ಬೆಂಗಳೂರು, ಅ.14: ಬಿಲ್ಲವರ ಅಸೋಶಿಯೇಶನ್ ಬೆಂಗಳೂರು ಸಂಸ್ಥೆಯು ಇಂದಿಲ್ಲಿ ಸಂಜೆ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರನ್ನು ಸನ್ಮಾನಿಸಿ ಗೌರವಿಸಿತು.
DSC_3267

DSC_3269

DSC_3280

DSC_3286

DSC_3292
ಬಿಲ್ಲವರ ಅಸೋಶಿಯೇಶನ್ ಬೆಂಗಳೂರು ಇದರ ಬನ್ನೇರುಘಟ್ಟದಲ್ಲಿನ ಮಂದಿರದಲ್ಲಿ ಅಸೋಸಿಯೇಶನ್ನ ಅಧ್ಯಕ್ಷ ಎಂ. ವೇದಕುಮಾರ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ| ಭುಜಂಗ ಶೆಟ್ಟಿ ಅವರು ಜಯ ಸಿ.ಸುವರ್ಣ ಅವರಿಗೆ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ, ಸನ್ಮಾನ ಫಲಕವನ್ನಿತ್ತು ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬಿಲ್ಲವರ ಅಸೋಶಿಯೇಶನ್ ಬೆಂಗಳೂರು ಇದರ ಇನ್ನಿತರ ಪದಾಧಿಕಾರಿಗಳು, ಸದಸ್ಯರು ಹಾಗೂ ಗೌ| ಪ್ರ| ಕಾರ್ಯದರ್ಶಿ ಭಾಸ್ಕರ್ ಪೂಜಾರಿ, ಜೊತೆ ಕಾರ್ಯದರ್ಶಿ ರಾಜೇಶ್ ಕುಮಾರ್, ಕೋಶಾಧಿಕಾರಿ ಕೆ.ಡಿ ಪೂಜಾರಿ, ಸಂಘಟನಾ ಕಾರ್ಯದರ್ಶಿ  ಉದಯ ಕುಮಾರ್, ಮಹಿಳಾ ವಿಭಾಗಧ್ಯಕ್ಷೆ ಭಾನುಮತಿ ಎಸ್.ಸಾಲ್ಯಾನ್, ಸೇವಾದಳದ ಮುಖ್ಯಸ್ಥ ಗೋಪಾಲ್ ಪೂಜಾರಿ ಹಾಗೂ ಬಿಲ್ಲವರ ಅಸೋಶಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಉದ್ಯಮಿ ದಿಲೀಪ್ ಮೂಲ್ಕಿ, ಭಾರತ್ ಬ್ಯಾಂಕ್ನ ನಿರ್ದೇ ಶಕರುಗಳಾದ ಚಂದ್ರಶೇಖರ ಎಸ್. ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಉಪ ಪ್ರಧಾನ ಪ್ರಬಂಧಕ ಮೋಹನ್ದಾಸ್ ಹೆಜ್ಮಾಡಿ ಮಾಜಿ ನಿರ್ದೇಶಕರುಗಳಾದ ಎನ್.ಎಂ ಸನೀಲ್, ಉಪಸ್ಥಿತರಿದ್ದು ಶುಭ ಕೋರಿದರು.

ಮಂಜುನಾಥ ಶಾಂತಿ ಪೂಜೆ ನೆರವೇರಿಸಿ ಮಹಾರತಿಗೈದು ಜಯ ಸಿ.ಸುವರ್ಣ ಅವರಿಗೆ ಮಹಾಪ್ರಸಾದ, ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಮರಣಿಕೆಯನ್ನಿತ್ತು ಅನುಗ್ರಹಿಸಿದರು.

ಚಿತ್ರ ವರದಿ : ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *