ಮುಂಬಯಿ, ಅ.30: ಡಿಗ್ರಿ ಪಡೆದವರೆಲ್ಲಾ ಪಾಂಡಿತ್ಯ ಹೊಂದಬೇಕಾಗಿಲ್ಲ. ಗಳಿಸಿದವರೆಲ್ಲರೂ ಪಂಡಿತರಲ್ಲ. ಆದರೆ ದೈವಕ್ಯ ಎಂ.ಎಂ ಕಲಬುರ್ಗಿ ಅವರು ನಿಜವಾದ ಅರ್ರ್ಥದಲ್ಲಿ ಪಾಂಡಿತ್ಯತೆಯನ್ನೊಂದಿದ್ದ ಮೇಧಾವಿಗಳಾಗಿದ್ದರು. ಸಂಶೋಧನಾ ನಿಷ್ಠರಾಗಿದ್ದ ಅವರ ಬದುಕಿನ ಅಧ್ಯಯನ ಕಣ್ಣುಗಳಲ್ಲಿ ತೆರೆಸಿಕೊಳ್ಳಬೇಕು. ನಿಷ್ಠುರವಾದಿಗೆ ಶತ್ರುತ್ವ ಅಥವಾ ಕೊಲೆವೊಂದೇ ಉತ್ತರವಲ್ಲ. ಇದು ನಮ್ಮ ದುರದೃಷ್ಠ. ನಮಗೆ ಭಾಷೆಯ ಸೂಕ್ಷ್ಮಗಳ ಅರಿವು ಅಗತ್ಯ. ಭಾಷಾಶಾಸ್ತ್ರ ಪಂಡಿತರಾಗಿ ಕಲಬುರ್ಗಿ ಅವರ ಬದುಕು ಅನುಕಾರಣೀಯ. ಭಾಷೆಗಳ ಏಕತೆಯಿಂದ ಎಲ್ಲವೂ ಒಳಿತಾಗಲು ಸಾಧ್ಯ ಆದುದರಿಂದಲೇ ದಿವಂಗತ ಕಲಬುರ್ಗಿ ಜೀವನ ಸಂದೇಶ ಅನುಕರಣೀಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಆಯುಕ್ತ ಕೆ. ಆರ್ ರಾಮಕೃಷ್ಣ ತಿಳಿಸಿದರು.
ಸಾಂತಾಕ್ರೂಜ್ ಪೂರ್ವದಲ್ಲಿನ ಕಲೀನಾ ಕ್ಯಾಂಪಸ್ನ ಮುಂಬಯಿ ವಿಶ್ವವಿದ್ಯಾಲಯದ ಫಿರೋಜ್ಹ್ ಶಾಹ ಮೆಹ್ತಾ ಸಭಾಗೃದಲ್ಲಿ ಇಂದಿಲ್ಲಿ ಶನಿವಾರ ಮಧ್ಯಾಹ್ನ ಸಾಣೆ ಗುರೂಜಿ ರಾಷ್ಟ್ರ್ಟ್ರೀಯ ಸ್ಮಾರಕ ಸಂಸ್ಥೆಯು ಲಕ್ಷಿ ್ಮಛಾಯಾ ವಿಚಾರ ವೇದಿಕೆ ಮತ್ತು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಇವುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ದಿವಂತಗ ಎಂ.ಎಂ ಕಲಬುರ್ಗಿ ಅವರ ಜೀವನಾಧಾರಿತ ಚಿತ್ರಪ್ರದರ್ಶನ ಹಾಗೂ ಕೃತಿಗಳನ್ನು ಅನಾವರಣಗೊಳಿಸಿ ಕೆ. ಆರ್ ರಾಮಕೃಷ್ಣ ಮಾತನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿ ಕೃತಿಗಳನ್ನಿತ್ತು ಗೌರವಿಸಿದರು. ಸಾಣೆ ಗುರೂಜಿ ರಾಷ್ಟ್ರ್ಟ್ರೀಯ ಸ್ಮಾರಕ ಸಂಸ್ಥೆಯ ಮುಖ್ಯಸ್ಥೆ ಶಿರತ್ ಸತ್ಪುತೆ ಕಾರ್ಯಕ್ರಮದ ಬಗ್ಗೆ ಸ್ಥೂಲವಾಗಿ ಮಾಹಿತಿಯನ್ನಿತ್ತರು. ರಮಾ ಉಡುಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಡಾ| ವ್ಯಾಸರಾಯ ನಿಂಜೂರು, ನ್ಯಾ| ವಸಂತ ಕಲಕೋಟಿ, ಬಿ.ಎಸ್ ಕುಕರ್ಾಲ್, ಶಿಮುಂಜೆ ಪರಾರಿ, ಡಾ| ಮಮತಾ ರಾವ್, ಕನ್ನಡ ವಿಭಾಗದ ಉಪನ್ಯಾಸಕಿ ಡಾ| ಪೂಣರ್ಿಮಾ ಎಸ್.ಶೆಟ್ಟಿ ಡಾ| ದಿನೇಶ್ ಶೆಟ್ಟಿ ರೆಂಜಾಳ, ಪೇತ್ರಿ ವಿಶ್ವನಾಥ ಶೆಟ್ಟಿ, ಡಾ| ಕರುಣಾಕರ ಶೆಟ್ಟಿಮತ್ತಿತರರು ಉಪಸ್ಥಿತರಿದ್ದರು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್




