ಮಂಗಳೂರು ಸೆಪ್ಟೆಂಬರ್ 08: ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇದರ ವತಿಯಿಂದ ಇದೇ ಬರುವ ಆದಿತ್ಯವಾರ ತಾ 13.09.2015 ರಂದು ಮಂಗಳೂರು ಕೊಡಿಯಾಲ್ಬೈಲ್ ಶಾರದಾ ವಿದ್ಯಾಲಯ ಕಾಲೇಜಿನ ಧ್ಯಾನ ಮಂದಿರ ಸಭಾಂಗಣದಲ್ಲಿ ಸಂಜೆ 6 ಘಂಟೆಗೆ ‘ಸಂಗೀತ್ ಸಾಂಜ್’ ಎಂಬ ಉತ್ಕೃಷ್ಟ ಮಟ್ಟದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಮ್ಮ ದೇಶದ ಉತ್ಕೃಷ್ಟ ಮಟ್ಟದ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಿರುವ ಯುವ ಗಾಯಕರಾದ ಪುಣೆಯ ಶ್ರೀ ರಾಮಾಕಾಂತ್ ಗಾಯಕ್ವಾಡ್ ರವರು ಕಾರ್ಯಕ್ರಮವನ್ನು ನೀಡಲಿದ್ದಾರೆ. ಹಾರ್ಮೋನಿಯಮ್ ನಲ್ಲಿ ಶ್ರೀ ನರೇಂದ್ರ ಎಲ್.ನಾಯಕ್ ಹಾಗೂ ತಬ್ಲಾದಲ್ಲಿ ಬೆಂಗಳೂರಿನ ಶ್ರೀ ಕೇಶವ್ ಜೋಶಿ ಅವರು ಸಹಕರಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕಾರ್ಪೋರೇಷನ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಹಾಗೂ ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆ ಪ್ರಾಯೋಜಕರಾಗಿ ಪ್ರೋತ್ಸಾಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶಾವಕಾಶವಿದ್ದು, ಸಂಗೀತಾಸಕ್ತರು ಇದರ ಪ್ರಯೋಜನ ಪಡೆಯಬೇಕಾಗಿ ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷರಾದ ಉಸ್ತಾದ್ ರಫೀಕ್ ಖಾನ್ ಅವರು ಕೋರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷರಾದ ಶ್ರೀ ನರೇಂದ್ರ.ಎಲ್.ನಾಯಕ್, ಕಾರ್ಯದಶರ್ಿ ರಾಧಾಕೃಷ್ಣ ರಾವ್ ಪೆರೋಡಿ, ಖಚಾಂಚಿ ಶ್ರೀಮತಿ ಉಷಾಪ್ರಭಾ ಎನ್ ನಾಯಕ್ ಅವರು ಉಪಸ್ಥಿತರಿದ್ಧರು.

