ಮುಂಬೈ: ಬಾಲಿವುಡ್ ದಿಗ್ಗಜೆಯರಾದ ನಟಿ ಸೊನಾಲಿ ಕುಲಕರ್ಣಿ ಹಾಗೂ ನೀತು ಚಂದ್ರ ಅವರು ಸ್ತನದ ಕ್ಯಾನ್ಸರ್ನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇದರ ಬಗ್ಗೆ ಅರಿವು ಮೂಡಿಸಿದರು. ಈ ಕಾರ್ಯಕ್ರಮ ಮುಂಬೈಯ ಬಿಇಎಸ್ಟಿ ಭವನದಲ್ಲಿ ನಡೆದಿದ್ದು, ಕ್ಯಾನ್ಸರ್ ರೋಗಿಗಳಲ್ಲಿ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸಿಪಿಎಎ ವತಿಯಿಂದ ಆಯೋಜಿಸಲಾಗಿತ್ತು.






