ಮುಂಬಯಿ, ಅ.30: ಗ್ರಾಹಕರಿಂದಲೇ ಬ್ಯಾಂಕುಗಳ ಅಭಿವೃದ್ಧಿ ಆಗುತ್ತದೆ. ಆದುದರಿಂದ ಗ್ರಾಹಕರೇ ಬ್ಯಾಂಕುಗಳ ಆಸ್ತಿ. ಗ್ರಾಹಕರು ಮತ್ತು ಸಿಬ್ಬಂದಿಗಳ ಸ್ನೇಹತ್ವ ಸಂಬಂಧಗಳಿಂದ ಮಾತ್ರ ಸಹಕಾರಿ ಸಂಸ್ಥೆಗಳ ಉನ್ನತಿ ಸಾಧ್ಯವಾಗುವುದು. ಗ್ರಾಹಕರಿಗೆ ಆಧುನಿಕ, ಸುಸಜ್ಜಿತ ವ್ಯವಸ್ಥೆಗಳೊಂದಿಗೆ ತ್ವರಿತ ಸೇವೆ ಒದಗಿಸುವುದರಿಂದಲೇ ಭಾರತ್ ಬ್ಯಾಂಕ್ ಇಷ್ಟೊಂದು ಉನ್ನತಿಗೆ ಬೆಳೆಯಲು ಸಾಧ್ಯವಾಗಿದೆ. ಬ್ಯಾಂಕುಗಳು ಸಾಲವಾಗಿ ನೀಡುವುದು ಸಾರ್ವಜನಿಕರ ಹಣವನ್ನು ಆದುದರಿಂದ ಸಾಲಪಡೆದವರ ಮನಸ್ಸಿನಲ್ಲಿ ನನ್ನ ಹಣ ಎನ್ನುವ ಭಾವನೆ ಇರದೆ ಪಡೆದ ಹಣವನ್ನು ಸಮಯೋಚಿತವಾಗಿ ಹಿಂದಿರುಗಿಸಿದರೆ ಇಬ್ಬರ ಅಭಿವೃದ್ಧಿಗೂ ಒಳಿತು. ಗ್ರಾಹಕರ ಅನುಕೂಲಕರ ಬ್ಯಾಂಕ್ ಹೆಸರಾಂತ ಈ ಪಥಸಂಸ್ಥೆ ಜನಪರ ಸಂಸ್ಥೆಯಾಗಿ ಬೆಳೆಯಲಿ ಎಂದು ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ನುಡಿದರು.
ವರ್ಲಿ ಅಲ್ಲಿನ ನೆಹರೂ ಪ್ಲಾನೆಟೇರಿಯಂ ಸನಿಹದ ಡಾ| ಆನ್ನಿ ಬೆಸೆಂಟ್ ರಸ್ತೆಯಲ್ಲಿನ ಭಾವೇಶ್ವರ ಕಟ್ಟಡದಲ್ಲಿ ಇಂದಿಲ್ಲಿ ಶುಕ್ರವಾರ ಬೆಳಿಗ್ಗೆ ದಿ. ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ 80ನೇ ಶಾಖೆಯನ್ನು ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ರಿಬ್ಬನ್ ಬಿಡಿಸಿ ಶುಭಾರಂಭ ಗೊಳಿಸಿದ್ದು, ರುಕ್ಮಯ ಪೂಜಾರಿ ದೀಪ ಪ್ರಜ್ವಲಿಸಿ ವಿಧ್ಯುಕ್ತವಾಗಿ ಶಾಖೆ ಸೇವಾರ್ಪಣೆ ಗೊಳಿಸಿ ಶುಭ ಕೋರಿದರು.
ಎಟಿಎಂ ಸೇವೆಯನ್ನು ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಮತ್ತು ಲಾಕರ್ ಸೇವೆಯನ್ನು ಹಿರಿಯ ನಿರ್ದೇಶಕಿ ಪುಷ್ಫಲತಾ ಎನ್.ಸಾಲ್ಯಾನ್ ಹಾಗೂ ಕಂಪ್ಯೂಟರೀಕೃತ ಸೇವೆಗಳನ್ನು ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಸಿ.ಆರ್ ಮೂಲ್ಕಿ ಸೇವಾರ್ಪಣೆಗೈದು ಶಾಖೆಯ ಶ್ರೇಯಸ್ಸಿಗೆ ಶುಭಾರೈಸಿದರು.
