ಬಜಪೆ:ಬಜಪೆಯ ಸೈಂಟ್ ಜೋಸೆಫ್ ಪ್ರೌಢ ಶಾಲಾ ಬಾಲಕಿಯರ ತಂಡ ಕೊಡಗಿನಲ್ಲಿ ಜರಗಿದ ಮೈಸೂರು ವಿಭಾಗ ಮಟ್ಟದ ಪುಟ್ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದೆ.
ತಂಡದ ರಿತಿಕಾ ಹಾಗೂ ಜಿನ್ಸಿಲಾ ಅವರು ತಲಾ ಒಂದೊಂದು ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.
ಪ್ರಿನ್ಸಿಪಾಲ್ ಬ್ರದರ್ ಹೆಕ್ಟರ್ ಪಿಂಟೊ ತಂಡವನ್ನು ಅಭಿನಂದಿಸಿದ್ದಾರೆ.

