ಮುಂಬಯಿ, ಅ.09: ಅಂಧೇರಿ ಪಶ್ಚಿಮದ ಎಸ್.ವಿ.ರೋಡ್ನಇರ್ಲಾ  ಅಲ್ಲಿನ ಶ್ರೀ ಅದಮಾರು ಮಠಕ್ಕೆ ನಾಳೆ ಅ.11ನೇ ರವಿವಾರ ಬೆಳಿಗ್ಗೆ ಉಡುಪಿ ಶ್ರೀ ಪಲಿಮಾರು ಮಠಾಧೀಶಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಪಟ್ಟಾಧೀಶ ಶ್ರೀ ಈಶಪ್ರಿಯಾ ತೀರ್ಥ ಶ್ರೀಪಾದರು ಪಾದಾರ್ಪಣೆ ಗೈಯಲಿದ್ದಾರೆ ಎಂದು ಶ್ರೀ ಅದಮಾರು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.
Vdyadhisha Teerha Swamiji

D Eshapriya Teertha Swamiji
ಬೆಳಿಗ್ಗೆ 9.00 ಗಂಟೆಗೆ ಮಠಕ್ಕೆ ಆಗಮಿಸಲಿರುವ ಶ್ರೀಗಳನ್ನು ಭವ್ಯ ಸ್ವಾಗತ ಕೋರಲಾಗುವುದು. ಬಳಿಕ ಶ್ರೀಗಳು ಪೂಜೆಗಳನ್ನು ನಡೆಸಲಿದ್ದು, ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆನೆರವೇರಿಸಿ ತೀರ್ಥ ಪ್ರಸಾದ ವಿತರಿಸುವರು. ಬಳಿಕ ಉಭಯ ಸ್ವಾಮೀಜಿಗಳು ಆಶೀರ್ವಚಗೈದು ಫಲ- ಮಂತ್ರಾಕ್ಷೆಯನ್ನಿತ್ತು ಸದ್ಭಕ್ತರನ್ನು ಹರಸಲಿದ್ದಾರೆ. ಆ ಪ್ರಯುಕ್ತ ಮಹಾನಗರದಲ್ಲಿನ ಸರ್ವ ಭಕ್ತಾಭಿಮಾನಿಗಳು ಆಗಮಿಸಿ ಸರ್ವ ಪೂಜಾಧಿಗಳಲ್ಲಿ ಪಾಲ್ಗೊಂಡು ಮಹಾಪ್ರಸಾದ ಸ್ವೀಕರಿಸ ಬೇಕಾಗಿ ಶ್ರೀ ಅದಮಾರು ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ. ರಾಜೇಶ್ ರಾವ್ (ದೂರವಾಣಿ-26206623 ಅಥವಾ 9029631530) ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *