ಬಜಪೆ: ಹಿರಿಯ ನಾಗರಿಕರ ನೋಂದಣಿ, ಕಟ್ಟಡ ಹಾಗೂ ಇತರ ಕಾರ್ಮಿಕರ ನೋಂದಣಿ, ಕೇಂದ್ರ ಸರಕಾರ ವಿಮಾ ಯೋಜನೆಗಳಿಗೆ ನೋಂದಣಿ, ಉಚಿತ ವೈದ್ಯಕೀಯ ತಪಾಸಣೆ, ಉಚಿತ ನೇತ್ರ ತಪಾಸಣೆ, ಉಚಿತ ರಕ್ತ ವರ್ಗಿಕರಣ ಹಾಗೂ ಇನ್ನಿತರ ಸರಕಾರದ ಯೋಜನೆಗಳಿಗೆ ಸಂಬಂದಿಸಿ ಫಲಾನುಭವಿಗಳ ಆಯ್ಕೆ … ಮುಂತಾದ ನಾನಾ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಮುಚ್ಚೂರು ಶ್ರೀದುರ್ಗ ಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ದ.ಕ.ಜಿಲ್ಲಾ ಪಂಚಾಯಿತಿ ಎಡಪದವು ಕ್ಷೇತ್ರ ವ್ಯಾಪ್ತಿಯ 9ನೇ ಗ್ರಾಮಸ್ನೇಹಿ ಕಾರ್ಯಕ್ರಮ ಮತ್ತೆ ಯಶಸ್ವಿಯಾಗಿ ಸಂಯೋಜನೆಗೊಂಡು ವ್ಯಾಪರ ಪ್ರಶಂಸೆಗೆ ಪಾತ್ರವಾಗಿದೆ.
ಜಿಲ್ಲಾ ಪಂಚಾಯಾತಿ ಸದಸ್ಯ ಜನಾರ್ದನ ಗೌಡ ಅವರ ನೇತೃತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ನೋಡೆಲ್ ಅಧಿಕಾರಿಯಾಗಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಸಮನ್ವಯಾಧಿಕಾರಿಯಾಗಿ ಲೋಕೇಶ್ ಉಪಸ್ಥಿತರಿದ್ದರು.
ಈವರೆಗೂ ಓಂದು ಸಾವಿರದಷ್ಟು ಕಾರ್ಮಿಕರ ಹಗೂ 800ರಷ್ಟು ಹಿರಿಯ ನಾಗರಿಕರ 200ರಷ್ಟು ವಿಕಲಚೇತನರ ನೋಂದಣಿಯಾಗಿ ಗುರುತಿನ ಚೀಟಿ ವಿತರಿಸಿದೆ. ಎಲ್ಲಾ ಇಲಾಖೆಗಳ ಸಹಕಾರವನ್ನು ಗ್ರಾಮೀಣ ಜನರಿಗೆ ಸದುಪಯೋಗವಾಗುವ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. ಅದ್ಯಾಯನ ರೀತಿಯಲ್ಲಿ ಗ್ರಾಮಸ್ನೇಹಿ ಸಂಘಟಿಸಿ ಯಶಸ್ವಿ ಗೊಳಿಸುವಲ್ಲಿ ಜಿ.ಪಂ.ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಂ.ಪಂ. ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿಗಳು ಪೂರ್ಣ ಸಹಕಾರ ನೀಡಿದ್ದಾರೆ. ಹತ್ತನೇ ಗ್ರಾಮಸ್ನೇಹಿಯನ್ನು ವಿಭಿನ್ನ ರೀತಿಯಲ್ಲಿ ಸಂಘಟಿಸುವ ಯೋಜನೆ ಇದೆ.
ಮುಚ್ಚೂರು ಗ್ರಾ.ಪಂ.ಅಧ್ಯಕ್ಷ ವೀರಪ್ಪ ಗೌಡ, ತೆಂಕ ಎಡಪದವು ತೆಂಕ ಎಡಪದವು ಗ್ರ.ಪಂ.ಅಧ್ಯಕ್ಷೆ ಮಾಲತಿ, ಲಯನ್ಸ್ ವಲಯಾಧ್ಯಕ್ಷ ಓಸ್ವಾಲ್ಡ್ ಡಿಸೋಜಾ, ಮುಚ್ಚೂರು ಲಯನ್ಸನ ಉಪಾಧ್ಯಕ್ಷ ಗನೇಶ್ ಶೆಟ್ಟಿ, ಪ್ರಗತಿ ಯುವಕ ಮಂಡಲದ ಅಧ್ಯಕ್ಷ ನಾರಾಯಣ ಪಡುಪೆರಾರ ಗ್ರಾ.ಪಂ.ಪಿ.ಡಿ.ಒದಿನೇಶ್, ದೇವಳದ ಅರ್ಚಕ ರಘುಪತಿ ಭಟ್, ಕೊಂಪದವು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿರಾಗ್ ಅವರುಗಳು ಪಾಲ್ಗೊಂಡಿದ್ದರು.
ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ನೇತೃತ್ವದಲ್ಲಿ ವೈದ್ಯಕೀಯ ಹಾಗೂ ನೇತ್ರ ತಪಾಸಣೆ, ರಕ್ತ ವರ್ಗಿಕರಣ ಶಿಬಿರ ಜರುಗಿದ್ದು ಸಾರ್ವಜನಿಕ ಸಂವಹಣಾಧಿಕಾರಿ ಹರ್ಬಟ್ ಉಪಸ್ಥಿತರಿದ್ದರು. ಉಚಿತ ಇಸಿಜಿ, ಉಚಿತ ಕ್ಯಾಟರ್ಯಾಕ್ಟ್ ಚಿಕಿತ್ಸೆ, ಉಚಿತ ಕನ್ನಡಕ, ಗ್ರೀನ್ ಕಾರ್ಡ್ ವ್ಯವಸ್ಥೆ ಕಲ್ಪಿಸಿಯಾಗಿತ್ತು.
ಮುಚ್ಚೂರು ಗ್ರಾ.ಪಂ.ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಯಶವಂತ ಬಿ.ಕಾರ್ಯಕ್ರಮ ಸಂಯೋಜಿಸಿದರು.

