ಮುಂಬಯಿ:ಅ.27: ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ 79ನೇ ಶಾಖೆಯು ಬೊರಿವಲಿ ಪಶ್ಚಿಮದ ಎಸ್.ವಿ.ರೋಡ್ ಅಲ್ಲಿನ ದೌಲತ್ನಗರದ ರೈಟ್ ಗೋಲ್ಡನ್ ಕ್ರೆಸ್ಟ್ ಕಟ್ಟಡದಲ್ಲಿ ಇಂದಿಲ್ಲಿ ಸೋಮವಾರ ಬೆಳಿಗ್ಗೆ ಸೇವಾರಂಭಿಸಿತು. ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ನೂತನ ಶಾಖೆಯನ್ನು ರಿಬ್ಬನ್ ಕತ್ತರಿಸಿ ಶುಭಾರಂಭ ಗೊಳಿಸಿದರು.
ಮುಖ್ಯ ಅತಿಥಿಯಾಗಿ ಹರೇ ಕೃಷ್ಣ ಫೌಂಡೇಶನ್ನ ಆಡಳಿತ ವಿಶ್ವಸ್ಥ, ಮೋಗವೀರ ಮಹಾಜನ ಸೇವಾ ಸಂಘ ಬಾಗ್ವಡಿ ಹೋಬಳಿ ಇದರ ಮಾಜಿ ಅಧ್ಯಕ್ಷ ಕರುಣಾಕರ್ ಪುತ್ರನ್ ಉಪಸ್ಥಿತರಿದ್ದು, ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಮಾಜಿ ಅಸ್ಸೆಸರ್ ಕಲೆಕ್ಟರ್, ಬಿಲ್ಲವರ ಅಸೋಸಿಯೇಶನ್ನ ಬೋರಿವಿಲಿ ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ಎಂ.ಸುಂದರ ಪೂಜಾರಿ ದೀಪ ಪ್ರಜ್ವಲಿಸಿ ಸಾಂಕೇತಿಕವಾಗಿ ಶಾಖೆಯನ್ನು ಸೇವಾರ್ಪಣೆ ಗೊಳಿಸಿದರು. ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಎಟಿಎಂ ಸೇವೆ, ಬ್ಯಾಂಕ್ನ ಶ್ರೀಮತಿ ಪುಷ್ಫಲತಾ ಎನ್.ಸಾಲ್ಯಾನ್ ಲಾಕರ್ ಸೇವೆಗಳಿಗೆ ಚಾಲನೆಯನ್ನೀಡಿ ಶಾಖೆಯ ಪ್ರಗತಿಗೆ ಶುಭಕೋರಿದರು.
ನಾನು ಭಾರತ್ ಬ್ಯಾಂಕ್ನ ಹಳೇ ಗ್ರಾಹಕನಾಗಿದ್ದು ಸುಮಾರು ಮೂರು ದಶಕಗಳ ಹಿಂದೆ ಬ್ಯಾಂಕ್ನ ಫೋರ್ಟ್ ಶಾಖೆಯಿಂದ 5,000 ರೂಪಾಯಿ ಸಾಲ ಪಡೆದು ವ್ಯಾಪಾರ ಆರಂಭಿಸಿ ಇಂದು ಓರ್ವ ಉದ್ಯಮಿಯಾಗಿ ಗುರುತಿಸಿ ಕೊಂಡಿದ್ದೇನೆ. ಇದಕ್ಕೆ ಜಯ ಸುವರ್ಣರ ಪ್ರೇರಣೆಯೇ ಕಾರಣವಾಗಿದೆ. ಭಾರತ್ ಬ್ಯಾಂಕ್ ಇಂದು ಸಾಧನೆಯ ಶಿಖರವನ್ನೇರಿಸಿ ಅಭಿವೃದ್ಧಿ ಹೊಂದಿ ಮುನ್ನಡೆಯುತ್ತಿರುವುದು ಅಭಿಮಾನವೆಣಿಸುತ್ತಿದೆ. ಗ್ರಾಹಕರು ಮತ್ತು ಬ್ಯಾಂಕ್ನ ಆಡಳಿತ ಮಂಡಳಿ, ವ್ಯವಸ್ಥಾಪಕರು, ಸಿಬ್ಬಂದಿಗಳಲ್ಲಿನ ಸಮನ್ವಯತೆಯೇ ಬ್ಯಾಂಕ್ನ ಉತ್ಕರ್ಷೆ ಗೆ ಕಾರಣವಾಗಿದೆ. ನನ್ನಂತೆಯೇ ಸಾವಿರಾರು ಸಾಧಕರನ್ನು ರೂಪಿಸಿದ ಸರದಾರ ಭಾರತ್ ಬ್ಯಾಂಕ್ ಆಗಿದೆ. ಆದುದರಿಂದಲೇ ಜನಮನ್ನಣೆ ಪಡೆದು ಸರ್ವತೋಮುಖ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಸಕಾಲಿಕ ಸ್ಪಂದನೆಯೊಂದಿಗೆ ನಿಧಿ ಪೂರೈಕೆಗೆ, ಸಾಧನಾ ಪಥದರ್ಶಕತ್ವದ ಜನಾಕರ್ಷಕತ್ವ ಹೊಂದಿರುವ ಭಾರತ್ ಬ್ಯಾಂಕ್ ಭೌಗೋಳಿಕವಾಗಿ ಸೇವೆ ನೀಡುವಂತಾಗಲಿ ಎಂದು ಕರುಣಾಕರ್ ಪುತ್ರನ್ ಶುಭಾರೈಸಿದರು.
