ಬಜ್ಪೆ: ಬಜ್ಪೆ ವಿಮಾನ ನಿಲ್ದಾಣಕ್ಕೆ ದುಬೈಯಿಂದ ಬಂದಿಳಿದ ಯಾನಿಗಳಿಬ್ಬರಿಂದ ಬರೋಬ್ಬರಿ 1 ಕೆ.ಜಿ. ಚಿನ್ನ ವಶಪಡಿಸಿಕೊಂಡಿರುವ ಇಮಿಗ್ರೇಷನ್ ಅಧಿಕಾರಿಗಳು ಆರೋಪಿಗಳನ್ನು ನಿನ್ನೆ ಬಜ್ಪೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಇದರ ಮೌಲ್ಯ 34 ಲಕ್ಷ ರೂ. ಅಂದಾಜಿಸಲಾಗಿದೆ.

bajpe kalla 2

bajpe kalla
ಅಬ್ದುಲ್ ಲತೀಫ್ ಹಾಗೂ ಫಝಲ್ ರೆಹಮಾನ್ ಕಾಸರಗೋಡುಬಂಧಿತ ಆರೋಪಿಗಳು.
ಶನಿವಾರ ಬೆಳಗ್ಗೆ ದುಬೈಯಿಂದ ಮಂಗಳೂರಿಗೆ ಬರುವ ವಿಮಾನದಲ್ಲಿನ ಯಾನಿಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಆಗ ಆರೋಪಿಗಳು ಚಿನ್ನದ ಗಟ್ಟಿಯನ್ನು ಮಿಕ್ಸರ್ ಗ್ರೈಂಡರ್ನ ಒಳಗಡೆ ಕ್ವಾಯಿಲ್ ರೂಪದಲ್ಲಿ ಪರಿವರ್ತಿಸಿ ಕರಾಮತ್ ಮೆರೆದಿದ್ದರು. ಅಂತೆಯೇ ಆರೋಪಿಗಳನ್ನು ತನಿಖೆಗೊಳಪಡಿಸಿ ಬಜ್ಪೆ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಳೆದ ಎರಡು ವರ್ಷಗಳಿಂದ ಚಿನ್ನದ ಬೇಟೆ ನಡೆಯುತ್ತಲೇ ಇದ್ದು, ಅದು ಮತ್ತೆ ಮತ್ತೆ ಮುಂದುವರಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

 

By Suddi9

Leave a Reply

Your email address will not be published. Required fields are marked *