• ಮುಂಬಯಿ: ಹನಿಗವನ ನವ್ಯಕ್ಕೆ ಹತ್ತಿರವಾದದ್ದು. ಚಿಕ್ಕಪದ್ಯಗಳು ಹಳೆ ಕಾಲದಿಂದಲೂ ಇದ್ದು ಸಾಂಪ್ರದಾಯಕವಾಗಿ ಬಂದಿವೆ. ಕಾವ್ಯದ ಪರಿಣಾಮ ಗಾತ್ರದಲ್ಲಿ ಅಲ್ಲ ಬದಲಾಗಿ ಕವಿತೆಯ ಆತ್ಮದಲ್ಲಿದೆ. ಹನಿಗವನಕ್ಕೆ ಪ್ರಾಸವೇ ಬಂಡವಾಳ ಆಗಿರುತ್ತದೆ. ಅನಿರೀಕ್ಷಿತವಾದ ಪ್ರಾಸಗಳಿದ್ದರೆ ಅದು ಹೆಚ್ಚು ಪರಿಣಾಮಕಾರಿ ಎಂದು ನಾಡಿನ ಹೆಸರಾಂತ ಕವಿ, ಸಾಹಿತಿ ಹೆಚ್. ದುಂಡಿರಾಜ್ ಅಭಿಪ್ರಾಯ ಪಟ್ಟರು.
    ಅವರು ಅ. 2 ರಂದು ಶುಕ್ರವಾರ  ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್ನ ವಿದ್ಯಾನಗರಿಯ   ಜೆ.ಪಿನಾಯಕ್ ಸಭಾಭವನದಲ್ಲಿ ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯ, ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಇವುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಚಿಂತನ ಮತ್ತು ಮೂರು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ದುಂಡಿರಾಜ್ ಮಾತನಾಡಿದರು.
  • Kannada Dept Sahitya Chitana-A4 (1)
  • Kannada Dept Sahitya Chitana-A3

Kannada Dept Sahitya Chitana-B4

Kannada Dept Sahitya Chitana-1

Kannada Dept Sahitya Chitana-3

Kannada Dept Sahitya Chitana-4

Kannada Dept Sahitya Chitana-5

Kannada Dept Sahitya Chitana-6

Kannada Dept Sahitya Chitana-7

Kannada Dept Sahitya Chitana-8

Kannada Dept Sahitya Chitana-11

Kannada Dept Sahitya Chitana-13

Kannada Dept Sahitya Chitana-14

Kannada Dept Sahitya Chitana-15

Kannada Dept Sahitya Chitana-A1

Kannada Dept Sahitya Chitana-A2

 

Kannada Dept Sahitya Chitana-A4 (1)

 

Kannada Dept Sahitya Chitana-B2

  • `ಗೋಕುಲ’ ಮಾಸಿಕದ ಸಂಪಾದಕ ಡಾ| ವ್ಯಾಸರಾಯ ನಿಂಜೂರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ನನ್ನ ಬಗೆಗಿನ ಕೃತಿ
    ಹನಿಗವನ ಪ್ರಕಾರಕ್ಕೆ ಸಿಕ್ಕ ದೊಡ್ಡ ಗೌರವವಾಗಿದೆ. ನಾನೂ ಗ್ರಂಥ ಭಾಗ್ಯಕ್ಕೆ ಪಾತ್ರನಾಗಿರುವುದು ಅಭಿಮಾನವೆಣಿಸಿದೆ ಎಂದರು. ಹನಿಗವನಗಳ ರಸವನ್ನುಣ್ಣಿಸಿ ಹಾಸ್ಯದ ಹೊನಲನ್ನೇ ಸೃಷ್ಟಿಸಿದರು. ಕನ್ನಡ ವಿಭಾಗ ಮುಂಬಯಿ ಮುಂಬಯಿ ವಿಶ್ವ ವಿದ್ಯಾಲಯದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ  ಅಧ್ಯಕ್ಷತೆ ವಹಿಸಿದ್ದರು.  ಅವಳಿ ಕಾರ್ಯಕ್ರಮದಲ್ಲಿ ಸಮೀರ ಕೃಷ್ಣ ದೇಶಪಾಂಡೆ, ಪತ್ರಕರ್ತರ ವೇದಿಕೆ (ರಿ.) ಬೆಂಗಳೂರು ಇದರ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರ್, ಡಾ| ಸಂಜೀವ ಕುಲಕರ್ಣಿ  ಮತ್ತು ಸುದೀಂದ್ರ ಕುಲಕರ್ಣಿ  ಉಪಸ್ಥಿತರಿದ್ದರು.
  • ಈ ಸಂದರ್ಭದಲ್ಲಿ ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ  ರಚಿತ `ಕನ್ನಡ ಕಾರಣ ಪುರುಷ-ರಾ.ಹ.ದೇಶಪಾಂಡೆ’ ಕೃತಿಯನ್ನು ಡಾ| ವ್ಯಾಸರಾಯ ನಿಂಜೂರು, ಡಾ| ಜಿ.ಎನ್ ಉಪಾಧ್ಯ ರಚಿತ `ವಿನೋದ ಸೌಧದ ಸಾಹಿತಿ ಹೆಚ್. ದುಂಡಿರಾಜ್’ ಕೃತಿಯನ್ನು ಸಾಹಿತಿ ಮತ್ತು ಸಂಶೋಧಕ ವಿ.ಗ.ನಾಯಕ ಮತ್ತು `ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’ ಕೃತಿಯನ್ನು ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ ಹಾಗೂ ಪತ್ರಕರ್ತೆ  ಸಂಶೋಧಕಿ ಡಾ| ಸೀತಾಲಕ್ಷ್ಮೀ ಕರ್ಕಿಕೋಡಿ ಮಂಗಳೂರು  ರಚಿತ `ಹುಟ್ಟೂರಿ  ವೃತ್ತಾಂತದ ಪ್ರೊ. ವಿ.ಬಿ ಆರ್ತಿಕಜೆ’ ಕೃತಿಯನ್ನು ಡಾ|ಜಿ.ಎನ್ಉಪಾಧ್ಯ ಬಿಡುಗಡೆ ಗೊಳಿಸಿದರು.