ಭಾರತ್ ಬ್ಯಾಂಕ್ನ 80ನೇ ಶಾಖೆ ಭಾಗೀರಥನ ಸಾಧನೆಯಾಗಿದೆ. ಜಯ ಸುವರ್ಣರ ದಿಟ್ಟ ನಿಲುವು ಮತ್ತು ಮುಂದಾಲೋಚನೆಯ ಫಲವೇ ಈ ಸಾಧನೆಸಿದ್ಧಿಯಾಗಿದೆ. ನಮ್ಮ ಪರಿಸರದಲ್ಲಿ ಸೇವೆಯನ್ನೊದಗಿಸಲು ಶಾಖೆಯನ್ನು ತೆರೆದಿದ್ದು ತಮ್ಮೆಲ್ಲರಿಗೂ ಈ ಪ್ರದೇಶದ ಸಮಸ್ತ ಜನತೆಯ ಪರವಾಗಿ ಅತ್ಮೀಯವಾಗಿ ಸ್ವಾಗತಿಸುತ್ತೇನೆ. ಗ್ರಾಹಕರ ಮತ್ತು ವ್ಯಾಪಾರಸ್ಥರ ವಿಶ್ವಾಸಕ್ಕೆ ಪಾತ್ರವಾಗಲಿ. ಬ್ಯಾಂಕ್ನ ಹೆಸರೇ ಭಾರತ್ ಅಂತೆಯೇ ಈ ಬ್ಯಾಂಕ್ ರಾಷ್ಟ್ರದ ಉದ್ದಗಲಕ್ಕೂ ಪಸರಿಸಿ ರಾಷ್ಟ್ರಕ್ಕೂ ಗೌರವ ತರುವಂತಾಗಲಿ ಎಂದು ಹಿರಿಯ ಹೊಟೇಲು ಉದ್ಯಮಿ, ಎನ್ ಸಿ ಪಿ ನಾಯಕ ಸದಾನಂದ ಶೆಟ್ಟಿ ಆಶಯ ವ್ಯಕ್ತ ಪಡಿಸಿದರು.
ವಿಶ್ವಪ್ರಸಿದ್ಧ ಸೌರವ್ಯೂಹದ ಮಾದರಿ ಕೇಂದ್ರ ನೆಹರೂ ಪ್ಲಾನೆಟೇರಿಯಂ ಪ್ರದೇಶದಲ್ಲಿ ಸೇವಾರಂಭಿಸಿದ ಭಾರತ್ ಬ್ಯಾಂಕ್ ಗ್ರಾಹಕರಿಗೆ ಸೇವಾ ಬೆಳಕನ್ನು ನೀಡಿ ಸಹಕಾರಿ ರಂಗದ ತಾರಾಲಯದಲ್ಲಿ ನಕ್ಷತ್ರಗಳಂತೆ ಮಿಂಚುವಂತಾಗಲಿ ಎಂದು ಪ್ರಭಾಕರ ಎಲ್.ಶೆಟ್ಟಿ ಶುಭಾರೈಸಿದರು.
ಹಿರಿಯ ಕೇಟರಿಂಗ್ ಉದ್ಯಮಿ, ಅನ್ನದಾತ ರಾಘು ಪಿ.ಶೆಟ್ಟಿ ಮಾತನಾಡಿ ನಮ್ಮೆಲ್ಲರ ವರ್ಲಿಕರ್ ನೆಲೆವಾಸಕ್ಕೆ ಕಾಲಿರಿಸಿದ ನಮ್ಮವರ ಭಾರತ್ ಬ್ಯಾಂಕ್ನ ಸೇವೆ ಅನನ್ಯವಾದದ್ದು, ಜಯಸುವರ್ಣ ನೇತೃತ್ವದಲ್ಲಿ ಇನ್ನೂ ನೂರೈವತ್ತು ಶಾಖೆಗಳು ತೆರೆಯುವಂತಾಗಲಿ. ಕಟೀಲು ಶ್ರೀ ದುರ್ಗ ಪರಮೇಶ್ವರಿ ಅಮ್ಮನವರ ಅನುಗ್ರಹಗಳೊಂದಿಗೆ ಬ್ಯಾಂಕ್ ಶ್ರೇಯಸ್ಸು ಕಾಣಲಿ ಎಂದರು.