ಎಂ.ಸುಂದರ ಪೂಜಾರಿ ಹಾಗೂ ಕಟ್ಟಡದ ಮಾಲೀಕ ಬಾಳಸಾಹೇಬ್ ದಢಸಾ ಮಾತನಾಡಿ ಶಾಖೆ ಹಾಗೂ ಬ್ಯಾಂಕ್ನ ಸರ್ವೊನ್ನತಿಗೆ ಶುಭೇಚ್ಛ ಕೋರಿದರು.
ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಕಾಂಗ್ರೇಸ್ ಧುರೀಣ ವಿಠಲ್ ಎಸ್.ಪೂಜಾರಿ ಭಯಂದರ್, ಎನ್.ಎಂ ಸನೀಲ್, ಎಂ.ಎನ್ ಕರ್ಕೇ ರ, ಕಟ್ಟಡದ ಮಾಲೀಕ ಬಾಳಸಾಹೇಬ್ ದಢಸಾ, ಅನಿತಾ ದಢಸಾ, ಮೋಹನ್ ಅಮೀನ್, ಶ್ರೀಧರ್ ಪೂಜಾರಿ, ಚಂದ್ರಹಾಸ ಸುವರ್ಣ ಸಿಮಂತೂರು, ವಿಠಲ್ ಪ್ರಭು, ಧಹನೇಶ್ ಶೆಟ್ಟಿ, ಮೋಹನ್ ಜಿ.ಪೂಜಾರಿ, ಹೇಮಂತ್ ಪೂಜಾರಿ ಬೋರಿವಿಲಿ, ಪ್ರೇಮನಾಥ ಕೋಟ್ಯಾನ್, ವಿಶ್ವನಾಥ ಎಂ.ಸನೀಲ್ ಮೀರಾರೋಡ್, ಬ್ಯಾಂಕ್ನ ನಿರ್ದೇಶಕರುಗಳಾದ ಚಂದ್ರಶೇಖರ ಎಸ್.ಪೂಜಾರಿ, ಜ್ಯೋತಿ ಕೆ.ಸುವರ್ಣ, ಹರೀಶ್ಚಂದ್ರ ಜಿ.ಮೂಲ್ಕಿ, ಆರ್.ಡಿ.ಪೂಜಾರಿ, ಕೆ.ಬಿ.ಪೂಜಾರಿ, ಅಶೋಕ್ ಎಂ.ಕೋಟ್ಯಾನ್, ಸೂರ್ಯಕಾಂತ್ ಜೆ. ಸುವರ್ಣ, ಮತ್ತಿತರ ಗಣ್ಯರು ಸೇರಿದಂತೆ ಸ್ಥಳಿಯ ನೂತನ ಗ್ರಾಹಕರು, ಹಿತೈಷಿಗಳು ಆಗಮಿಸಿ ನೂತನ ಶಾಖೆಗೆ ಶುಭಾರೈಸಿದರು.
