ಮೂಡಬಿದ್ರೆ: ಗುಡ್ಡದಲ್ಲಿ ದನಮೇಯಿಸುತ್ತಿದ್ದ ವೃದ್ಧರನ್ನು ಕೊಲೆಗೈದ ಘಟನೆ ಪಡುಕೊಣಾಜೆ ಗ್ರಾಮದ ನೂಯಿ ದರ್ಖಾಸಿನಲ್ಲಿ ನಿನ್ನೆ ಮಧ್ಯಾಹ್ನದ ವೇಳೆ ನಡೆದಿದೆ. ಹಾಸನ ಮೂಲದ ಪಡುಕೊಣಾಜೆಯ ಅಳಿಯನ ಮನೆಯಲ್ಲಿ ವಾಸವಾಗಿರುವ ಸಂಜೀವ ಪೂಜಾರಿ(75) ಕೊಲೆಗೀಡಾದ ದುರ್ದೈವಿ.

ಇತ್ತೀಚೆಗೆ 9 ಗಂಟೆ ವೇಳೆಗೆ ದನ ಮೇಯಿಸಲೆಂದು ತನ್ನ ಕೈಯಲ್ಲಿ ಶೇವಿಂಗ್ ಮಾಡುವ ವಸ್ತು ಮತ್ತು ಕತ್ತಿಯನ್ನು ಚೀಲದಲ್ಲಿ ಹಾಕಿಕೊಂಡು ಹೋಗಿದ್ದರು. ಮಧ್ಯಾಹ್ನ ವೇಳೆ ಊಟ ಮಾಡಲು ಹಿಂತಿರುಗಿ ಬರುತ್ತಿದ್ದ ತಂದೆ ಮನೆಗೆ ಬಾರದಿರುವುದನ್ನು ಕಂಡು ಮಗಳು ಜಯಂತಿ ಆಕೆಯ ಗಂಡನಲ್ಲಿ ತಿಳಿಸಿ ಹುಡುಕಿಕೊಂಡು ದರ್ಖಾಸಿಗೆ ಹೋದಾಗ ಅಲ್ಲಿ ದನವನ್ನು ಕಟ್ಟಿ ಹಾಕಿರುವ ಸ್ಥಳದ ಪಕ್ಕದಲ್ಲಿ ಸಂಜೀವ ಪೂಜಾರಿ ಅವರ ರಕ್ತಸಿಕ್ತ ದೇಹ ಬಿದ್ದಿರುವುದನ್ನು ಕಂಡು ಬೊಬ್ಬೆ ಹಾಕಿಕೊಂಡು ಮನೆಗೆ ಬಂದು ಮನೆಯಲ್ಲಿ ಕೊಲೆ ವಿಷಯವನ್ನು ತಿಳಿಸಿದ್ದಾರೆ. ಸಂಜೀವ ಪೂಜಾರಿಯವರ ಸಾವಿಗೆ ಯಾವುದೇ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.ಯಾರ ಜತೆಯೂ ದ್ವೇಷವನ್ನು ಹೊಂದಿರದ ವೃದ್ಧ ಸಂಜೀವ ಪೂಜಾರಿ ಅವರನ್ನು ಯಾರು ಕೊಲೆ ಮಾಡಿದ್ದಾರೆ, ಎನ್ನಲಾಗಿದೆ.
ಯಾರದೋ ತಪ್ಪಿಗೆ ಸಂಜೀವ ಪೂಜಾರಿ ಕೊಲೆಗೀಡಾಗಿರಬಹುದೆಂದು ಶಂಕಿಸಲಾಗಿದೆ.
