

DSC09972

IMG-20151113-WA0047

IMG-20151113-WA0106ಬೆಳಿಗ್ಗಿನ ಜಾವವವೇ ಕೈಕಂಬದತ್ತ ಹಿಂದೂ ಕಾರ್ಯಕರ್ತರು ದಾವಿಸಿ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡದೆ ಗುಂಪು ಚದದುರಿಸಿದ್ದಾರೆ. ಬಜ್ಪೆ ಸುತ್ತಮುತ್ತಲಿನ ಪ್ರದೇಶಗಳನ್ನು ಪೊಲೀಸರೇ ಸ್ವತಃ ಮುಂದಾಗಿ ಬಂದ್ ಮಾಡಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಿದ್ದಾರೆ. ಪೊಲೀಸರ ಪ್ರಕಾರ ಬಜ್ಪೆ ಠಾಣಾ ಸುತ್ತಮುತ್ತ ಯಾವುದೇ ಅಹಿತಕರ ಘಟನೆ ನಡೆಯದೆ ಪರಿಸ್ಥಿತಿ ಸಂಪೂರ್ಣವಾಗಿ ಶಾಂತವಾಗಿತ್ತು.
ಗುರುಪುರ, ಕೈಕಂಬ, ಗಂಜಿಮಠ, ಎಡಪದವು, ಕುಪ್ಪೆಪದವು, ಬಜ್ಪೆ,, ಮರವೂರು, ಪೆರ್ಮುದೆ, ಕೆಂಜಾರು, ಮಳವೂರು ಮುಂತಾದ ಕಡೆ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಅಂಗಡಿಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಪೊಲೀಸರು ಬಿಗಿಬಂದೋಬಸ್ತ್ ವಹಿಸಿದ್ದರು. ಅಂಗಡಿಗಳನ್ನು ತೆರಯಲು ಸ್ವತಃ ಪೊಲೀಸರೇ ಅವಕಾಶ ನೀಡಲಿಲ್ಲ. ಒಟ್ಟಾರೆ ವಾತಾವರಣ ಬಿಕೋ ಎನ್ನುತ್ತಿತ್ತು. ಪೊಲೀಸರು ಅಲ್ಲಲ್ಲಿ ಗಸ್ತು ತಿರುಗುತ್ತಿದ್ದು ಸಾಮಾನ್ಯವಾಗಿತ್ತು. ಪೆಟ್ರೋಲ್ ಬಂಕ್‍ಗಳು ಮುಚ್ಚಿದ್ದವು.
ಬಜ್ಪೆ ವಿಮಾನ ನಿಲ್ದಾಣದಿಂದ ಬಂದಿಳಿದ ಪ್ರಯಾಣಿಕರು ದೂರದೂರಿಗೆ ತೆರಳಲು ಪರದಾಟ ನಡೆಸುತ್ತಿದ್ದು ಸಾಮಾನ್ಯವಾಗಿತ್ತು. ಟ್ಯಾಕ್ಸಿಗಳು ಬಂದ್ ಹಿನ್ನಲೆಯಲ್ಲಿ ಚಲಿಸಲು ಹಿಂದೇಟು ಹಾಕಿದ್ದವು. ಒಟ್ಟಿನಲ್ಲಿ ಪರಿಸ್ಥಿತಿ ಶಾಂತವಾಗಿತ್ತು
ಟೈರ್‍ಗೆ ಬೆಂಕಿ
ಬಂಟ್ವಾಳದಲ್ಲಿ ನಡೆದ ಕೊಲೆಯನ್ನು ಖಂಡಿಸಿ ಹಿಂದೂ ಕಾರ್ಯಕರ್ತರು ಬಜ್ಪೆ ಜಂಕ್ಷನ್‍ನಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಆದರೆ ಪೊಲೀಸರು ಬಂದು ಬೆಂಕಿ ನಂದಿಸಿ ಗುಂಪನ್ನು ಚದುರಿಸಿದ್ದಾರೆ.

By suddi9

Leave a Reply

Your email address will not be published. Required fields are marked *