ಕಾರ್ಯಾಧ್ಯಕ್ಷ ಜಯ ಸುವರ್ಣ, ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಸಾಲ್ಯಾನ್, ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಸಿ.ಆರ್ ಮೂಲ್ಕಿ, ನಿರ್ಧೆಶಕರುಗಳಾದ ಕೆ.ಎನ್ ಸುವರ್ಣ, ನ್ಯಾ| ಎಸ್.ಬಿ ಅವಿೂನ್, ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ. ಪೂಜಾರಿ, ಮಹಾ ಪ್ರಂಬಧಕಿ ಶ್ರೀಮತಿ ಶೋಭಾ ದಯಾನಂದ್ ಅವರು ಶಾಖೆಯ ಮುಖ್ಯಸ್ಥ ಪ್ರವೀಣ್ ಎಂ.ಬಂಗೇರ, ಸಹಾಯಕ ಪ್ರಬಂಧಕಿ ಜಯಲಕ್ಷ್ಮೀ ತೋನ್ಸೆ , ಸಿಬ್ಬಂದಿಗಳಾದ ರಾಜಶ್ರೀ ಅಂಚನ್, ಭವಿತಾ ಸಾಲ್ಯಾನ್, ರೋಶ್ನಿ ಸುವರ್ಣ, ಪ್ರಸಾದ್ ಅಂಚನ್ ಮತ್ತು ದಿನೇಶ್ ಸಿ.ಸಾಲ್ಯಾನ್ ಅವರನ್ನು ಪುಷ್ಫಗುಪ್ಚವನ್ನೀಡಿ ಶುಭಾರೈಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕ ಅನಿಲ್ ಕುಮಾರ್ ಆರ್.ಅವಿೂನ್, ಉಪ ಪ್ರಧಾನ ವ್ಯವಸ್ಥಾಪಕರುಗಳಾದ ವಿವೇಕ್ ಎಸ್.ಶ್ಯಾನ್ಭಾಗ್, ಜಗಧೀಶ್ ಎನ್., ದಿನೇಶ್ ಬಿ.ಸಾಲ್ಯಾನ್, ಸುರೇಶ್ ಎಸ್.ಸಾಲ್ಯಾನ್, ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳಾದ ಡಾ| ಯು.ಧನಂಜಯ್ ಕುಮಾರ್, ವಾಸುದೇವ ಪಿ. ಸಾಲ್ಯಾನ್, ಮಹೇಶ್ ಕೋಟ್ಯಾನ್, ಬ್ಯಾಂಕ್ನ ಅಭಿವೃದ್ಧಿ ಇಲಾಖಾಧಿಕಾರಿಗಳಾದ ಸುನೀಲ್ ಗುಜರನ್, ಅವೀಶ್ ಪೂಜಾರಿ, ವಿಜಯ ಪಾಲನ್, ಭಾರತ್ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್ನ ಅಧ್ಯಕ್ಷ ಕಿರಣ್ ಬಿ.ಅಮೀನ್ ಹಾಗೂ ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ರಮೇಶ್ ಟಿ.ಪೂಜಾರಿ, ನಿವೃತ್ತ ಮುಖ್ಯ ಪ್ರಬಂಧಕ ಗೋಪಾಲ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಉಳ್ಳೂರು ಶೇಖರ್ ಶಾಂತಿ ಮತ್ತು ಉಳ್ಳೂರು ಧನಂಜಯ್ ಶಾಂತಿ ವಾಸ್ತುಪೂಜೆ, ಗಣಹೋಮ, ದ್ವಾರಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿದರು. ಪ್ರವೀಣ್ ಎಂ.ಬಂಗೇರಾ ಮತ್ತು ಅರುಣಾ ಪ್ರವೀಣ್ ಹಾಗೂ ವಿಜಯ್ ಸನೀಲ್ ಮತ್ತು ಪ್ರೀತಿ ವಿಜಯ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಬ್ಯಾಂಕ್ನ ಮಹಾ ಪ್ರಂಬಧಕ ನಿತ್ಯಾನಂದ ಡಿ.ಕೋಟ್ಯಾನ್ ಸ್ವಾಗತಿಸಿ, ಬ್ಯಾಂಕ್ನ ಸೇವಾ ವೈಖರಿಯನ್ನು ಪ್ರಸ್ತಾಪಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಉಪ ಪ್ರಧಾನ ಪ್ರಬಂಧಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ ಕೃತಜ್ಞತೆ ಸಮರ್ಪಿಸಿದರು
ಚಿತ್ರ ವರದಿ : ರೋನ್ಸ್ ಬಂಟ್ವಾಳ್
