ವರ್ಲಿ ಬೀಡು ರಮೇಶ್ ಗುರುಸ್ವಾಮಿ ಅನುಗ್ರಹಿಸಿ ನಾಡಿನ ಜನತೆಯ ಪ್ರಗತಿಪರ ಚಿಂತನೆಯ ಈ ಬ್ಯಾಂಕ್ ಈ ವರೇಗೆ ಯಾಕೆ ವರ್ಲಿಗೆ ಕಾಲಿರಿಸಿಲ್ಲ ಎನ್ನುವ ಜಿಜ್ಞಾಸೆ ನಮ್ಮನ್ನು ಕಾಡುತ್ತಿತ್ತು. ಇದು ಇಂದಿಲ್ಲಿ ನಿವಾರಣೆಗೊಂಡಿದೆ. ಪರಿಸರದ ಸರ್ವ ವರ್ಗದ ಜನತೆಯ ಸೇವೆಗೆ ಬದ್ಧವಾಗಿ ಜನಸ್ಪಂದನೆಯ ಬ್ಯಾಂಕ್ ಆಗಿ ಪ್ರಗತಿ ಹೊಂದಲಿ ಎಂದು ಆಶೀರ್ವದಿಸಿದರು.
ಸಮಾರಂಭದಲ್ಲಿ ಅತಿಥಿವರ್ಯರುಗಳಾಗಿ ಉಪಸ್ಥಿತ ಮಾಜಿ ಶಾಸಕ ಚಂದ್ರಶೇಖರ ಪ್ರಭು, ಡಾ| ದಿನೇಶ್ ಕುಡ್ವ, ಪ್ರಭಾಕರ್ ಅಗರ್ವಲ್, ಯು.ಜಿ ದೇವಿ ಸಂದರ್ಬೋಚಿತವಾಗಿ ಮಾತನಾಡಿ ಬ್ಯಾಂಕ್ನ ಸರ್ವೋಭಿವೃದ್ಧಿಗೆ ಶುಭೇಚ್ಛ ಕೋರಿದರು.
ಗೌರಹ್ವಾನಿತ ಮಹಾನೀಯರುಗಳಾಗಿ ಹಿರಿಯ ಹೊಟೇಲು ಉದ್ಯಮಿ ಗಿರಿಯ ಪೂಜಾರಿ, ಮೋಗವೀರ ಬ್ಯಾಂಕ್ನ ಉಪ ಕಾರ್ಯಧ್ಯಕ್ಷ ಸುರೇಶ್ ಆರ್.ಕಾಂಚನ್, ಬ್ಯಾಂಕ್ನ ಮಾಜಿ ನಿರ್ದೇಶಕರುಗಳಾದ ಎನ್.ಎಂ ಸನೀಲ್, ಮೋಹನ್ ಜಿ.ಪೂಜಾರಿ, ಸಿಎ| ಅಶ್ವಜಿತ್ ಹೆಜ್ಮಾಡಿ, ಸತೀಶ್ಚಂದ್ರ ಶೆಟ್ಟಿ, ಜಗದೀಶ್ ಭಾಯಿ, ಮೋಹನ್ದಾಸ್ ಪೂಜಾರಿ, ಪ್ರಕಾಶ್ ಅಗರ್ವಾಲ್, ಕಟ್ಟಡದ ಮಾಲೀಕ ನರೇಶ್ ಅಲ್ವೇಜಾ, ಪುರುಷೋತ್ತಮ ಪೂಜಾರಿ, ವಿಠಲ್ ಸುವರ್ಣ ವರ್ಲಿ ಸೇರಿದಂತೆ ಸ್ಥಳಿಯ ನೂತನ ಗ್ರಾಹಕರು, ಷೇರುದಾರರು, ಹಿತೈಷಿಗಳು ಉಪಸ್ಥಿತರಿದ್ದು ನೂತನ ಶಾಖೆಯ ಯಶಸ್ಸಿಗೆ ಶುಭಕೋರಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ಭಾಸ್ಕರ್ ಎಂ.ಸಾಲ್ಯಾನ್, ಚಂದ್ರಶೇಖರ ಎಸ್.ಪೂಜಾರಿ, ಆರ್.ಡಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಅಶೋಕ್ ಎಂ. ಕೋಟ್ಯಾನ್, ಜ್ಯೋತಿ ಕೆ.ಸುವರ್ಣ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಸಿ.ಆರ್ ಮೂಲ್ಕಿ, ಬ್ಯಾಂಕ್ನ ಮುಖ್ಯ ಪ್ರಧಾನ ಪ್ರಬಂಧಕ ಅನಿಲ್ ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶೋಭಾ ದಯಾನಂದ್, ಉಪ ಪ್ರಧಾನ ಪ್ರಬಂಧಕರುಗಳಾದ ವಿವೇಕ್ ಎಸ್.