ದೆಹಲಿ: ಗಾಂಧಿ ಕುಟುಂಬದ ಮೇಲೆ ಉಗ್ರರ ಕಣ್ಣು ಬಿದ್ದಿದೆ. ವರುಣ ಗಾಂಧಿ ಅಷ್ಟೇ ಅಲ್ಲದೇ ಅವರ ಕುಟುಂಬದ ಇತರ ಸದಸ್ಯರಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹತ್ಯೆಗೂ ಯೋಜನೆ ರೂಪಿಸಲಾಗುತ್ತಿದೆ. ಕೇಂದ್ರ ಸಚಿವ ಕಮಲ್‌ನಾಥ್ ಕೂಡ ಉಗ್ರರ ಲಿಸ್ಟನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

Priyanka-Varun-Gandhi
ಕೇವಲ ಪಾಕಿಸ್ತಾನದ ಉಗ್ರರಷ್ಟೇ ಅಲ್ಲ, ಪಂಜಾಬಿನ ಉಗ್ರರು ಕೂಡ ವರುಣ್ ಹತ್ಯೆಯ ಹವಣಿಕೆಯಲ್ಲಿದ್ದಾರೆ. ಭೂಗತ ಪಾತಕಿ ಛೋಟಾ ಶಕೀಲ್ ಕಡೆಯ ಶೂಟರ್ ವರುಣ ಹತ್ಯೆ ಮಾಡುವ ಸಂಚನ್ನು ಮಾಡುತ್ತಿದ್ದಾರೆ ಎಂಬ ಬೆಚ್ಚಿಬೀಳಿಸುವ ಗುಪ್ತ ಮಾಹಿತಿ ಮುಂಬೈ ಪೋಲಿಸರಿಗೆ ಮಾಹಿತಿ ಲಭ್ಯವಾಗಿದೆ.
2009ರಲ್ಲಿ ವರುಣ್ ಮುಸ್ಲಿಂರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಉಗ್ರರ ಹಿಟ್ ಲಿಸ್ಟ್‌ನಲ್ಲಿ ಸೇರ್ಪಡೆಯಾಗಿದ್ದಾರೆ.
ವಿವಾದಾತ್ಮಕ ಹೇಳಿಕೆಗಾಗಿ ಅವರ ಮೇಲೆ ಕೇಸ್ ದಾಖಲಿಸಿ ಬಂಧಿಸಲಾಗಿತ್ತಾದರೂ, ನ್ಯಾಯಾಲಯ ಅವರನ್ನು ದೋಷ ಮುಕ್ತಗೊಳಿಸಿತ್ತು.
ಸುಲ್ತಾನಪುರ ಕ್ಷೇತ್ರದಿಂದ ಕಣಕ್ಕಿಳಿದಿರುವ ವರುಣಗೆ ಝಡ್ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ.

By suddi9

Leave a Reply

Your email address will not be published. Required fields are marked *