ಭ್ರಷ್ಟತೆ ತಡೆಗೆ ಸಾರ್ವತ್ರಿಕ ಪಣ ಅಗತ್ಯ
ಬಜಪೆ: ವ್ಯಾಪಕವಾಗಿ ಬೇರೂರಿರುವ ಭ್ರಷ್ಟತೆಯನ್ನು ನಿರ್ಮೂಲನೆ ಮಾಡುವ ಯತ್ನ ಒಂದೆಡೆಯಾದರೆ ಪ್ರಿವೆನ್ಶನ್ ಈಸ್ ಬೆಟರ್ ದೇನ್ ಕ್ಯೂರ್ ಎಂಬ ಮಾತಿನಂತೆ ಹೊಸದಾಗಿ ಭ್ರಷ್ಟತೆಯ ಸನ್ನಿವೇಶಗಳು ನಡೆಯದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಸಾರ್ವಜನಿಕ ಕ್ಷೇತ್ರಗಳಲ್ಲಿ ಯುವಜನತೆ ಕ್ರಾಂತಿಕಾರಿಯಾಗಿ ಒಗ್ಗೂಡಿದರೆ ಭ್ರಷ್ಟಚಾರ ನಿರ್ಮೂಲನೆ ಕಷ್ಟ ಸಾಧ್ಯವಲ್ಲ ಎಂದು ನಿವೃತ್ತ ವಿಮಾನ ನಿಲ್ದಾಣ ನಿರ್ದೇಶಕ ಎಂ. ಆರ್. ವಾಸುದೇವ ಅವರು ಹೇಳಿದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಚಕ್ಷಣಾ ಜಾಗೃತಿ ಸಪ್ತಾಹವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಏರ್ಪೋಟ್ ನಂತಹ ಸಾರ್ವಜನಿಕ ವಲಯಗಳಲ್ಲಿ ಉತ್ಕೃಷ್ಟ ಸೇವೆಯನ್ನು ಜನ ನಿರೀಕ್ಷಿಸುವಾಗ ಅವರ ಆಶಯ ಈಡೇರಿಕೆಯ ಬದ್ಧತೆ ಆಡಳಿತಕ್ಕಿರಬೇಕು ಎಂದು ಅವರು ಹೇಳಿದರು.
ವಿಮಾನ ನಿಲ್ದಾಣದ ಪ್ರಭಾರ ನಿರ್ದೇಶಕ ಕೆ.ಎಂ. ಅನ್ಬರಸು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಮಾನ ನಿಲ್ದಾಣದ ಸಿವಿಲ್ ವಿಭಾಗದ ಮುಖ್ಯಸ್ಥ ಶ್ರೀನಿವಾಸನ್, ಎಟಿಸಿ ವಿಭಾಗದ ಹೇಮಮಾಲಿನಿ, ಕೆ. ರವೀಂದ್ರನ್, ಸಿಐ.ಎಸ್.ಎಫ್. ಸಹಾಯಕ ಕಮಾಂಡೆಂಡ್ ಉಪಸ್ಥಿತರಿದ್ದರು. ಪಿಲಿಪ್ ಕೋಷಿ ಕಾರ್ಯಕ್ರಮ ಸಂಯೋಜಿಸಿದರು.

