ಉಳ್ಳಾಲ; ಮದರಸಲ್ಲಿದ್ದ ಬಾಲಕನನ್ನು ನೆರೆಯ ವಿವಾಹಿತನೋರ್ವ ಪುಸಲಾಯಿಸಿ ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವ ಘಟನೆ ಇನೋಳಿ ಸಮೀಪದ ಮಲಾರು ಎಂಬಲ್ಲಿ ನಿನ್ನೆ ನಡೆದಿದ್ದು, ಕೊಣಾಜೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವನಾಗಿರುವುದರಿಂದ ಸ್ಥಳದಲ್ಲಿ ಕೆಲಕಾಲ ಬಿಗು ವಾತಾವರಣ ಉಂಟಾಯಿತು.
ಪಜೀರು ನಿವಾಸಿ ಅರುಣ್ ರಾಡ್ರಿಗಸ್(32) ಬಂಧಿತ.
ಘಟನೆ ವಿವರ:ಬೇರೆ ಊರಿನ 15ರ ಹರೆಯದ ಬಾಲಕ ಮಲಾರಿನ ಮದರಸದಲ್ಲಿದ್ದುಕೊಂಡು ಶಾಲೆ ಕಲಿಯುತ್ತಿದ್ದ. ಎರಡನೇ ಶನಿವಾರದ ಕಾರಣ ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಬಾಲಕ ಮದರಸದಲ್ಲೇ ಉಳಿದುಕೊಂಡಿದ್ದನು. ನಿನ್ನೆ ಮಧ್ಯಾಹ್ನ ವೇಳೆ ಮದರಸ ಸಮೀಪದ ನಿವಾಸಿ ಅರುಣ್ ರಾಡ್ರಿಗಸ್ ಮದರಸಕ್ಕೆ ಬಂದು ಅಲ್ಲಿದ್ದ ಮೊಯ್ಲಾರ್ ಅವರಲ್ಲಿ ಮಸೀದಿಯ ಸಂದರ್ಶನ ಮಾಡಬೇಕಿದೆ. ಅವಕಾಶಕ್ಕೆ ಮನವಿ ಮಾಡಿದ್ದ. ಅದರಂತೆ ಮೊಯ್ಲಾರ್ ಒಪ್ಪಿಗೆ ಸೂಚಿಸಿ ಅವರು ಹೊರ ಹೋಗಿದ್ದರು. ಈ ವೇಳೆ ಮದರಸದಲ್ಲಿದ್ದ ಬಾಲಕನನ್ನು ಅರುಣ್ ಪುಸಲಾಯಿಸಿ ಬೈಕಿನಲ್ಲಿ ಮನೆಗೆ ಕೊಂಡೊಯ್ದಿದ್ದ. ಮದರಸಕ್ಕೆ ಮೊಯ್ಲಾರ್ ಅವರು ವಾಪಸ್ಸಾಗುವಾಗ ಬಾಲಕ ನಾಪತ್ತೆಯಾಗಿದ್ದರಿಂದಾಗಿ ಗಾಬರಿಗೊಂಡು ಸುತ್ತಮುತ್ತ ಹುಡುಕಾಡಲು ಆರಂಭಿಸಿದ್ದರು. ಆದರೆ ಎಲ್ಲಿಯೂ ಪತ್ತೆಯಾಗದೇ ಇದ್ದಾಗ ನೆರೆಹೊರೆಯವರಲ್ಲಿ ಕೇಳಿದಾಗ ಬಾಲಕನನ್ನು ಅರುಣ್ ಬೈಕಿನಲ್ಲಿ ಕೊಂಡೊಯ್ದಿರುವ ವಿಚಾರ ಗೊತ್ತಾಯಿತು. ಕೂಡಲೇ ನಾಲ್ಕು ಮಂದಿ ಯುವಕರ ಜತೆಗೆ ಮೊಯ್ಲಾರ್ ಅವರು ಅರುಣ್ ಮನೆಗೆ ಹೋದಾಗ ಬಾಗಿಲು ಮುಚ್ಚಿತ್ತು. ಬಾಗಿಲು ಬಡಿದು ಬಾಲಕನ ವಿಚಾರಣೆ ನಡೆಸಿದಾಗ ಆತ ಟಿ.ವಿ ನೋಡುತ್ತಿರುವುದಾಗಿ ಅರುಣ್ ತಿಳಿಸಿದ್ದ. ಮೊಯ್ಲಾರ್ ಬಾಲಕನಿಗೆ ಮದರಸದಿಂದ ಹೊರಹೋಗಿದ್ದಕ್ಕೆ ಗದರಿಸಿ, ಅರುಣ್ ಮನೆಗೆ ಹೋಗಿರುವುದನ್ನು ಪ್ರಶ್ನಿಸಿದ್ದರು. ಮೊದಲಿಗೆ ಟಿ.ವಿ ನೋಡಲೆಂದು ಹೇಳಿದನಾದರೂ, ಗದರಿಸಿ ವಿಚಾರಿಸಿದಾಗ ನಡೆದ ವಿಷಯವನ್ನೆಲ್ಲಾ ತಿಳಿಸಿದ್ದನು. ತಿಂಡಿ, ಹಣ ಎಲ್ಲವನ್ನೂ ನೀಡುವುದಾಗಿ ಹೇಳಿ ಕೃತ್ಯ ಎಸಗಿದ್ದಾನೆಂದು ಬಾಲಕ ಹೇಳಿದ್ದಾನೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಯಿತು, ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ರಾಡ್ರಿಗಸ್ ವಿವಾಹಿತನಾಗಿದ್ದು, ಎರಡು ಮಕ್ಕಳ ತಂದೆಯಾಗಿದ್ದಾನೆ.

By suddi9

Leave a Reply

Your email address will not be published. Required fields are marked *