ಮುಂಬೈ – ಮೈಸೂರು ಅಸೋಸಿಯೇಷನ್ ಮುಂಬೈ ನವರಾತ್ರಿ ಉತ್ಸವದ ಅಂಗವಾಗಿ  ಇತ್ತಿಚೇಗೆ  ಅಸೋಸಿಯೇಷನ್ನಲ್ಲಿ ಶ್ರೀ ಶಾರದಾ ಪೂಜೆಯನ್ನು ಮತ್ತು ಕೋಲಾಟದ (ದಾಂಡಿಯಾ ರಾಸ್) ಕಾರ್ಯಕ್ರಮವನ್ನು ಸದಸ್ಯರಿಗಾಗಿ ಏರ್ಪಡಿಸಿತ್ತು. ಮೈಸೂರು ಅಸೋಸಿಯೇಷನ್ನ ಅಧ್ಯಕ್ಷೆ ಕೆ. ಕಮಲಾ ಅವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಥಮವಾಗಿ  ಶ್ರೀ ಶೃಂಗೇರಿ ಶಾರದಾಮಾತೆಯ ಪೂಜೆಯನ್ನು ನೆರವೇರಿಸಿ ಪ್ರಸಾದ ವಿತರಣೆ ಮಾಡಲಾಯಿತು.

3

18-P2150117

saroja

1

ತದನಂತರ ಚುಕ್ಕಿ ರಂಗೋಲಿ ಸ್ಪರ್ಧೆಯನ್ನು ನಡೆಸಲಾಯಿತು.  ದಾಂಡಿಯಾ ರಾಸ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ದಾಂಡಿಯಾ ರಾಸ್ ಕಾರ್ಯಕ್ರಮದಲ್ಲಿ ಹಳೆಯ ಹಾಗೂ ಹೊಸ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯ ಅಂಗವಾಗಿ ಚುಕ್ಕಿ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಎಲ್ಲಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮೈಸೂರು ಅಸೋಸಿಯೇಷನ್ನ ಸದಸ್ಯೆ ಶ್ರೀಮತಿ ವೀಣಾ ಜೋಶಿ ಅವರು ಆಯೋಜಿಸಿದ್ದರು.

ವರದಿ : ಈಶ್ವರ ಎಂ. ಐಲ್

ಚಿತ್ರ,: ದಿನೇಶ್ ಕುಲಾಲ್

By suddi9

Leave a Reply

Your email address will not be published. Required fields are marked *