ಮೂಡುಬಿದರೆ: ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಕೊಲೆ ಪ್ರಕರಣದ ಮತ್ತೆ ನಾಲ್ಕು ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮೂಡುಬಿದರೆ ನ್ಯಾಯಾಲಯಕ್ಕೆ ಮಂಗಳವಾರ ಸಂಜೆ ಹಾಜರುಪಡಿಸಿದರು.

mbd_oct20_5 (2)

mbd_oct20_5 (1)
ಬಜ್ಪೆ ಕೆ.ಬಿ.ನಗರ ಮಯ್ಯದಿ ಕಂಪೌಂಡಿನ ಮಯ್ಯದಿ ಎಂಬವರ ಪುತ್ರ ಮುಸ್ತಾಫ (28), ಕಾವೂರು ಹಳೆಪೊಲೀಸ್ ಠಾಣೆಯ ಬಳಿಯ ಶಾಂತಿನಗರ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಮುಸ್ತಫ(28), ಬಜ್ಪೆ ಕಂದಾವರ ಸಿಂಧೂರ್ ಕಂಪೌಂಡ್ನ ಹಸನಬ್ಬ ಎಂಬವರ ಪುತ್ರ ಕಬೀರ್ (27) ಹಾಗೂ ಮೂಡುಬಿದಿರೆ ತೋಡಾರು ಹಿದಾಯತ್ ನಗರ ಅಬೂಬಕ್ಕರ್ ಎಂಬವರ ಪುತ್ರ ಮಹಮ್ಮದ ಶರೀಫ್ (35) ಮೂಲತಃ ಅಡ್ಡೂರಿನವನಾಗಿದ್ದು ಪ್ರಸ್ತುತ ತೋಡಾರಿನಲ್ಲಿ ನೆಲೆಸಿರುವ ಮಹಮ್ಮದ್ ಶರೀಫ್ ಈ ಪ್ರಕರಣದ ಪ್ರಧಾನ ಸೂತ್ರದಾರನೆಂದು ಪೊಲೀಸರು ತಿಳಿಸಿದ್ದಾರೆ. ಕೆಲಕಾಲ ವಿದೇಶದಲ್ಲಿದ್ದು ಬಳಿಕ ಗುಜಿರಿ ವ್ಯಾಪಾರ ಮತ್ತು ಲೈನ್ಸೇಲ್ ವೃತ್ತಿಯನ್ನು ಮಾಡುತ್ತಿದ್ದ. ಪ್ರಶಾಂತ್ ಹತ್ಯೆಗೆ ಬಳಸಿದ ಕತ್ತಿಯನ್ನು ಆರೋಪಿಗಳು ಹಂಡೇಲು ಬಳಿ ಪೊದೆಗೆ ಎಸೆದು ಹೋಗಿದ್ದು ಪೊಲೀಸರು ಅಲ್ಲಿಗೆ ಕರೆದೊಯ್ದು ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಕಾವೂರು ಮುಸ್ತಫಾ ಮತ್ತು ಬಜ್ಪೆ ಮುಸ್ತಫಾ ಪ್ರಶಾಂತ್ಗೆ ನೇರವಾಗಿ ಕಡಿದ ಆರೋಪಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳು ನೀಡಿದ ಮಾಹಿತಿ ಪ್ರಕಾರ ಇನ್ನೂ ಆರು ಮಂದಿ ಭಾಗಿಯಾಗಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇವರೆಲ್ಲರೂ ಪಿಎಫ್ಐನ ಸಕ್ರೀಯ ಕಾರ್ಯಕರ್ತರೆಂಬುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಮುಸ್ತಫಾ ಬಜ್ಪೆ, ಮುಸ್ತಫಾ ಕಾವೂರು , ಕಬೀರ್ ಕಂದಾವರ , ಶರೀಫ್ ತೋಡಾರು ನಾಲ್ವರು ಪ್ರಶಾಂತ್ ಕೊಲೆಯಲ್ಲಿ ನೇರ ಭಾಗಿಯಾದವರೆಂದು ತಿಳಿದುಬಂದಿದೆ. ಈ ನಾಲ್ವರನ್ನು ಸೇರಿ ಒಟ್ಟು 5 ಮಂದಿ ಪ್ರಕರಣದ ನೇರ ಆರೋಪಿಗಳನ್ನು ಪೊಲೀಸರು ಬಂಧಿಸಿದಂತಾಗಿದೆ. ಉಳಿದಂತೆ ಮೂವರು ಪರೋಕ್ಷವಾಗಿ ಭಾಗಿಯಾದವರೆಂದು ಗುರುತಿಸಿ ಬಂಧಿಸಲಾಗಿತ್ತು.
ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಾಲ್ಕು ಮಂದಿಯಲ್ಲಿ ಪ್ರಮುಖ ಆರೋಪಿ ಹನೀಫ್ ಆದ್ಯಪಾಡಿ ಒಬ್ಬನನ್ನು ಬಿಟ್ಟು ಉಳಿದವರನ್ನು ನ್ಯಾಯಾಂಗ ಬಂಧನ ವಿಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಿಕೊಡಲಾಗಿದೆ. ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಗಳನ್ನು ಅ.26ರವರೆಗೆ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ.

By Suddi9

Leave a Reply

Your email address will not be published. Required fields are marked *