ಶ್ಯಾನ್ಭಾಗ್, ಸುರೇಶ್ ಎಸ್.ಸಾಲ್ಯಾನ್, ದಿನೇಶ್ ಬಿ.ಸಾಲ್ಯಾನ್, ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳಾದ ಮಹೇಶ್ ಕೋಟ್ಯಾನ್, ಪ್ರಭಾಕರ್ ಜಿ.ಪೂಜಾರಿ, ವಾಸುದೇವ ಎಂ.ಸಾಲ್ಯಾನ್, ಬ್ಯಾಂಕ್ನ ಅಭಿವೃದ್ಧಿ ಇಲಾಖಾಧಿಕಾರಿಗಳಾದ ಸುನೀಲ್ ಗುಜರನ್, ವಿಜಯ ಪಾಲನ್, ವಿವಿಧ ಶಾಖೆಗಳ ಮುಖ್ಯಸ್ಥರುಗಳಾದ ಪ್ರಭಾಕರ್ ಜಿ.ಪೂಜಾರಿ, ಜನಾರ್ಧನ ಪಿ.ಅಮೀನ್, ರತ್ನಾಕರ ಆರ್.ಸಾಲ್ಯಾನ್, ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ರಮೇಶ್ ಟಿ.ಪೂಜಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಅಭಿನಂದಿಸಿದರು.
ಉಳ್ಳೂರು ಧನಂಜಯ್ ಶಾಂತಿ ಮತ್ತು ಶ್ರೀ ಶೇಖರ ಶಾಂತಿ ಉಳ್ಳೂರು ವಾಸ್ತುಪೂಜೆ, ಗಣಹೋಮ, ದ್ವಾರಪೂಜೆ ನಡೆಸಿ ತೀರ್ಥಪ್ರಸಾದ ವಿತರಿಸಿದರು. ದಿವಾಕರ್ ಎನ್.ಅಂಚನ್ ಮತ್ತು ಶಿಲ್ಪಾ ದಿವಾಕರ್ ಹಾಗೂ ನೀಶಾ ಗಣೇಶ್ ಪೂಜಾರಿ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.
ಬ್ಯಾಂಕ್ನ ಉಪ ಪ್ರಧಾನ ವ್ಯವಸ್ಥಾಪಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ ಸ್ವಾಗತಿಸಿದರು. ಮಹಾ ಪ್ರಂಬಧಕ ನಿತ್ಯಾನಂದ ಡಿ.ಕೋಟ್ಯಾನ್ ಬ್ಯಾಂಕ್ನ ಸೇವಾ ಮುನ್ನಡೆ ಪ್ರಸ್ತಾಪಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಾಧ್ಯಕ್ಷ ಜಯ ಸುವರ್ಣರು ಅತಿಥಿಗಳಿಗೆ ಪುಷ್ಫಗುಪ್ಚವನ್ನೀಡಿ ಸತ್ಕರಿಸಿದರು. ಶಾಖೆಯ ಸಹಾಯಕ ಪ್ರಬಂಧಕ ಹೇಮಂತ್ ಆರ್.ಅಗರ್ವಾಲ್, ಸಿಬ್ಬಂದಿಗಳಾದ ಸ್ವಪ್ಣಾ ಸಾವಂತ್, ಬಬಿತಾ ಕೋಟ್ಯಾನ್, ಮೆಹಲಿ ಕೆ.ಅಂಚನ್, ಸ್ನೇಹಲ್ ಚಿತಾಳೆ ಮತ್ತು ಸಂತೋಷ್ ಸುವರ್ಣ ಶಾಖೆಯ ಮುಖ್ಯಸ್ಥ ದಿವಾಕರ್ ಎನ್.ಅಂಚನ್ ವಂದಿಸಿದರು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್
















