ಬಜ್ಪೆ: ಕ್ರೈಸ್ತ ಧರ್ಮಕ್ಕೆ ಸೇರುವಂತೆ ಸ್ಥಳೀಯರಿಗೆ ಆಮಿಷವೊಡ್ಡಿ ಕರಪತ್ರಗಳನ್ನು ಹಂಚಿ ಹಿಂದೂ ದೇವರನ್ನು ನಿಂದಿಸುತ್ತಿದ್ದಾರೆಂದು ಆರೋಪಿಸಿ ಇಬ್ಬರ ವಿರುದ್ಧ ಬಜ್ಪೆ ಸಮೀಪದ ಕಜೆಪದವಿನ ಸ್ಥಳೀಯರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿಗಳನ್ನು ಸುರತ್ಕಲ್ನ ಕಂಪೆನಿಯೊಂದರ ಉದ್ಯೋಗಿ ಫ್ರಾನ್ಸಿಸ್(40) ಹಾಗೂ ಕಿನ್ನಿಕಂಬಳ ನಿವಾಸಿ, ಗುರುಪುರ ಕೈಕಂಬದಲ್ಲಿ ಪೋಸ್ಟ್ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕಿನ್ನಿಕಂಬಳ ನಿವಾಸಿ ಪೀಟರ್ ಕುವೆಲ್ಲೋ(35) ಗುರುತಿಸಲಾಗಿದ್ದು, ಇವರ ವಿರುದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
23 bajpe 2...

23 bajpe 1...
ಘಟನೆಯ ವಿವರ: ಆರೋಪಿಗಳು ಕಳೆದ ಎರಡು ವಾರಗಳಿಂದ ಕಜೆಪದವು ಎಂಬಲ್ಲಿಗೆ ಬಂದು, ಹಿಂದೂ ದೇವರಿಗೆ ಯಾವುದೇ ಶಕ್ತಿ ಇಲ್ಲ, ಅವರು ನಿಮ್ಮ ಕಷ್ಟವನ್ನು ಪರಿಹರಿಸುವುದಿಲ್ಲ. ಏಸುವನ್ನು ನಂಬಿ ನಿಮ್ಮೆಲ್ಲಾ ಕಷ್ಟ ಪರಿಹಾರವಾಗುತ್ತದೆ ಎಂದೆಲ್ಲಾ ತಿಳಿಸಿ, ಹಣದ ಆಮಿಷವೊಡ್ಡಿ ಹಿಂದೂ ದೇವರನ್ನು ನಿಂದಿಸುತ್ತಿದ್ದರೆಂದು ಸ್ಥಳೀಯರು ಆರೋಪಿಸಿದ್ದಾರೆ.

ಇವರ ಮರ್ಮ ಅರಿಯದ ಸ್ಥಳೀಯರು ಅವರನ್ನು ಸಂತೋಷದಿಂದ ಎದುರುಗೊಂಡು, ಅವರನ್ನು ಸತ್ಕರಿಸುತ್ತಿದ್ದರೆಂದು ಹೇಳಲಾಗಿದೆ. ಇವರಲ್ಲಿ ಕ್ರೈಸ್ತ ಧರ್ಮದ ಪ್ರಲೋಬನೆಗೈದು ತನ್ನ ಧರ್ಮಕ್ಕೆ ಸೇರುವಂತೆ ಒತ್ತಡ ಹೇರುತ್ತಿದ್ದರೆಂದು ಹೇಳಲಾಗಿದೆ.
ಸಾವಯವ ಕೃಷಿ, ಆರೋಗ್ಯ ಮುಂತಾದ ಮುಖಪುಟವಿರುವ ಪುಸ್ತಕವನ್ನು ಹಿಡಿದು, ಅದರೊಳಗಡೆ ಕ್ರೈಸ್ತ ಧರ್ಮದ ಪ್ರಚಾರದ ಒಕ್ಕಣೆಯಿರುವ ಬರಹ ಇತ್ತದೆಂದು ಸ್ಥಳೀಯರು ತಿಳಿಸಿದ್ದಾರೆ. ಅದರಲ್ಲಿ ಒಂದು ಪುಸ್ತಕ `ಎಚ್ಚರ’ ಎನ್ನುವ ಶಿರೋನಾಮೆ ಹೊಂದಿದ್ದು, ಇಂಥದ್ದೇ ಹಲವಾರು ರೀತಿಯ ಕರಪತ್ರಗಳನ್ನು ಹಂಚಿದ್ದಾರೆಂದು ತಿಳಿದುಬಂದಿದೆ.

ಕಳೆದ ಎರಡು ವಾರದಿಂದ ಇವರು ಕಜೆಪದವಿಗೆ ಬರುತ್ತಿದ್ದು, ಯಾರಿಗೂ ಇವರ ಷಡ್ಯಂತ್ರದ ಅರಿವಿಗೆ ಬಂದಿರಲಿಲ್ಲ. ಆದರೆ ಮೊನ್ನೆ ಸ್ಥಳೀಯ ನಿವಾಸಿ ಆಶಾರಾಣಿ ಎಂಬವರ ಮನೆಗೆ ಬಂದು ಕ್ರೈಸ್ತ ಧರ್ಮದ ಪ್ರಚಾರ ಆರಂಭಿಸಿದ್ದಾರೆ. ಇದರ ಮಾಹಿತಿ ಪಡೆದ ಸ್ಥಳೀಯರು ವಿಚಾರಣೆ ನಡೆಸಿ ಬಜ್ಪೆ ಠಾಣೆಗೆ ಒಪ್ಪಿಸಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ

By suddi9

Leave a Reply

Your email address will not be published. Required fields are marked *