  • ಡಾ| ವ್ಯಾಸರಾಯ ನಿಂಜೂರು, `ಅಕ್ಷಯ’ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಹಾಗೂ ಡಾ| ಸೀತಾಲಕ್ಷ್ಮೀ ಕರ್ಕಿಕೋಡಿ ಕೃತಿಗಳನ್ನು ಕ್ರಮವಾಗಿ ಪರಿಚಯಿಸಿದರು. ಬಳಿಕ ನಡೆಸಲ್ಪಟ್ಟ ಸಾಹಿತ್ಯ ಚಿಂತನ ಕಾರ್ಯಕ್ರಮದಲ್ಲಿ ಡಾ| ವ್ಯಾಸರಾಯ ನಿಂಜೂರು, ವಿ.ಗ.ನಾಯಕ, ಪತ್ರಕರ್ತ ಡಾ| ಸೀತಾಲಕ್ಷ್ಮೀ ಕರ್ಕಿಕೋಡಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  ಇದೇ ಶುಭಾವಸರದಲ್ಲಿ ಎಂ.ಪಿ .ಲ್ ಪದವಿಧರ ವಿದುಷಿ ವೀಣಾ ಶಾಸ್ತ್ರಿ, ಸುಜ್ಞಾನಿ ಬಿರಾದಾರ, ಅನಸೂಯ ಗಲಗಲಿ, ಶೈಲಜಾ ಹೆಗಡೆ, ಅಮರನಾರಯಣಕರ್ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು 2012ನೇ ಸಾಲಿನ ಅತ್ಯುತ್ತಮ ಕೃತಿಗೆ ಪಾತ್ರರಾದ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರನ್ನು ಗೌರವಿಸಲಾಯಿತು.
  • ಡಾ| ವ್ಯಾಸರಾಯ ನಿಂಜೂರು ಮಾತನಾಡಿ ರಾ.ಹ. ದೇಶಪಾಂಡೆ ಅವರ ಪುಸ್ತಕ ಕುಲಕರ್ಣಿ  ಅವರ ವ್ಯಕ್ತಿತ್ವ ಕನ್ನಡದ ಕೈಂಕರ್ಯಕ್ಕಾಗಿ ಟೊಂಕ ಕಟ್ಟಿದವರು. ಅವರನ್ನು ಯಾರು ಗುರುತಿಸಿರದಿರುವುದು ಶೋಚನೀಯ. ಸಾಹಿತಿಗಳಿಗೆ ಸ್ಫೂರ್ತಿ  ಆಗಿದ್ದು, ಕನ್ನಡದ ಕಾರಣ ಪುರುಷರು. ಅವರನ್ನು ನೆನೆಹುದೆಂದರೆ ಬದುಕಿನ ಸುರ್ಯೋದಯ ಮರೆಯುವುದೆಂದರೆ ಅಸ್ತಮಾನ. ಕೃತಿಕಾರರಿಗೆ ಸಮಗ್ರ ಕನ್ನಡಿಗರ ಅಭಿನಂದನೆ ಸಲ್ಲಿಸುತ್ತಿದ್ದೇನೆಎಂದರು. ನಾನು ಗಂಭೀರ ಕವನವನ್ನು ಅಸ್ವಾಧಿಸುವವ. ಹನಿಗವನ ನಮ್ಮ ಜನರ ಹೃದಯದ ಭಾಷೆಯಾಗಿ ಬೆಳೆಯುತ್ತಿದೆ. ಜಾನಪದವೇ ಹನಿಗವನದ ಮೂಲ. ಮುಚ್ಚು ಬಿಚ್ಚುವಿಕೆಯ ಕವನವೇ ಮಹತ್ವದ ಕಾವ್ಯವಾಗುತ್ತದೆ ಎಂದು
    ವಿ.ಗ.ನಾಯಕ ತಿಳಿಸಿದರು. ವಿನೋಧಸಾಧ ಬಗ್ಗೆಮಾತನಾಡಿ ನವೋದಯದ ಪಂಡಿತರಲ್ಲಿ ಸಹೃದಯಗುಣ ಮಾಯವಾಗುತ್ತಿದೆ. ಸಾಹಿತ್ಯ
    ಪರಿಚಯಿಕೆಯ ಕೆಲಸಕ್ಕೆ ಡಾ| ಜಿ.ಎನ್.ಉಪಾಧ್ಯ ಮಾದರಿ. ದುಂಡಿರಾಜರ ಸಾಹಿತ್ಯದಲ್ಲಿ ಒಳ ಮನಸ್ಸನ್ನು ತಟ್ಟುವ ತಾಕತ್ತು ಇದೆ.
  • ಸರ್ವಜ್ಞನ  ತ್ರಿಪತಿಗಳಂತೆ ಅವರ ಸಾಹಿತ್ಯ ಮೂಡಿದೆ ಎಂದು ಈಶ್ವರ ಅಲೆವೂರು ಅಭಿಪ್ರಾಯ ವ್ಯಕ್ತ ಪಡಿಸಿದರು. ಸಂಘಟಿತರಾದರೆ ಮಾತ್ರ ನಾವು ಕನ್ನಡ ಕಟ್ಟಿ ಬೆಳೆಸಬಹುದು. ಸೋತು ಹೋದ ಕನ್ನಡ ಗೆಲ್ಲುವಂತಾಗಲಿ. ಸಿರಿಗನ್ನಡಂ ನೆಲೆಗೆ ಇಂತಹ ಮೇಧಾವಿಗಳು ಮರೆಯಾಗದಿರಲಿ ಅವರ ನೆನಪಿನ ಈ ಕೃತಿ ಅಧ್ಯಯನಕ್ಕೆ ಯೋಗ್ಯವಾಗಿದೆಎಂದು ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ ಅನುಭವ ಹಂಚಿಕೊಂಡರು. ರಾ.ಹ. ದೇಶಪಾಂಡೆ ಅವರ ಅದಮ್ಯ ಉತ್ಸಾಹದಿಂದ ಈ ಕೃತಿ ಬೆಳಕು ಕಾಣುತ್ತಿದೆ. ಇದು ಸಾರಸ್ವತ ಲೋಕದ
    ಹಿರಿಮೆಯಾಗಿದೆ ಎಂದು ಡಾ| ಸಂಜೀವ ಕುಲಕರ್ಣಿ  ನುಡಿದರು.
  • ಮಹಾರಾಷ್ಟ್ರದ ಸ್ಥಾನಮಾನಕ್ಕೆ ಮೌಲ್ಯಯುತ ಕೃತಿ ಇದಾಗಿದೆ. ಡಾ| ಜಿ.ಎನ್.ಉಪಾಧ್ಯ ಮಹರಾಷ್ಟ್ರ ಕರ್ನಾಟಕದ ಸಾಂಸ್ಕೃತಿಕ ಬಾಂಧವ್ಯ ರೂಪಿಸಿದ್ದಾರೆ. ಉಭಯ ರಾಜ್ಯಗಳ ಭೇದ ಭಾವದ ಅಡಿಪಾಯಗಳನ್ನು ಭದ್ರವಾಗಿಸಿ ಕೃತಿಯಲ್ಲಿರೂಪಿಸಿದ್ದಾರೆ. ಸಂಸ್ಕೃತಿ ಚಿಂತನಾ ಕೇಂದ್ರ ಕಾಳಜಿ ಇಲ್ಲಿ ಕಾಣಬಹುದು ಎಂದು ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ನುಡಿದರು. ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷೀಯ ಭಾಷಣದಲ್ಲಿ ಮುಂಬಯಿಯಲ್ಲೇ ಅತೀ ಹೆಚ್ಚು ಅಕ್ಸಿಜನ್ವುಳ್ಳ ಕ್ಯಾಂಪಸ್ ನಮ್ಮದಾಗಿದ್ದು, ಪುಟ್ಟಗೂಡು ಆಗಿರುವ ಈ ವಿಶ್ವ ವಿದ್ಯಾಲಯದ ಕನ್ನಡ ವಿಭಾಗ ಪ್ರಸಾರ ಪ್ರಚಾರದಲ್ಲೂ ಮಹಾಸೌಧ ಆಗಿದೆ. ಕನ್ನಡ ಪದವಿಗಳ ಪಾತ್ರಕ್ಕೆ ಅನೇಕರು ಪಾತ್ರವಾಗಿದ್ದು ಶೀಘ್ರವೇ  ಶತಸಂಖ್ಯೆ ಪೂರ್ಣಗೊಳಿಸಲಿದೆ ಎಲ್ಲೆಡೆ ಕನ್ನಡ ವಿಭಾಗ ಕ್ಷೀಣವಾದರೆ ನಮ್ಮ ವಿಭಾಗ ದೃಢವಾಗುತ್ತಿದೆ ಎಂದರು. 
  • ವಿದುಷಿ ವೀಣಾ ಶಾಸ್ತ್ರಿ ಗೀತಾ ಅವರ ಪ್ರಾರ್ಥನೆಯೊಂದಿಗೆ  ರಮಾ ಉಡುಪ ಸ್ವಾಗತಿಸಿ  ,ಚಂದ್ರ ಜೋಶಿ ಧನ್ಯವಾದವಿತ್ತರು ಶ್ಯಾಮಲಾ ಪ್ರಕಾಶ್  ಕಾರ್ಯಕ್ರಮ ನಿರ್ವಹಿಸಿದರು. 

ವರದಿ: ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *